NEWS

Successful Person: ಲೈಫ್‌ನಲ್ಲಿ ಸಕ್ಸಸ್‌ ಆಗ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ ಲೈಫ್‌ನಲ್ಲಿ ಅಭಿವೃದ್ಧಿ ಕಾಣಬೇಕು, ಏಳಿಗೆ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರು ಮಾತ್ರ ಇದನ್ನು ನನಸಾಗಿ ಕೊಳ್ಳುತ್ತಾರೆ. ಜೀವನದಲ್ಲಿ ಸಕ್ಸಸ್‌ ಸುಮ್‌ಸುಮ್‌ನೇ ಅಂತೂ ಬರಲ್ಲ. ಅದಕ್ಕೆ ನಮ್ಮ ಪರಿಶ್ರಮ, ಬದ್ಧತೆ ಮುಖ್ಯವಾಗುತ್ತದೆ. ಇಲ್ಲಿ, ಜೀವನದಲ್ಲಿ ಯಾವಾಗಲೂ ಮುಂದುವರಿಯುವ ಯಶಸ್ವಿ ಜನರ ಅಭ್ಯಾಸಗಳನ್ನು ನೋಡೋಣ. ನೀವೂ ಈ ಅಭ್ಯಾಸಗಳನ್ನು ಅಳವಡಿಸಕೊಂಡಲ್ಲಿ ಅವರಂತೆ ಸಾಧನೆ ಮಾಡಬಹುದು. ಜೀವನದಲ್ಲಿ ಯಾವಾಗಲೂ ಮುನ್ನಡೆಯುವ ಯಶಸ್ವಿ ಜನರ 8 ಅಭ್ಯಾಸಗಳು ಸ್ಪಷ್ಟ ಮತ್ತು ಸಾಧಿಸಬಹುದಾದ ಗುರಿಗಳು ಯಶಸ್ವಿ ಜನರು ತಾವು ಯಶಸ್ವಿಯಾಗಬೇಕೆಂದು ಮಾತ್ರ ಹೇಳುವುದಿಲ್ಲ. ಯಶಸ್ಸು ಅವರಿಗೆ ಹೇಗೆ ಕಾಣುತ್ತದೆ ಮತ್ತು ಅದನ್ನು ಸಾಧಿಸುವ ಬಗ್ಗೆ ಬ್ಲೂಪ್ರಿಂಟ್‌ ರೆಡಿ ಮಾಡಿಕೊಳ್ಳುತ್ತಾರೆ. ಸ್ಪಷ್ಟ ಮತ್ತು ಸಾಧಿಸಬಹುದಾದ ಗುರಿ ಹೊಂದಿರುವುದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಪ್ರೇರಣೆಯನ್ನು ನೀಡುತ್ತದೆ. ನೀವೂ ಯಶಸ್ವಿಯಾಗಬೇಕು ಎಂದರೆ ಮೊದಲಿಗೆ ನಿಮ್ಮ ಗುರಿ ಮತ್ತು ಅದನ್ನು ಸಾಧಿಸುವ ಹಂತಗಳ ಬಗ್ಗೆ ಗಮನ ಕೊಡಿ. ವೈಫಲ್ಯವನ್ನು ಸ್ವೀಕರಿಸುವುದು ಜೀವನದಲ್ಲಿ ಯಶಸ್ವಿ ಹೊಂದಿರುವವರು ಫೆಲ್ಯೂರ್‌ಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕಲ್ಲ, ವಿಫಲಗಳನ್ನು ಕಲಿಯಲು, ಬೆಳೆಯಲು ಮತ್ತು ಸುಧಾರಿಸಲು ಇರುವ ಅವಕಾಶ ಎಂದು ನೋಡುತ್ತಾರೆ. ಸೋಲನ್ನು ಸ್ವೀಕರಿಸುವ ಮತ್ತು ಕಲಿಯುವ ಈ ಸಾಮರ್ಥ್ಯವು ಕೆಲಸಗಳನ್ನು ನಿಭಾಯಿಸುವ ಕಾರ್ಯವಿಧಾನಗಳು ಮತ್ತು ಹೊಂದಾಣಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ಜೀವನದಲ್ಲಿ ಮುಂದುವರಿಯಲು ಯಶಸ್ವಿ ಜನರು ಬೆಳೆಸಿಕೊಳ್ಳುವ ಮುಖ್ಯ ಅಭ್ಯಾಸ ಎಂದರೆ ಅದು ಕೃತಜ್ಞತೆ. ಅವರ ಬಳಿ ಏನಿದೆಯೋ ಅಷ್ಟಕ್ಕೇ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ನೀವು ಯಶಸ್ವಿ ಜನರ ಅಭ್ಯಾಸಗಳನ್ನು ಅನುಕರಿಸಲು ಬಯಸಿದರೆ, ಮೊದಲಿಗೆ ಈ ಅಭ್ಯಾಸ ರೂಡಿಸಿಕೊಳ್ಳಿ. ಸಂಬಂಧಗಳಲ್ಲಿ ಹೂಡಿಕೆ ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆಯೂ, ಸಾಮಾನ್ಯವಾಗಿ ಬೆಂಬಲ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳು ಇರುತ್ತಾರೆ. ಅರ್ಥಪೂರ್ಣ ಸಂಬಂಧಗಳು ಸಂತೋಷದ ಮತ್ತು ಪೂರೈಸುವ ಜೀವನಕ್ಕೆ ಪ್ರಮುಖವೆಂದು ತಿಳಿದು ಸಂಬಂಧಗಳನ್ನು ಪೋಷಿಸಲು