ಜಸ್ಟಿಸ್ ಹೇಮಾ ಸಮಿತಿ ವರದಿ (Hema Committee Report) ಮಲಯಾಳಂ ಸಿನಿಮಾ (Malayalam) ಇಂಡಸ್ಟ್ರಿಯಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದೆ. ವರದಿ ಹೊರಬಿದ್ದ ಬಳಿಕ ಕೆಲ ನಟಿಯರು ತಮಗಾದ ಅನ್ಯಾಯ, ಕಿರುಕುಳ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ. ರೇವತಿ ಸಂಪತ್ ನಂತರ, ನಟಿ ಮೀನು ಮುನೀರ್ ಒಬ್ಬರಲ್ಲ, ಇಬ್ಬರಲ್ಲ ನಾಲ್ವರು ನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡ್ತಿದ್ದಾರೆ. ಸಿನಿಮಾ ಸೆಟ್ಗಳಿಗೆ ಹೋದಾಗ ಬೆನ್ನು ಬಿಡದೆ ಕಾಡಿದ್ರು. ಹೇಗೆಲ್ಲಾ ಕಿರುಕುಳ ಕೊಟ್ರು ಅನ್ನೋದನ್ನು ನಟಿ ಮೀನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ಲೈಂಗಿಕ ಕಿರುಕುಳ ಕೊಟ್ರು ನಾಲ್ವರು ನಟರು’ ನಟಿ ಮೀನು ಮುನೀರ್ ಅವರು ಸಿಪಿಐ (ಎಂ) ಶಾಸಕ ಸೇರಿದಂತೆ ಹಲವಾರು ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಮೀನು, ಮಲಯಾಳಂ ನಟರಾದ ಮುಖೇಶ್, ಜಯಸೂರ್ಯ, ಮಣಿಯನ್ಪಿಲ ರಾಜು ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಸದಸ್ಯ ಎಡವೇಲ ಬಾಬು ನನಗೆ ಕಿರುಕುಳ ನೀಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ವಿಡಿಯೋ ಮೂಲಕ ನೋವು ತೋಡಿಕೊಂಡ ನಟಿ ಹೇಮಾ ಸಮಿತಿ ವರದಿಯ ನಂತರ ಕೇರಳ ಪೊಲೀಸ್ ತಂಡಕ್ಕೆ ದೂರು ನೀಡುತ್ತೇನೆ ಎಂದು ಮೀನು ಮುನೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 2009 ರಲ್ಲಿ ‘ಕ್ಯಾಲೆಂಡರ್’ ಮತ್ತು 2011 ರಲ್ಲಿ ‘ನಾಡಕಮೆ ಉಲಕಂ’ ಚಿತ್ರೀಕರಣದ ಸಮಯದಲ್ಲಿ ಹೋಟೆಲ್‌ನಲ್ಲಿ ನಟನೊಬ್ಬ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂದು ನಟಿ ಆರೋಪಿಸಿದ್ದಾರೆ. ಮೀನು ಮುನೀರ್ ಈ ಆರೋಪಿಗಳ ಸೋಶಿಯಲ್ ಮೀಡಿಯಾ ಖಾತೆ ಟ್ಯಾಗ್ ಮಾಡಿ ಫೇಸ್ ಬುಕ್ ವಿಡಿಯೋ ಮೂಲಕ ತನಗಾದ ಅನ್ಯಾಯವನ್ನು ವಿವರಿಸಿದ್ದಾರೆ. ಬೆಡ್ರೂಮ್ಗೆ ನುಗ್ಗುತ್ತಿದ್ರು ನಟರು! ಮೀನು ಮುನೀರ್, “ನಾನು ಇದ್ದ ಬೆಡ್ ರೂಮ್ ಏಕಾಏಕಿ ನುಗ್ಗಿದ್ರು. ನನ್ನನ್ನು ಹಾಸಿಗೆಯ ಮೇಲೆ ಎಳೆದುಕೊಂಡು ಹೋಗಿ, ಒಳ್ಳೆಯ ಅವಕಾಶಗಳಿಗಾಗಿ ಯೋಚಿಸಬೇಕು ಎಂದು ಹೇಳಿದ್ರು. ಬಳಿಕ ಅಲ್ಲಿಂದ ನಾನು ಹೊರ ಬಂದಿದ್ದೆ. ಅದಕ್ಕೂ ಮುನ್ನ ಕಾರಿನಲ್ಲಿ ಹೋಗ್ತಿದ್ದ ವೇಳೆ ಮತ್ತೊಬ್ಬ ನಟ ಮರುದಿನ ರಾತ್ರಿ ನನ್ನ ರೂಮಿಗೆ ಬರುವುದಾಗಿ ಹೇಳಿದ್ದರು. ಅಷ್ಟೇ ಅದೇ ರಾತ್ರಿ ನನ್ನ ರೂಮಿಗೆ ಬಂದೇ ಬಿಟ್ಟ. 2008 ರಲ್ಲಿ ಮೂರನೇ ನಟನ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎಂದು ನಟಿ ಮೀನು ಮುನೀರ್ ಆರೋಪಿಸಿದ್ದಾರೆ. ಟಾಯ್ಲೆಟ್ನಲ್ಲಿ ತಬ್ಬಿ ಮುತ್ತಿಟ್ಟ ಕಾಮುಕ! ಮೀನು ಮುನೀರ್, “ಒಮ್ಮೆ ತಿರುವನಂತಪುರಂನಲ್ಲಿ ಶೂಟಿಂಗ್ ವೇಳೆ ನಾನು ಟಾಯ್ಲೆಟ್ ನಿಂದ ಬರ್ತಿದ್ದ ವೇಳೆ, ಆ ನಟ ನನ್ನನ್ನು ಹಿಂದಿನಿಂದ ಹಿಡಿದು ಕೊಂಡು ಮುತ್ತಿಟ್ಟರು. ನಾನು ಅವನನ್ನು ತಳ್ಳಿ ಓಡಿಹೋದೆ. ಅವರು ನನ್ನನ್ನು ಫ್ಲಾಟ್ ಗೆ ಬರುವಂತೆಯೂ ಹೇಳಿದ್ರು. ನಾನು ಬರೋದಿಲ್ಲ ಎಂದಾಗ ಆತ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಇದನ್ನೂ ಓದಿ: Malayalam Actress: ಅಡ್ಜಸ್ಟ್ ಮಾಡಿಕೊಳ್ಳಲು ರೆಡಿನಾ ಎಂದ, 1 ಗಂಟೆ ಟಾರ್ಚರ್ ಕೊಟ್ಟ! ಖ್ಯಾತ ನಟನ ವಿರುದ್ಧ ನಟಿ ‘ಬಾಂಬ್’! ಸದಸ್ಯತ್ವ ಕೊಡ್ತೀವಿ ಅಂತ ಫ್ಲಾಟ್ಗೆ ಕರೆಸಿಕೊಂಡು ಮಾಡಿದ್ದೇನು? ಮೀನು ಮುನೀರ್ ಅವರು 2013 ರಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದೆ. ಮೂರು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ ವ್ಯಕ್ತಿ ಅಮ್ಮಾ ಸದಸ್ಯತ್ವಕ್ಕೆ ಅರ್ಹರು. ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಬಗ್ಗೆ ನಾನು ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ, ಅವರು ನನ್ನನ್ನು ಅವರ ಫ್ಲಾಟ್ ಗೆ ಕರೆದರು. ನಾನು ಅವರ ಫ್ಲಾಟ್ ನಲ್ಲಿ ಅರ್ಜಿ ತುಂಬುತ್ತಿದ್ದಾಗ, ಅವರು ಹಿಂದಿನಿಂದ ನನ್ನ ಕುತ್ತಿಗೆಗೆ ಮುತ್ತಿಟ್ಟರು. ನಾನು ಫ್ಲಾಟ್ ನಿಂದ ಓಡಿಹೋದೆ. “ನಾನು ಸದಸ್ಯತ್ವವನ್ನು ಸಹ ಪಡೆದಿಲ್ಲ.” ಇಂತಹ ಕೆಟ್ಟ ಅನುಭವಗಳಿಂದಾಗಿ ಮಲಯಾಳಂ ಚಿತ್ರರಂಗವನ್ನು ತೊರೆದು ಚೆನ್ನೈಗೆ ಶಿಫ್ಟ್ ಆಗಿ ತಮಿಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಆರಂಭಿಸಿದೆ ಎಂದು ನಟಿ ಮೀನು ಹೇಳಿದ್ದಾರೆ. None
Popular Tags:
Share This Post:
Bigg Boss 11: ಬಿಗ್ ಬಾಸ್ ಮನೆಯಲ್ಲಿ ಒಡಕು, ಬಿರುಕು, ಮಸಿ! ಮನೆ ಈಗ ರಣಾಂಗಣ
- by Sarkai Info
- October 7, 2024
What’s New
Spotlight
Today’s Hot
-
- October 7, 2024
-
- October 6, 2024
-
- October 6, 2024
Featured News
Latest From This Week
T20 World Cup: ರೋಚಕ ಕದನದಲ್ಲಿ ಪಾಕ್ ವಿರುದ್ಧ ಗೆದ್ದ ಭಾರತ! ಸೆಮಿಫೈನಲ್ ಆಸೆ ಇನ್ನೂ ಜೀವಂತ!
NEWS
- by Sarkai Info
- October 6, 2024
Subscribe To Our Newsletter
No spam, notifications only about new products, updates.