KANNADA

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 40ಕ್ಕೂ ಹೆಚ್ಚು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ!

Bomb Threat News : ರಾಷ್ಟ್ರ ರಾಜಧಾನಿ ದೆಹಲಿಯ 40ಕ್ಕೂ ಹೆಚ್ಚು ಶಾಲೆಗಳ ಆಡಳಿತ ಮಂಡಳಿಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿವೆ. ಪರಿಣಾಮವಾಗಿ ಸೋಮವಾರ ಶಾಲೆಗೆ ಹೋಗಿದ್ದ ಮಕ್ಕಳನ್ನು ಮತ್ತೆ ಮನೆಗೆ ಕಳಿಸುವಂತೆ ಪೊಲೀಸರು ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ. ಪೊಲೀಸರ ಪರಿಶೀಲನೆಯ ನಂತರ ಇದು ‘ಹುಸಿ ಬಾಂಬ್ ಬೆದರಿಕೆ’ ಎಂದು ಗೊತ್ತಾಗಿದ್ದರೂ ನಾಗರಿಕರು ತೀವ್ರ ತೆರನಾದ ಆತಂಕಕ್ಕೀಡಾಗಿದ್ದಾರೆ. ತಮಗೆ ಇ-ಮೇಲ್ ಬಂದದ್ದು ಗೊತ್ತಾಗಿದ್ದೇ ತಡ ಶಾಲಾ ಆಡಳಿತ ಮಂಡಳಿ ಯವರು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಬಂದ ಪೊಲೀಸರು ಮತ್ತು ಬಾಂಬ್ ನಿಷ್ಕಿಯದಳದ ಸಿಬ್ಬಂದಿ ಕೂಡಲೇ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. ನಂತರ ಶಾಲೆಯ ಕಟ್ಟಡವನ್ನು ಪರಿಶೀಲನೆ ನಡೆಸಿ ‘ಇದು ಹುಸಿ ಬಾಂಬ್ ಬೆದರಿಕೆ’ ಎಂದು ಧೃಡಪಡಿಸಿದ್ದಾರೆ. Over 40 Delhi schools get bomb threats via e-mail, demands ransom of USD 30,000 Read @ANI Story | #bombthreat #school #Delhi pic.twitter.com/SL0rFbnzvR — ANI Digital (@ani_digital) December 9, 2024 ಆರ್‌ಕೆ ಪುರಂನ ಡಿಪಿಎಸ್ , ಪಶ್ಚಿಮ ವಿಹಾರ್‌ನ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್, ಮದರ್ ಮೇರಿಸ್ ಸ್ಕೂಲ್, ಬ್ರಿಟಿಷ್ ಸ್ಕೂಲ್, ಸಲ್ವಾನ್ ಪಬ್ಲಿಕ್ ಸ್ಕೂಲ್ ಮತ್ತು ಕೇಂಬ್ರಿಡ್ಜ್ ಸ್ಕೂಲ್ ಮತ್ತಿತರ ಪ್ರಮುಖ ಮತ್ತು ಅತಿ ಹೆಚ್ಚು ಮಕ್ಕಳು ವಿದ್ಯಾಭಾಸ ಮಾಡುವ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಈ-ಮೇಲ್ ಬಂದಿತ್ತು ಎನ್ನುವುದು ಗೊತ್ತಾಗಿದೆ. ಈಗ ಎಲ್ಲಾ ಶಾಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು ಅಲ್ಲಿ ಬಾಂಬ್ ಇಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ- Daily GK Quiz: ಬಾಹ್ಯಾಕಾಶ ಪ್ರಯಾಣದ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ..? ಹುಸಿ ಬಾಂಬ್ ಬೆದರಿಕೆ ನೀಡಿದ ಪಾತಕಿಗಳು ‘ನಾವು ನಿಮ್ಮ ಶಾಲೆಯಲ್ಲಿ ಸಣ್ಣ ಗಾತ್ರದ ಬಾಂಬ್ ಇಟ್ಟಿದ್ದೇವೆ. ನೀವು ಹುಡುಕಿದರೂ ಅದು ಸಿಗುವುದಿಲ್ಲ. ನೀವು ನಮಗೆ 30,000 ರೂಪಾಯಿಗಳನ್ನು ನೀಡಿದರೆ ಅವನ್ನು ಸ್ಫೋಟಿಸುವುದಿಲ್ಲ. ಇಲ್ಲದಿದ್ದರೆ ಸ್ಫೋಟಿಸುತ್ತೇವೆ. ಇದರಿಂದ ಕಟ್ಟಡಕ್ಕೆ ಏನೂ ಹಾನಿಯಾಗುವುದಿಲ್ಲ. ಆದರೆ ಮಕ್ಕಳು ಗಾಯಗೊಳ್ಳುತ್ತಾರೆ’ ಎಂದು ಇ-ಮೇಲ್ ಮಾಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ- ದೇಶಾದ್ಯಂತ 85 ಹೊಸ ಕೇಂದ್ರೀಯ ವಿದ್ಯಾಲಯ,28 ನವೋದಯ ಶಾಲೆ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ ಏಕಕಾಲಕ್ಕೆ 40ಕ್ಕೂ ಹೆಚ್ಚು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅತಿಶಿ ಅವರು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಕೇಂದ್ರ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೆಹಲಿಯ ಜನರಿಗೆ ಭದ್ರತೆಯನ್ನು ಒದಗಿಸುವ ತನ್ನ ಏಕೈಕ ಜವಾಬ್ದಾರಿಯಲ್ಲಿ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.