ಅವರು ಸಮಯ ಮೀಸಲಿಡುತ್ತಾರೆ. ಸ್ವ-ಆರೈಕೆಗೆ ಆದ್ಯತೆ ನೀಡುವುದು ಅನೇಕ ಯಶಸ್ವಿ ವ್ಯಕ್ತಿಗಳು ತಮ್ಮನ್ನು ತಾವು ಕಾಳಜಿ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ನಿಯಮಿತ ವ್ಯಾಯಾಮ ಅಥವಾ ಆರೋಗ್ಯಕರ ಕ್ರಮ, ಧ್ಯಾನ, ಒಳ್ಳೆಯ ಪುಸ್ತಕ ಓದುವುದು ಸೇರಿ ಸ್ವ-ಆರೈಕೆ ಮಾಡಿಕೊಳ್ಳುತ್ತಾರೆ. ಇದು ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾನ್ನಾಗಿಸುವ ಒಂದು ಅಂಶವಾಗಿದೆ. ಜೀವಮಾನದ ಕಲಿಕೆ ಯಶಸ್ವಿ ಜನರು ಸಾಮಾನ್ಯವಾಗಿ ಯಾವಾಗಲೂ ಕುತೂಹಲ ಮತ್ತು ಕಲಿಕೆಯನ್ನು ಪ್ರೀತಿಸುತ್ತಾರೆ. ಜೀವನದ ಕೊನೆಯವರೆಗೂ ಹೊಸದನ್ನು ಕಲಿಯುವುದು ಇರುತ್ತದೆ ಎಂದು ಅವರು ನಂಬಿದ್ದು, ಅದರಂತೆ ಕಲಿಯುತ್ತಲೇ ಇರುತ್ತಾರೆ. ನೀವು ಇವರಂತೆ ಯಶಸ್ವಿಯಾಗಲು ಬಯಸಿದರೆ ಮೊದಲಿಗೆ ಕಲಿಯಲು ಯಾವಾಗಲೂ ನಿಮ್ಮನ್ನು ನೀವು ತೆರೆದುಕೊಂಡಿರಿ. ಇದನ್ನೂ ಓದಿ: ತಲೆದಿಂಬು ಇಟ್ಟುಕೊಂಡು ಮಲಗೋದು ಒಳ್ಳೆಯದಾ? ಕೆಟ್ಟದ್ದಾ? ಜೀವನಪರ್ಯಂತ ಕಲಿಯುವ ಈ ಅಭ್ಯಾಸವು ಮನಸ್ಸನ್ನು ತೀಕ್ಷ್ಣವಾಗಿ, ಆಲೋಚನೆಗಳನ್ನು ತಾಜಾವಾಗಿ ಮತ್ತು ವಿಧಾನವನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಮತ್ತು ಯಶಸ್ಸನ್ನು ನೀಡುತ್ತದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಯಶಸ್ವಿ ಜನರು ಆಪಾದನೆ ಮಾಡಲ್ಲ. ಅವರಿಂದ ತಪ್ಪಾದರೆ ತಪ್ಪು ಎಂದು ಒಪ್ಪಿಕೊಂಡು ಅದನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ. ಅವರು ಇತರರತ್ತ ಬೆರಳು ತೋರಿಸುವುದಿಲ್ಲ ಬದಲಿಗೆ ತಮ್ಮ ಕ್ರಮಗಳು ಮತ್ತು ನಿರ್ಧಾರಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನೀವು ಜೀವನದಲ್ಲಿ ಮುಂದುವರಿಯಲು ಬಯಸಿದರೆ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ಪ್ರಾರಂಭಿಸಿ. ಅಂತಿಮ ಗುರಿಯನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳುವುದು ಯಶಸ್ವಿ ಜನರು ತಮ್ಮ ಅಂತಿಮ ಗುರಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಎಷ್ಟೇ ಅಡೆತಡೆಗಳು ಎದುರಾದರೂ, ಎಷ್ಟೇ ಬಾರಿ ಬಿದ್ದರೂ ಗುರಿ ಕಡೆ ಮಾತ್ರ ಚಿತ್ತ ನೆಟ್ಟಿರುತ್ತಾರೆ. ಸಕ್ಸಸ್‌ ಸಿಗದಿದ್ದಾಗ ತಮ್ಮ ವಿಧಾನವನ್ನು ಬದಲಾಯಿಸಬಹುದು, ತಮ್ಮ ಕಾರ್ಯತಂತ್ರಗಳನ್ನು ಪುನರ್ವಿಮರ್ಶಿಸಬಹುದು ಅಥವಾ ಅಗತ್ಯವಿದ್ದಾಗ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಬಹುದು. ಆದರೆ ಗುರಿ ಮಾತ್ರ ಬಿಡದೇ ಬೆನ್ನಟ್ಟುತ್ತಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.