KANNADA

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಮಧ್ಯಾಹ್ನದ ಊಟದಲ್ಲಿ... ತಿಂಗಳಿಗೆ 2 ಬಾರಿ ಮಟನ್ ಮತ್ತು 4 ಬಾರಿ ಚಿಕನ್..

Mutton in govt hostel food : ತೆಲಂಗಾಣ ರಾಜ್ಯದ ಕಲ್ಯಾಣ ಹಾಸ್ಟೆಲ್‌ಗಳಲ್ಲಿನ ಸ್ಥಿತಿಗತಿಗಳನ್ನು ತಿಳಿಯಲು ಖುದ್ದು ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ಸಚಿವರು ಇಡೀ ಸರ್ಕಾರಿ ಆಡಳಿತದೊಂದಿಗೆ ಹಾಸ್ಟೆಲ್‌ ಮತ್ತು ಗುರುಕುಲಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರೊಂದಿಗೆ ಊಟ ಸಹ ಮಾಡಿದರು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಜತೆಗೆ ರುಚಿಕರವಾದ ಊಟ ನೀಡುವತ್ತ ಗಮನಹರಿಸಲು ಸರಕಾರ ನಿರ್ಧರಿಸಿದೆ.. ಇದುವರೆಗೆ ಜಾರಿಗೆ ಬಂದಿರುವ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಲು ಮೆನು ಸಿದ್ಧಪಡಿಸಲಾಗಿದೆ. ಇದುವರೆಗೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರತಿ ಭಾನುವಾರ ಕೋಳಿ ಮಾಂಸವನ್ನು ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಮಟನ್ ನೀಡಲಾಗುತ್ತಿದೆ. ಇನ್ನು ಮುಂದೆ ಊಟದಲ್ಲಿ ತಿಂಗಳಿಗೆ ಎರಡು ಬಾರಿ ಮಟನ್ ಹಾಗೂ 4 ಬಾರಿ ಚಿಕನ್ ನೀಡಲಾಗುವುದು. ಮಾಂಸಾಹಾರಿ ಊಟದಲ್ಲಿ ಸಾಂಬಾರ್ ಮತ್ತು ಮೊಸರು ಸೇರಿದೆ. ರಂಗಾರೆಡ್ಡಿ ಜಿಲ್ಲೆಯ ಚಿಲ್ಕೂರಿನ ಸಮಾಜ ಕಲ್ಯಾಣ ವಸತಿ ಶಾಲೆಗೆ ತೆರಳಿದ ಸಿಎಂ ರೇವಂತ್ ರೆಡ್ಡಿ... ಅಲ್ಲಿಂದ ರಾಜ್ಯದ ಎಲ್ಲ ಸರಕಾರಿ ಹಾಸ್ಟೆಲ್, ಗುರುಕುಲಗಳಲ್ಲಿ ಕಾಮನ್ ಡಯಟ್ ಪ್ಲಾನ್ ಆರಂಭಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.