NEWS

Namma Metro: ಸೂಸೈಡ್ ಹಾಟ್‌ಸ್ಪಾಟ್ ಆಗ್ತಿದ್ಯಾ ನಮ್ಮ ಮೆಟ್ರೋ? 6 ತಿಂಗಳಲ್ಲಿ ನಿದ್ದೆಗೆಡಿಸಿದ 6 ಪ್ರಕರಣ!

ನಮ್ಮ ಮೆಟ್ರೋ ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋದಲ್ಲಿ (Namma Metro Bengaluru) ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಹೀಗಾಗಿ ನಮ್ಮ ಮೆಟ್ರೋ ಆತ್ಮಹತ್ಯೆಯ (Suicide in Bengaluru Metro) ಹಾಟ್‌ಸ್ಪಾಟ್ ಆಗ್ತಿದ್ಯಾ ಅನ್ನೋ ಅನುಮಾನ ಸೃಷ್ಟಿಯಾಗಿದೆ. ಬೆಂಗಳೂರಿನ ಮೆಟ್ರೋ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕೇಸ್‌ಗಳು ಹೆಚ್ಚುತ್ತಿದ್ದು, ಕಳೆದ ಆರು ತಿಂಗಳಲ್ಲಿ ನಡೆದ ಆರು ಆತ್ಮಹತ್ಯೆ ಪ್ರಕರಣಗಳು ಬಿಎಂಆರ್‌ಸಿಎಲ್ ಮತ್ತು ಪೊಲೀಸರ ನಿದ್ದೆಗೆಡಿಸಿದೆ. ಪ್ರಯಾಣಿಕರ ನೆಪದಲ್ಲಿ ಬಂದು ಪದೇ ಪದೇ ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುತ್ತಿರುವುದು ಅಲ್ಲಿನ ಸಿಬ್ಬಂದಿಗೂ ತಲೆಕೆಡಿಸಿದ್ದು, ಇದರಿಂದ ಗಂಟೆಗಟ್ಟಲೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಇದನ್ನೂ ಓದಿ: Kisan Samman Nidhi: ಗುಡ್‌ನ್ಯೂಸ್‌! ರೈತರೇ ನಿಮ್ಮ ಬ್ಯಾಂಕ್‌ ಅಕೌಂಟ್‌ ನೋಡಿ! ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್ ಮಾಡಿದ ನರೇಂದ್ರ ಮೋದಿ ಇದು ನಮ್ಮ ಮೆಟ್ರೋ ವ್ಯವಸ್ಥೆಯ ಒಳಗಿನ ಅವ್ಯವಸ್ಥೆಯಾ? ಸಾಮಾನ್ಯವಾಗಿ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಮಾತ್ರ ಬಿಎಂಆರ್ಸಿಎಲ್ ಸೆಕ್ಯುರಿಟಿಗಳು ರೈಲುಗಳು ಬರುವಾಗ ಆಲರ್ಟ್ ಆಗುತ್ತಿದ್ದು, ಬೇರೆಡೆ ಬಿ ಎಂ ಆರ್ ಸಿ ಎಲ್ ಸೆಕ್ಯೂರಿಟಿಗಳು ಅಷ್ಟೊಂದು ಎಚ್ಚರಿಕೆಯಿಂದ ಇರೋದಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೇ, ಸೆಕ್ಯುರಿಟಿಗಳು ಮತ್ತು ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್‌ಡಿ ಡೋರ್ ಅಳವಡಿಕೆ ಮಾಡಲಾಗಿದ್ದು, ಆದರೆ ನಮ್ಮ ಬೆಂಗಳೂರಿನ ಮೆಟ್ರೋದಲ್ಲಿ ಮಾತ್ರ ಇನ್ನೂ ಪಿಎಸ್‌ಡಿ ಅಳವಡಿಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭವಾಗಿ ಹದಿಮೂರು ವರ್ಷಗಳು ಕಳೆದಿವೆ. ಆದರೂ ಟ್ರ್ಯಾಕ್‌ಗೆ ಇದುವರೆಗೂ ಯಾವುದೇ ಭದ್ರತೆ ಇಲ್ಲ. 2011 ರಿಂದ ಮೆಟ್ರೋ ಆರಂಭಗೊಂಡಿದ್ದು, ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಳನ್ನು ಮಾಡದೇ ಇರುವುದು ನಿರ್ಲಕ್ಷ್ಯದ ಪರಿಣಾಮದಿಂದಲೇ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: Kisan Samman Nidhi: ಗುಡ್‌ನ್ಯೂಸ್‌! ರೈತರೇ ನಿಮ್ಮ ಬ್ಯಾಂಕ್‌ ಅಕೌಂಟ್‌ ನೋಡಿ! ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್ ಮಾಡಿದ ನರೇಂದ್ರ ಮೋದಿ ಕಳೆದ 6 ತಿಂಗಳಲ್ಲಿ ನಡೆದ ಅವಘಡಗಳು ದಿನಾಂಕ: 1 ಜನವರಿ 2024 ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ ಮೊಬೈಲ್ ತೆಗೆಯಲು ಟ್ರ್ಯಾಕ್‌ಗೆ ಇಳಿದ ಮಹಿಳೆ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಉಳಿದ ಜೀವ ದಿನಾಂಕ: 5 ಜನವರಿ 2024 ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ, ಐಸಿಯುನಲ್ಲಿ ಚಿಕಿತ್ಸೆ ದಿನಾಂಕ: 6 ಜನವರಿ 2024 ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಪ್ರತ್ಯಕ್ಷ, ಆತಂಕಗೊಂಡ ಪ್ರಯಾಣಿಕರು ದಿನಾಂಕ ಮಾರ್ಚ್- 12 ರಂದು 2024 ಸ್ಥಳ :- ಜ್ಞಾನ ಭಾರತಿ ಮೆಟ್ರೋ ನಿಲ್ದಾಣ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ಯಾಡಕ್ಟ್ ನಲ್ಲಿ ಕಾಣಿಸಿಕೊಂಡಿದ್ದ ಅಪರಿಚಿತ ವ್ಯಕ್ತಿ ದಿನಾಂಕ:- 21/03/2024 ಸ್ಥಳ :- ಅತ್ತಿಗುಪ್ಪೆ ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಸಾವನ್ನಪ್ಪಿದ ಯುವಕ -ಧ್ರುವ್ ಎನ್ನುವ 19/20 ವರ್ಷದ ಯುವಕ, ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದ ಯುವಕ ದಿನಾಂಕ:- 10/06/2024 ಸ್ಥಳ:- ಹೊಸ್ಕೆರೆ ಹಳ್ಳಿ -ಹೊಸ್ಕೆರೆ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಹಾರಿದ ಯುವಕ; ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯುವಕ ಬಚಾವ್ ಒಟ್ನಲ್ಲಿ ಪ್ರಯಾಣಿಕರ ನೆಪದಲ್ಲಿ ಬಂದು ಪದೇ ಪದೇ ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುತ್ತಿರುವುದು ಅಲ್ಲಿನ ಸಿಬ್ಬಂದಿಗೂ ತಲೆಕೆಡಿಸಿದ್ದು, ಇದರಿಂದ ಗಂಟೆಗಟ್ಟಲೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.