KANNADA

ಹೆಂಡತಿ ತವರಿಗೆ ಹೋದ್ರೆ ಸಾಕು... ಗಂಡಂದಿರುವ ಮನೆಯಲ್ಲಿ ಹೆಚ್ಚಾಗಿ ಈ ಕೆಲಸವನ್ನೇ ಮಾಡ್ತಾರಂತೆ!

Relationship Tips: ಪುರುಷರಿಗೆ, ಮದುವೆಯ ನಂತರದ ಜೀವನವು ಸ್ವಲ್ಪ ಹೆಚ್ಚು ಕಷ್ಟಕರವಾಗಿರುತ್ತದೆ. ಏಕೆಂದರೆ ಬ್ಯಾಚುಲರ್ ಲೈಫ್‌ನಲ್ಲಿ ಹಲವಾರು ರೀತಿಯ ಎಂಜಾಯ್ ಮೆಂಟ್ ಇರುತ್ತದೆ. ಫೋನ್‌ಗಳಲ್ಲಿ ಮಾತನಾಡುವುದು, ಸ್ನೇಹಿತರೊಂದಿಗೆ ಸುತ್ತಾಡುವುದು, ಪಾರ್ಟಿ ಮಾಡುವುದು, ಹೊರಗೆ ಹೋಗುವುದು ಇತ್ಯಾದಿ. ಆದರೆ ಮದುವೆಯ ನಂತರ ಇದ್ಯಾವುದೂ ಆಗೋದಿಲ್ಲ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭಾರಿ ಆಘಾತ ನೀಡಿದ ಕೇಂದ್ರ ಸರ್ಕಾರ..! ತನ್ನ ಹೆಂಡತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಬೇಕಾಗುತ್ತದೆ. ಕೆಲಸ ಮಾಡಿ ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕಾಗುತ್ತದೆ. ಹಿಂದಿನ ಜೀವನಶೈಲಿಗಿಂತ ಮದುವೆಯ ನಂತರ ಜೀವನಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ. ಕೆಲವರಿಗೆ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ. ಅದಕ್ಕಾಗಿಯೇ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ಜೀವನದಲ್ಲಿ ಅರ್ಥಮಾಡಿಕೊಳ್ಳುವ ಸಂಗಾತಿಯನ್ನು ಬಯಸುತ್ತಾರೆ. ಒಂದು ವೇಳೆ ಅಂತಹ ಪಾರ್ಟ್‌ನರ್‌ ಸಿಕ್ಕಿದ್ರೆ ಈ ಜೀವನಕ್ಕೆ ಇನ್ನೇನು ಬೇಕಾಗಿರೋದಿಲ್ಲ. ಇನ್ನು ಹೆಂಡತಿ ಹೆರಿಗೆಯಾಗಿ ತವರಿಗೆ ಹೋದಾಗ ಮನೆಯಲ್ಲಿ ಒಬ್ಬನೇ ಇರುವ ಗಂಡ ಹೇಗೆ ನಡೆದುಕೊಳ್ಳುತ್ತಾನೆ? ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ತಮ್ಮ ಹೆಂಡತಿಯರು ದೂರವಿರುವಾಗ ಗಂಡಂದಿರು ಯಾವ ರೀತಿಯ ಕೆಲಸ ಮಾಡುತ್ತಾರೆ ಎಂಬ ಪ್ರಮುಖ ವಿಷಯಗಳನ್ನು ಇದು ಬಹಿರಂಗಪಡಿಸಿದೆ. ಹೆಚ್ಚಿನವರು ಹೆಂಡತಿ ಇದ್ದಾಗ ಸ್ನೇಹಿತರ ಜೊತೆ ಫೋನ್ ನಲ್ಲಿ ಮಾತನಾಡುವುದು ತುಂಬಾ ಕಡಿಮೆ. ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ಎಲ್ಲಾ ಹಳೆಯ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ. ಆಗ ಅವರ ಜೊತೆ ಫೋನಿನಲ್ಲಿ ಮಾತನಾಡುವುದರಲ್ಲಿ ತಲ್ಲೀನರಾಗಿರುತ್ತೀರಿ. ಗಂಟೆಗಟ್ಟಲೆ ಅವರೊಂದಿಗೆ ಮಾತನಾಡುತ್ತಾರೆ ಮತ್ತು ಜೀವನಶೈಲಿಯ ವಿಷಯಗಳನ್ನು ಚರ್ಚಿಸುತ್ತಾರೆ. ಇದಲ್ಲದೆ, ಅನೇಕ ಗಂಡಂದಿರು ತಮ್ಮ ಹೆಂಡತಿಯರು ತವರಿಗೆ ಹೋದಾಗ ಹೆಚ್ಚಿನ ಸಮಯವನ್ನು ತಮ್ಮ ಫೋನ್‌ಗಳಲ್ಲಿ ಕಳೆಯುತ್ತಾರೆ. ಹೆಂಡತಿ ಇದ್ದಾಗ ವೆಬ್ ಸೀರೀಸ್, ಸಿನಿಮಾ ನೋಡಲು ಹೆಚ್ಚಿನವರಿಗೆ ಸಮಯ ಇರುವುದಿಲ್ಲ. ಹೀಗಾಗಿ ಕೆಲವರು ತಮ್ಮ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ವೆಬ್ ಸಿರೀಸ್, ಮೆಚ್ಚಿನ ಸಿನಿಮಾಗಳು ಮತ್ತು ಇತರೆ ವಿಡಿಯೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಹೆಚ್ಚಿನವರು ತಮ್ಮ ಹೆಂಡತಿ ತವರಿಗೆ ಹೋದಾಗ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾರೆ. ಇದುವೇ ಗಂಡಂದಿರಿಗೆ ನಿಜವಾದ ಆನಂದ ಎಂದು ಈ ವರದಿ ಬಹಿರಂಗ ಪಡಿಸಿದೆ. ಇದನ್ನೂ ಓದಿ: ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರ ಇನ್ನು ಹೆಂಡತಿ ಮನೆಯಲ್ಲಿದ್ದಾಗ, ಆಕೆ ತಯಾರಿಸಿದ ಆಹಾರವನ್ನು ಮಾತ್ರ ತಿನ್ನಬೇಕು. ಆದರೆ ಹೆಂಡತಿ ತವರಿಗೆ ಹೋದಾಗ, ಹೊರಗಿನ ಆಹಾರವನ್ನು ಆರ್ಡರ್‌ ಮಾಡಿಕೊಂಡು ತಿನ್ನುತ್ತಾರಂತೆ. ಅಷ್ಟೃ ಅಲ್ಲದೆ, ಹೆಂಡತಿ ಮನೆಯಲ್ಲಿಲ್ಲದ ಸಮಯದಲ್ಲಿ ಗಂಡಂದಿರು ಸಮಯಕ್ಕೆ ಸರಿಯಾಗಿ ಮನೆಗೆ ಬರುವುದಿಲ್ಲ ಎಂದು ಈ ವರದಿ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.