KANNADA

ಟಿವಿ ಮೇಲೆ ಭಾರೀ ರಿಯಾಯಿತಿ ! 6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಸ್ಮಾರ್ಟ್ ಟಿವಿ

Flipkart Big Saving Days Sale : ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದೆ. ಈ ಸೇಲ್‌ನಲ್ಲಿ, ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ರೀತಿಯ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿವೆ. ಈ ಸೇಲ್ ನಲ್ಲಿ ಥಾಮ್ಸನ್ ಮತ್ತು ಬ್ಲೂಪಂಕ್ಟ್‌ನಿಂದ 6,000 ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಗಳನ್ನು ಖರೀದಿಸಬಹುದು. ಎರಡೂ ಬ್ರ್ಯಾಂಡ್‌ಗಳು ವಿಭಿನ್ನ ಪರದೆಯ ಗಾತ್ರಗಳಲ್ಲಿ ಅಗ್ಗದ ಆಯ್ಕೆಗಳನ್ನು ಪರಿಚಯಿಸಿವೆ. 6 ಸಾವಿರದೊಳಗಿನ ಸ್ಮಾರ್ಟ್ ಟಿವಿಗಳು : ಫ್ಲಿಪ್‌ಕಾರ್ಟ್ ಮಾರಾಟದಲ್ಲಿ , Blaupunktನ 24Sigma707 ಸ್ಮಾರ್ಟ್ ಟಿವಿ ಕೇವಲ 5,999 ರೂಗಳಲ್ಲಿ ಲಭ್ಯವಿರುತ್ತದೆ. ಅದೇ ರೀತಿ, ಥಾಮ್ಸನ್‌ನ 24Alpha001 ಸ್ಮಾರ್ಟ್ ಟಿವಿಯು 5,999 ರೂ.ಗಳಿಗೆ ಲಭ್ಯವಿರುತ್ತದೆ. ಇದು ಅದರ ಮೂಲ ಬೆಲೆ 6,499 ರೂಗಿಂತ 500 ರೂ ಕಡಿಮೆಯಾಗಿದೆ. ಇದನ್ನೂ ಓದಿ : ಇದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ನಿಮ್ಮ ಬಳಿ ಇದ್ರೆ ಭಾರೀ ದಂಡ, ಜೈಲು ಶಿಕ್ಷೆಗೂ ಗುರಿಯಾಗಬಹುದು...! 4K ಸ್ಮಾರ್ಟ್ ಟಿವಿಗಳಲ್ಲಿಯೂ ಉತ್ತಮ ರಿಯಾಯಿತಿಗಳು : ಸ್ವಲ್ಪ ಅಡ್ವಾನ್ಸ್ ಡ್ ಟಿವಿ ಬೇಕು ಎನ್ನುವವರಿಗೆ Blaupunktನ 22,499 ರೂಪಾಯಿಗಳಿಂದ ಪ್ರಾರಂಭವಾಗುವ 4K ಸ್ಮಾರ್ಟ್ ಟಿವಿ ಲಭ್ಯವಿದೆ. ಈ ಮಾದರಿಯು Android TV ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 43-ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಅದರ ರೆಸಲ್ಯೂಶನ್ UHD ಆಗಿದೆ. ಇದು ಡಾಲ್ಬಿ ಅಟ್ಮಾಸ್, ಡಾಲ್ಬಿ ವಿಷನ್ ಮತ್ತು ಡಿಟಿಎಸ್ ಟ್ರೂಸರೌಂಡ್‌ನಂತಹ ಉತ್ತಮ ಆಡಿಯೊ ಮತ್ತು ವಿಡಿಯೋ ತಂತ್ರಜ್ಞಾನಗಳನ್ನು ಹೊಂದಿದೆ. ಕಂಪನಿಯ 50 ಇಂಚಿನ 4K ಸ್ಮಾರ್ಟ್ ಟಿವಿ 27,999 ರೂ.ಗೆ ಲಭ್ಯವಾಗಲಿದ್ದು, 55 ಇಂಚಿನ 4K ಸ್ಮಾರ್ಟ್ ಟಿವಿ 31,999 ರೂಪಾಯಿಗೆ ಲಭ್ಯವಾಗಲಿದೆ. ದೊಡ್ ಸ್ಕ್ರೀನ್ ಬೇಕು ಎಂದಾದರೆ 65 ಇಂಚಿನ ಟಿವಿ 43,999 ರೂಗಳಿಗೆ ಲಭ್ಯವಿರುತ್ತದೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಮತ್ತೊಂದೆಡೆ, ಥಾಮ್ಸನ್ 20,499 ರಿಂದ ಪ್ರಾರಂಭವಾಗುವ 4K ಸ್ಮಾರ್ಟ್ ಟಿವಿಗಳನ್ನು ನೀಡುತ್ತಿದೆ. ಇವುಗಳು 43, 50, 55, 65, ಮತ್ತು 75 ಇಂಚುಗಳ ಆಯ್ಕೆಗಳನ್ನು ಹೊಂದಿವೆ. 50 ಇಂಚಿನ ಮಾದರಿಯನ್ನು ರೂ.27,999ಕ್ಕೆ, 55 ಇಂಚಿನ ಮಾದರಿಯನ್ನು ರೂ.30,999ಕ್ಕೆ, 65 ಇಂಚಿನ ಮಾದರಿಯನ್ನು ರೂ.44,999ಕ್ಕೆ ಮತ್ತು 75 ಇಂಚಿನ ಮಾದರಿಯನ್ನು ರೂ.69,999ಕ್ಕೆ ಪಡೆಯಬಹುದು. ಕಂಪನಿಯು ತನ್ನ ಸ್ಮಾರ್ಟ್ ಟಿವಿಗಳಲ್ಲಿ 20,000 ರೂ.ವರೆಗೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದ್ದು, ಪ್ರತಿ 4K ಮಾದರಿಯ ಖರೀದಿಯೊಂದಿಗೆ ಉಚಿತ 25W ಸೌಂಡ್ ಬಾರ್ ಅನ್ನು ನೀಡುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.