KANNADA

ಮೋದಿ ಸರ್ಕಾರದ ಬಿಗ್ ಡಿಜಿಟಲ್ ಸ್ಟ್ರೈಕ್! 59 ಸಾವಿರ ವಾಟ್ಸಾಪ್ ಖಾತೆ Block !

ಬೆಂಗಳೂರು : ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ I4C ಸಂಸ್ಥೆಯು ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. ನವೆಂಬರ್ 15, 2024ರ ಹೊತ್ತಿಗೆ, ಸಂಸ್ಥೆಯು ವಂಚನೆಯಲ್ಲಿ ತೊಡಗಿರುವ 1,700 ಕ್ಕೂ ಹೆಚ್ಚು ಸ್ಕೈಪ್ ಖಾತೆಗಳು ಮತ್ತು 59,000 ಕ್ಕೂ ಹೆಚ್ಚು WhatsApp ಖಾತೆಗಳನ್ನು ನಿರ್ಬಂಧಿಸಿದೆ. ಸೈಬರ್ ಅಪರಾಧದಿಂದ ಜನರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಇದಲ್ಲದೆ, 2021ರಲ್ಲಿ ಪ್ರಾರಂಭಿಸಲಾದ 'ಸಿಟಿಜನ್ ಫೈನಾನ್ಷಿಯಲ್ ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ' ಸಹಾಯದಿಂದ 9.94 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ. I4C ಅನೇಕ ಸೈಬರ್ ಅಪರಾಧಿಗಳ ಖಾತೆಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ 1700 ಕ್ಕೂ ಹೆಚ್ಚು ಸ್ಕೈಪ್ ಖಾತೆಗಳು ಮತ್ತು 59,000 ಕ್ಕೂ ಹೆಚ್ಚು WhatsApp ಖಾತೆಗಳು ಸೇರಿವೆ. ಈ ಖಾತೆಗಳನ್ನು ವಂಚನೆ ಮತ್ತು ಜನರನ್ನು ಯಾಮಾರಿಸಿ ಹಣ ಕದಿಯಲು ಬಳಸಲಾಗುತ್ತಿತ್ತು. ಇದನ್ನೂ ಓದಿ : ಲಾಂಚ್ ಆಯಿತು Honda Amaze 2024 ! ಅಗ್ಗದ ಬೆಲೆಗೆ ಸಿಗುತ್ತಿದೆ ಭರ್ಜರಿ ವೈಶಿಷ್ಟ್ಯ ವಂಚನೆ ಜಾಲ ಹೀಗೆ ಕೆಲಸ ಮಾಡುತ್ತಿತ್ತು : ವಿದೇಶದಿಂದ ಬರುತ್ತಿರುವ ನಕಲಿ ಕರೆಗಳನ್ನು ತಡೆಯಲು ಟೆಲಿಕಾಂ ಕಂಪನಿಗಳೊಂದಿಗೆ ಸರ್ಕಾರ ಕ್ರಮ ಕೈಗೊಂಡಿದೆ. ನಕಲಿ ಪೊಲೀಸರು ಅಥವಾ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಮೋಸಗೊಳಿಸಲು ಈ ಕರೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಕರೆಗಳನ್ನು ಗುರುತಿಸಿ ಬ್ಲಾಕ್ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. CFMC ರಚನೆ : ಸೈಬರ್ ಅಪರಾಧವನ್ನು ತಡೆಗಟ್ಟಲು ಸರ್ಕಾರವು ಸೈಬರ್ ಫ್ರಾಡ್ ಮಿಟಿಗೇಷನ್ ಸೆಂಟರ್ (CFMC) ಎಂಬ ಹೊಸ ಕೇಂದ್ರವನ್ನು ರಚಿಸಿದೆ. ಬ್ಯಾಂಕ್‌ಗಳು, ಹಣಕಾಸು ಕಂಪನಿಗಳು, ಟೆಲಿಕಾಂ ಕಂಪನಿಗಳು, ಐಟಿ ಕಂಪನಿಗಳು ಮತ್ತು ಪೊಲೀಸರು ಈ ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ಮೂಲಕ ಎಲ್ಲಾ ಸಂಸ್ಥೆಗಳು ಒಟ್ಟಾಗಿ ಸೈಬರ್ ಅಪರಾಧದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.