KANNADA

Daily GK Quiz: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ ಯಾವುದು?

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌ ಪ್ರಶ್ನೆ 1: ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧಿಶೆ ಯಾರು..? ಉತ್ತರ: ಫಾತಿಮಾ ಬಿವಿ ಪ್ರಶ್ನೆ 2: ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ..? ಉತ್ತರ: ಎಂ.ಎಸ್.ಸ್ವಾಮಿನಾಥನ್ ಪ್ರಶ್ನೆ 3: ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು? ಉತ್ತರ: ಆಂಡಯ್ಯ ಪ್ರಶ್ನೆ 4: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ ಯಾವುದು? ಉತ್ತರ: 2008 ಅಕ್ಟೋಬರ್ 31 ಪ್ರಶ್ನೆ 5: ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ: ಆಲೂರು ವೆಂಕಟರಾಯರು ಇದನ್ನೂ ಓದಿ: Daily GK Quiz: ಸೂರ್ಯೋದಯದ ನಾಡು ಎಂದು ಪ್ರಸಿದ್ಧಿಯಾಗಿರುವ ದೇಶ ಯಾವುದು? ಪ್ರಶ್ನೆ 6: ಕರ್ನಾಟಕದ ಗಾಂಧಿ ಎಂದು ಹೆಸರಾದವರು ಯಾರು? ಉತ್ತರ: ಹರ್ಡೇಕರ್ ಮಂಜಪ್ಪ ಪ್ರಶ್ನೆ 7: ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ ಯಾವುದು? ಉತ್ತರ: ಕವಿರಾಜಮಾರ್ಗ ಪ್ರಶ್ನೆ 8: ಕರ್ನಾಟಕದ ಮೊದಲ ಮುಖ್ಯ ಮಂತ್ರಿ ಯಾರು? ಉತ್ತರ: ಕೆ.ಚೆಂಗಲರಾಯ ರೆಡ್ಡಿ ಪ್ರಶ್ನೆ 9: ಕರ್ನಾಟಕ ಏಕೀಕರಣಗೊಂಡ ವರ್ಷ ಯಾವುದು? ಉತ್ತರ: 1956 ಪ್ರಶ್ನೆ 10: ಕನ್ನಡದ ಮೊಟ್ಟಮೊದಲ ಶಾಸನ ಯಾವುದು? ಉತ್ತರ: ಹಲ್ಮಿಡಿ ಶಾಸನ ಇದನ್ನೂ ಓದಿ: Daily GK Quiz: ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರೀಯ ಉದ್ದಾನವನ ಯಾವುದು? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.