NEWS

Weight Loss: ಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆ ಆಗುತ್ತಿಲ್ವಾ? ಇದೇ ನೋಡಿ ನೀವು ಮಾಡುತ್ತಿರುವ ತಪ್ಪು!

ಸಾಂದರ್ಭಿಕ ಚಿತ್ರ ಬಹಳಷ್ಟು ಸಲ ನಮ್ಮ ಶರೀರದ ತೂಕ ಸುಲಭವಾಗಿ ಏರಿಬಿಡುತ್ತದೆ. ಆದರೆ ಅದೇ ತೂಕವನ್ನು ಇಳಿಸಿಕೊಳ್ಳುವುದು ಕಷ್ಟ. ಅದಕ್ಕಾಗಿ ವ್ಯಾಯಾಮ, ಸಮತೋಲಿತ ಆಹಾರ ಮುಂತಾದ ಅನೇಕ ಆರೋಗ್ಯಕರ ಅಭ್ಯಾಸಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ಆದರೆ ಕೆಲವರಿಗೆ ಅಂಥದ್ದೆಲ್ಲ ಮಾಡಿಯೂ ತೂಕ ಇಳಿಯೋದಿಲ್ಲ! ಸಾಕಷ್ಟು ಪ್ರಯತ್ನಗಳ ನಂತರವೂ ತೂಕ ಇಳಿಯದಿರಲು ಅನೇಕ ಸಂಗತಿಗಳು ಕಾರಣವಾಗಿರಬಹುದು. ನಿದ್ರಾಹೀನತೆ, ಆಹಾರದ ಕ್ರಮ ಅಥವಾ ವಿವಿಧ ಆರೋಗ್ಯ ಪರಿಸ್ಥಿತಿಗಳು ತೂಕವನ್ನು ಕಳೆದುಕೊಳ್ಳಲು ತಡೆಗೋಡೆಗಳಾಗಿರಬಹುದು. ಇವುಗಳೊಂದಿಗೆ ನೀವು ತೂಕವನ್ನು ಕಳೆದುಕೊಳ್ಳದಿರಲು ಕಾಣವಾಗುವ ಇತರ ಅಂಶಗಳು ಯಾವವು ಅನ್ನೋದ್ರ ಬಗ್ಗೆ ಇಲ್ಲಿ ವಿವರಿಸಲಾಗಿದೆ. * ಕರುಳಿನ ಆರೋಗ್ಯ ಸ್ಥಿತಿ : ಕರುಳಿನ ಬ್ಯಾಕ್ಟೀರಿಯಾವು ವ್ಯಕ್ತಿಯ ತೂಕ ಹೆಚ್ಚಳದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ತಿಂದ ಆಹಾರವು ಜೀರ್ಣವಾಗಲು ಕರುಳಿನ ಆರೋಗ್ಯ ಮುಖ್ಯವಾಗಿದೆ. ಕರುಳಿನ ಬ್ಯಾಕ್ಟೀರಿಯಾಗಳು ಮಾನವನ ಪ್ರತಿರಕ್ಷೆಯ ಮೇಲೆ ನೇರವಾಗಿ ಪ್ರಭಾವ ಬೀರುವ ವಿಟಮಿನ್ ಕೆ ಮತ್ತು ಇತರ ಕೆಲವು ರೀತಿಯ ವಿಟಮಿನ್‌ಗಳನ್ನು ಸಹ ಉತ್ಪಾದಿಸುತ್ತವೆ. ಧಾನ್ಯಗಳು, ಹಣ್ಣುಗಳು, ಸಿಟ್ರಸ್ ಹಣ್ಣುಗಳು, ನೇರ ಪ್ರೋಟೀನ್, ಎಲೆಗಳು, ಹಸಿರು ತರಕಾರಿಗಳು, ಆವಕಾಡೊ ಮುಂತಾದವು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. * ದೀರ್ಘಕಾಲದ ಒತ್ತಡ : ಸೆನ್ಸ್‌ ಕ್ಲೀನಿಕ್‌ನ ಕ್ರಿಯಾತ್ಮಕ ಪೌಷ್ಟಿಕ ತಜ್ಞರಾದ ದೀಪಕ್‌ ಪಾಲ್‌ ಅವರು, ನೀವು ಮಧ್ಯರಾತ್ರಿಯ ತಿಂಡಿ ಅಥವಾ ಒತ್ತಡಗಳಿಗೆ ಒಳ್ಳಗಾದಾಗ ತಿನ್ನುವ ಅಭ್ಯಾಸ ಹೊಂದಿದ್ದರೆ ಅದು ದೇಹದ ತೂಕವನ್ನು ಹೆಚ್ಚಿಸಬಹುದು ಎಂದು ಹೇಳುತ್ತಾರೆ. ಒತ್ತಡದ ದೀರ್ಘಕಾಲದ ಇತಿಹಾಸ ಅಥವಾ ಯಾವುದೇ ರೀತಿಯ ಒತ್ತಡವು ಕಾರ್ಟಿಸೋಲ್ ಅನ್ನು ಸಕ್ರಿಯಗೊಳಿಸುತ್ತದೆ. ಕಾರ್ಟಿಸೋಲ್‌ ಅನ್ನೋದು ಮಾನವ ದೇಹದಲ್ಲಿನ ಒತ್ತಡದ ಹಾರ್ಮೋನ್ ಆಗಿದೆ. ಇದು ಬಿಡುಗಡೆಯಾಗುವಾಗ ಸಿಹಿ ಅಥವಾ ಉಪ್ಪು ಆಹಾರಕ್ಕಾಗಿ ಕಡುಬಯಕೆ ಉಂಟಾಗುತ್ತದೆ. ಅಂಥ ಜಂಕ್‌ ಆಹಾರಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗೆಯೇ ದೇಹವು ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗಬಹುದು. ಆದ್ದರಿಂದ ಧ್ಯಾನ, ಆಳವಾದ ಉಸಿರಾಟ, ಯೋಗದ ವ್ಯಾಯಾಮಗಳನ್ನು ಪ್ರಯತ್ನಿಸುವುದು ಮತ್ತು ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ದೀಪಕ್‌ ಪಾಲ್‌ ಹೇಳುತ್ತಾರೆ. * ಕಡಿಮೆ ಪ್ರೋಟೀನ್ ಸೇವನೆ : ನೀವು ಸಾಕಷ್ಟು ಪ್ರೋಟೀನ್‌ಗಳನ್ನು ಸೇವಿಸದಿದ್ದರೆ ಆ ಕೊರತೆಯನ್ನು ಸರಿದೂಗಿಸಲು ನಿಮ್ಮ ಹಸಿವು ಹೆಚ್ಚಾಗುತ್ತದೆ. ಕಿಬ್ಬೊಟ್ಟೆಯ ಭಾಗ ಉಬ್ಬಿಕೊಳ್ಳುವುದು ಕಡಿಮೆ ಪ್ರೋಟೀನ್‌ ಸೇವನೆಯ ಸಂಕೇತವಾಗಿದೆ. ಕಾಲುಗಳು, ತೋಳುಗಳ ಊತವು ಸಹ ಇದನ್ನು ಸೂಚಿಸುತ್ತದೆ. ಇದು ಮೂಡ್ ಸ್ವಿಂಗ್‌ಗೂ ಕಾರಣವಾಗಬಹುದು. ಕ್ವಿನೋವಾ, ಬೇಳೆ, ಬೀಜಗಳು, ಮೊಟ್ಟೆ, ಕಾಟೇಜ್ ಚೀಸ್, ಮೀನು ಮತ್ತು ಬೀನ್ಸ್‌ನಂತಹ ಆಹಾರಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. * ಸಕ್ಕರೆ ಸೇವನೆ : ನೀವು ಮಧ್ಯಮ ಅಥವಾ ಜಾಗರೂಕರಾಗಿ ತಿನ್ನುವವರಾಗಿದ್ದರೂ ಸಹ, ಸಕ್ಕರೆ ಪಾನೀಯಗಳನ್ನು ಸೇವಿಸಿದಾಗ ತೂಕ ಹೆಚ್ಚಾಗುವ ಸಾಧ್ಯತೆಗಳಿವೆ. ಇದು ‘ಆರೋಗ್ಯಕರ’ ಎಂದು ಲೇಬಲ್‌ ಹಾಕಿಕೊಂಡುವ ಪಾಕೇಟ್‌ ಪಾನೀಯಗಳಿಗೂ ಅನ್ವಯಿಸುತ್ತದೆ. ಇವುಗಳು ದೀರ್ಘಾವಧಿಯಲ್ಲಿ ಹಾನಿಕಾರಕವಾಗಿದೆ. * ನಿದ್ರೆಯ ಕೊರತೆ : ಆಧುನಿಕ ಜೀವನಶೈಲಿಯ ಸಾಮಾನ್ಯ ಸಮಸ್ಯೆಯೆಂದರೆ ನಿದ್ರೆಯ ಕೊರತೆ. ಇದರಿಂದಲೂ ತೂಕ ಹೆಚ್ಚಾಗಬಹುದು. ಒಬ್ಬ ವ್ಯಕ್ತಿಯು ದಿನಕ್ಕೆ ಸರಾಸರಿ 7-8 ಗಂಟೆಗಳ ಕಾಲ ಮಲಗಬೇಕು. ಆದರೆ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ದೂರದರ್ಶನದಂತಹ ಎಲೆಕ್ಟ್ರಾನಿಕ್ ಸಾಧನಗಳು ಗುಣಮಟ್ಟದ ನಿದ್ರೆ ತಡೆಯಾಗಬಹುದು. ಹಾಗಾಗಿ ಯೋಗಕ್ಷೇಮ ಮತ್ತು ಪೂರ್ಣ ರಾತ್ರಿಯ ವಿಶ್ರಾಂತಿಯ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಒಟ್ಟಾರೆಯಾಗಿ ಎಚ್ಚರಿಕೆಯ ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ದಿನಚರಿಗಳು ಅದ್ಭುತಗಳನ್ನು ಮಾಡಬಹುದು. ಆದಾಗ್ಯೂ ನೀವು ಯಾವುದಾದರೂ ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿದ್ದರೆ, ತೂಕ ನಷ್ಟಕ್ಕೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.