NEWS

ಕ್ಯಾನ್ಸರ್​ಗೆ ಪತ್ನಿ ಬಲಿ, ಆಘಾತಕ್ಕೊಳಗಾದ IPS ಅಧಿಕಾರಿ, ICUನಲ್ಲೇ ಗುಂಡು ಹಾರಿಸಿ ಆತ್ಮಹತ್ಯೆ

ಮೃತ ದಂಪತಿ ಗುವಾಹಟಿ(ಜೂ.19): ಅಸ್ಸಾಂನಿಂದ ಅತ್ಯಂತ ನೋವಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತೆಗೆದುಕೊಂಡ ಕೆಟ್ಟ ನಿರ್ಧಾರವೊಂದು ನೋಡುಗರು ಹಾಗೂ ಕೇಳುಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ವಾಸ್ತವವಾಗಿ, ಅಸ್ಸಾಂನ ಗೃಹ ಕಾರ್ಯದರ್ಶಿಯ ಪತ್ನಿ ಗುವಾಹಟಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಕ್ಯಾನ್ಸರ್​ನಿಂದ ಹೋರಾಡಿ ನಿಧನರಾಗಿದ್ದಾರೆ. ಆದರೆ ಇದಾದ ಕೆಲವು ನಿಮಿಷಗಳ ಬಳಿಕ ಗಂಡ ತನ್ನ ಹೆಂಡತಿಯ ಶವದ ಬಳಿ ಕುಳಿತು ಪ್ರಾರ್ಥನೆ ಮಾಡಲು ಅವಕಾಶ ನೀಡುವಂತೆ ಸಿಬ್ಬಂದಿಗೆ ಕೇಳಿಕೊಂಡಿದ್ದಾನೆ. ಈ ವೇಳೆ ತನ್ನನ್ನು ಒಬ್ಬನನ್ನೇ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲರೂ ಹೊರಗೆ ಹೋದ ಕೂಡಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತ ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ ಮತ್ತು ವಿಚಲಿತರಾಗಿದ್ದಾರೆ. 44 ವರ್ಷದ ಐಪಿಎಸ್ ಶಿಲಾದಿತ್ಯ ಚೇಟಿಯಾ ರಾಷ್ಟ್ರಪತಿಗಳಿಂದ ಶೌರ್ಯ ಪದಕವನ್ನು ಪಡೆದಿದ್ದರೆಂಬುವುದು ಉಲ್ಲೇಖನೀಯ. ಐಸಿಯು ಕ್ಯಾಬಿನ್‌ನಲ್ಲಿ ಗುಂಡು ಹಾರಿಸಿಕೊಂಡಿದ್ದಾರೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಚೇಟಿಯಾ ಅವರ ಪತ್ನಿ ಅಗಮೊನಿ ಬೊರ್ಬರುವಾ (40) ನೇಮ್‌ಕೇರ್ ಆಸ್ಪತ್ರೆಯಲ್ಲಿ ಸಂಜೆ 4.25 ಕ್ಕೆ ನಿಧನರಾದರು. 10 ನಿಮಿಷಗಳ ನಂತರ, ಚೈತಿಯಾ ತನ್ನ ಹೆಂಡತಿಯ ICU ಕ್ಯಾಬಿನ್‌ಗೆ ಹೋಗಿದ್ದಾರೆ, ಈ ವೇಳೆ ವೈದ್ಯಕೀಯ ಸಿಬ್ಬಂದಿಯಿಂದ ಸ್ವಲ್ಪ ಗೌಪ್ಯತೆಯನ್ನು ಕೋರಿ ತನ್ನ ಹೆಂಡತಿಯ ಶವದ ಬಳಿ ಕುಳಿತು ಅವಳಿಗಾಗಿ ಪ್ರಾರ್ಥಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದಾದ ನಂತರ ವೈದ್ಯಕೀಯ ಸಿಬ್ಬಂದಿ ಅಲ್ಲಿಂದ ಹೊರಟು ಹೋದ ಕೆಲವೇ ಕ್ಷಣಗಳಲ್ಲಿ ಎಲ್ಲರಿಗೂ ಗುಂಡಿನ ಸದ್ದು ಕೇಳಿಸಿದೆ. ವ್ಯವಸ್ಥಾಪಕ ನಿರ್ದೇಶಕರಿಂದ ಮಾಹಿತಿ ನೆಮ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಬರುವಾ, “ನಾವು ಕೂಡಲೇ ಐಸಿಯು ಕ್ಯಾಬಿನ್‌ಗೆ ಓಡಿಹೋದೆವು. ಅಲ್ಲಿ ಆತ ತನ್ನ ಹೆಂಡತಿಯ ಶವದೊಂದಿಗೆ ಮಲಗಿದ್ದ. ನಾವು ಅವನನ್ನು ಉಳಿಸಲು ಪ್ರಯತ್ನಿಸಿದೆವಾದರೂ ನಮ್ಮಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ. 2013 ರಲ್ಲಿ ವಿವಾಹವಾಗಿದ್ದ ದಂಪತಿ ಅಗಮೋನಿ ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹಿತೇಶ್ ತಿಳಿಸಿದ್ದು “ಮೂರು ದಿನಗಳ ಹಿಂದೆ ಅವರ ಸ್ಥಿತಿ ಹದಗೆಟ್ಟಿತ್ತು, ನಾವು ಚೈತ್ಯನಿಗೆ ಅವರ ಸ್ಥಿತಿಯನ್ನು ವಿವರಿಸಿದ್ದೇವೆ ಮತ್ತು ಅವರಿಗೂ ಇದು ಅರ್ಥವಾಗಿತ್ತು” ಎಂದು ಹೇಳಿದ್ದಾರೆ. ಇನ್ನು ಮೇ 12, 2013 ರಂದು ಇವರ ವಿವಾಹವಾಗಿದ್ದು, ಈ ದಂಪತಿಗೆಮಕ್ಕಳಿರಲಿಲ್ಲ. ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಹೇಳಿದ್ದೇನು? ಅಸ್ಸಾಂ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಶಿಲಾದಿತ್ಯ ಚೇಟಿಯಾ ಅವರು ತಮ್ಮ ಪತ್ನಿ ಆಸ್ಪತ್ರೆಯಲ್ಲಿ ನಿಧನರಾದ ಕೆಲವೇ ನಿಮಿಷಗಳಲ್ಲಿ ತನ್ನ ಜೀವನದಲ್ಲಿ ಅನೇಕ ದುರದೃಷ್ಟಕರ ಘಟನೆಗಳನ್ನು ಎದುರಿಸಿದ್ದಾರೆ, ಬಹುಶಃ ಅವರ ಪತ್ನಿಯ ಸಾವು ಅವರಿಗೆ ಸಿಕ್ಕ ಬಹುದೊಡ್ಡ ಹೊಡೆತವಾಗಿತ್ತು ಎಂದು ಅಸ್ಸಾಂನ ಮಾಜಿ ಡಿಜಿಪಿ ಹೇಳಿದ್ದಾರೆ ಭಾಸ್ಕರಜ್ಯೋತಿ ಮಹಂತ ಅವರು ಈಗ ರಾಜ್ಯದ ಮುಖ್ಯ ಮಾಹಿತಿ ಆಯುಕ್ತರಾಗಿದ್ದಾರೆ. ಮಹಂತ್ ಚೇಟಿಯನನ್ನು ತನ್ನ ಕಿರಿಯ ಸಹೋದರ ಎಂದು ಪರಿಗಣಿಸಿದ್ದೆ ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಆಸ್ಪತ್ರೆಗೆ ಧಾವಿಸಿದ ಮಹಂತ್, “ಅವರು ನನ್ನ ಕಿರಿಯ ಸಹೋದರನಂತೆ” ಹೇಳಿದರು. ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಕೆಲ ಸಮಯದ ಹಿಂದೆ ಅತ್ತೆ, ಮಾವಂದಿರನ್ನು ಕಳೆದುಕೊಂಡಿದ್ದ ಅವರು, ಪತ್ನಿಯನ್ನು ನೋಡಿಕೊಳ್ಳುತ್ತಿದ್ದು, ಚಿಕಿತ್ಸೆಗಾಗಿ ಚೆನ್ನೈನಲ್ಲಿದ್ದರು. ಆದರೆ ಆತ ಅಂತಹ ಹೆಜ್ಜೆ ಇಡುತ್ತಾನೆ ಎಂದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ. We are deeply saddened by the tragic loss of Shri Shiladitya Chetia IPS 2009 RR, Secretary Home & Political, Government of Assam and his wife . The entire police family is in profound grief and shock. Shri Chetia's unwavering dedication to Assam will always be cherished. pic.twitter.com/Ba9FlQGIxR ಈ ಘಟನೆ ಕುರಿತು ಡಿಜಿಪಿ ಜಿಪಿ ಸಿಂಗ್ ಎಕ್ಸ್ ನಲ್ಲಿ ಮಾಹಿತಿ ಡಿಜಿಪಿ ಜಿಪಿ ಸಿಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಚೇಟಿಯಾ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. “ದುರದೃಷ್ಟಕರ ಬೆಳವಣಿಗೆಯಲ್ಲಿ, 2009 ರ ಐಪಿಎಸ್ ಬ್ಯಾಚ್ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಶಿಲಾದಿತ್ಯ ಚೇಟಿಯಾ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ತಮ್ಮ ಪತ್ನಿಯ ಸಾವಿನ ಸುದ್ದಿಯನ್ನು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ಅಸ್ಸಾಂ ಪೊಲೀಸ್ ಕುಟುಂಬವು ದುಃಖಿತವಾಗಿದ್ದು, ಶೋಕದಲ್ಲಿದೆ. ಅವರ ತಂದೆ ಪೊಲೀಸ್ ಅಧಿಕಾರಿಯೂ ಆಗಿದ್ದ ಚೇಟಿಯಾ ಅವರು ಟಿನ್ಸುಕಿಯಾ, ನಲ್ಬರಿ, ಕೊಕ್ರಜಾರ್ ಮತ್ತು ಬರ್ಪೇಟಾದಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ ಎಂದಿದ್ದಾರೆ. ಚೇಟಿಯಾ ಅವರಿಗೆ 2015 ರಲ್ಲಿ ಪೊಲೀಸ್ ಪದಕ ನೀಡಿ ಗೌರವಿಸಲಾಗಿತ್ತು ಅವರ ಧೈರ್ಯಕ್ಕೆ ಹೆಸರುವಾಸಿಯಾದ ಚೇಟಿಯಾ ಅವರು ಕ್ರಿಮಿನಲ್ ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹಲವಾರು ಕಾರ್ಯಾಚರಣೆಗಳನ್ನು ನಡೆಸಿದರು, ಇದಕ್ಕಾಗಿ ಅವರು 2015 ರಲ್ಲಿ ಸ್ವಾತಂತ್ರ್ಯ ದಿನದಂದು ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದರು. ತೇಜ್‌ಪುರ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳನ್ನು ಕಲಿತು ಟಾಪರ್ ಆಗಿದ್ದಾರೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.