KANNADA

ಜನವರಿ 1ರಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವರ್ಕ್ ಆಗಲ್ಲ ವಾಟ್ಸಾಪ್: ಇಲ್ಲಿದೆ ಫುಲ್ ಡೀಟೈಲ್ಸ್

WhatsApp Stop Working: ವಾಟ್ಸಪ್ ಎನ್ನುವುದು ಈಗ ಮಾಹಿತಿಗಳ ವಿನಿಮಯಕ್ಕೆ ಅತ್ಯಂತ ಪ್ರಮುಖ ವೇದಿಕೆ. ಜಗತ್ತಿನಾದ್ಯಂತ ಕೋಟ್ಯಂತರ ಜನ ಅವರ ನಾನಾ ಕೆಲಸಗಳಿಗೆ ವಾಟ್ಸಪ್ ಅನ್ನು ಅವಲಂಬಿಸಿದ್ದಾರೆ. ಆದರೆ ಮೆಟಾ ಒಡೆತನದ ವಾಟ್ಸಪ್ ಹಳೆಯ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗೆ ಜನವರಿ 1ರಿಂದ ಸಪೋರ್ಟ್ ಮಾಡುವುದನ್ನು ನಿಲ್ಲಿಸುತ್ತಿದೆ. ವಾಟ್ಸಪ್ ಪ್ರಮುಖವಾಗಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಮತ್ತು 10 ವರ್ಷಗಳಿಗಿಂತ ಹಳೆಯದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸುತ್ತಿದೆ. ಹಾಗಾಗಿ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಪ್ ಬಳಕೆ ಮಾಡುತ್ತಿದ್ದರೆ ಕೂಡಲೇ ನಿಮ್ಮ ಫೋನ್ ಅನ್ನು ಅಪ್‌ಗ್ರೇಡ್ ಮಾಡಲೇಬೇಕು. ಇದನ್ನೂ ಓದಿ- Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ! ಆದರೆ ಐಒಎಸ್ 15.1 ಮತ್ತು ಹಳೆಯ ಆವೃತ್ತಿಗಳನ್ನು ಆಧರಿಸಿದ ಐಫೋನ್‌ಗಳಾದ iPhone 5s, iPhone 6 ಮತ್ತು iPhone 6 Plus ಬಳಕೆದಾರರಿಗೆ ಅಪಡೇಟ್ ಆಗಲು ಹೆಚ್ಚಿನ ಅವಕಾಶ ನೀಡಲಾಗಿದೆ. ಈ ಬಳಕೆದಾರರು 2025ರ ಮೇ 5ರೊಳಗೆ ಫೋನ್ ಬದಲಾಯಿಸಬೇಕು. ವಾಟ್ಸಪ್ ಸೇವೆ ಸ್ಥಗಿತ ಆಗುತ್ತಿರುವುದೇಕೆ? ವಾಟ್ಸಪ್ ಈಗ AI ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುತ್ತಿದೆ. ಇವು ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ವಾಟ್ಸಪ್ ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ಮಾಡುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದನ್ನೂ ಓದಿ- UPI Payment: ಮಿಸ್ ಆಗಿ ಬೇರೆ ಖಾತೆಗೆ ಹಣ ಹೋಗಿದ್ಯಾ, ಚಿಂತೆ ಬೇಡ... ಜಸ್ಟ್ ಈ ಕೆಲಸ ಮಾಡಿದ್ರೆ ಖಾತೆಗೆ ವಾಪಸ್ ಬರುತ್ತೆ ನಿಮ್ಮ ದುಡ್ಡು! ವಾಟ್ಸಪ್ ಯಾವ್ಯಾವ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ಮಾಡುತ್ತೆ? Samsung Galaxy S3 Galaxy Note 2 Galaxy Ace 3 Galaxy S4 ಮಿನಿ HTC ಒಂದು ಎಕ್ಸ್ ಒಂದು X+ ಆಸೆ 500 ಬಯಕೆ 601 ಸೋನಿ Xperia Z ಎಕ್ಸ್ಪೀರಿಯಾ ಎಸ್ಪಿ ಎಕ್ಸ್ಪೀರಿಯಾ ಟಿ ಎಕ್ಸ್‌ಪೀರಿಯಾ ವಿಎಲ್‌ಜಿ ಆಪ್ಟಿಮಸ್ ಜಿ ನೆಕ್ಸಸ್ 4 G2 ಮಿನಿ L90 ಮೊಟೊರೊಲಾ ಮೋಟೋ ಜಿ ರೇಜರ್ ಎಚ್ಡಿ ಮೋಟೋ ಇ 2014 ಗೂಗಲ್ ಡ್ರೈವ್ ನಲ್ಲಿ ಡೇಟಾ ಸೇವ್ ಮಾಡಿ! ಜನವರಿ 1ರಿಂದ ಕೆಲವೊಂದು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡದಿರುವುದರಿಂದ ನಿಮ್ಮ ಫೋನ್‌ನಲ್ಲಿ ಯಾವುದೇ ಪ್ರಮುಖ ಮಾಹಿತಿ ಸೇವ್ ಮಾಡಿದ್ದರೆ, ಕೂಡಲೇ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿರುವ ಡೇಟಾವನ್ನು ಗೂಗಲ್ ಡ್ರೈವ್ನಲ್ಲಿ ಸೇವ್ ಮಾಡಿ. ಫೋನ್ ಅಪಡೇಟ್ ಮಾಡಿದ ಬಳಿಕ ನೀವು ಆ ಡೇಟಾವನ್ನು ಬ್ಯಾಕಪ್ ತೆಗೆದುಕೊಳ್ಳಬಹುದು. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.