NEWS

Food Combos: ಮನುಷ್ಯರಿಗಷ್ಟೇ ಅಲ್ಲ, ಆಹಾರಗಳಲ್ಲೂ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಂತೆ ಜೋಡಿ!

ಸಮೋಸಾ ಕೆಲವು ಆಹಾರ ಪದಾರ್ಥಗಳು ತುಂಬಾನೇ ಸ್ವಾದಿಷ್ಟಕರ ಮತ್ತು ರುಚಿಕರವಾಗಿರುತ್ತವೆ. ಜೊತೆಗೆ ಸುವಾಸನೆಯಿಂದ ಕೂಡಿರುತ್ತವೆ. ಅದಷ್ಟೇ ಅಲ್ಲದೆ, ಅದಕ್ಕೊಂದು ಸೂಪರ್ ಜೋಡಿ ಆಹಾರ ಪದಾರ್ಥವು ಸಹ ಇಲ್ಲಿರುವುದು ತುಂಬಾನೇ ಅಚ್ಚರಿಪಡಿಸುವ ಸಂಗತಿ . ಒಂದು ರೀತಿಯಲ್ಲಿ ಮ್ಯಾಜಿಕ್ ಜೋಡಿ ಆಹಾರ ಪದಾರ್ಥಗಳು. ಒಂದು ಆಹಾರ ಪದಾರ್ಥ ಮತ್ತೊಂದು ಆಹಾರ ಪದಾರ್ಥದ ಜೊತೆಗೆ ಸೇರಿಕೊಂಡಾಗ ಆ ಜೋಡಿ ಆಹಾರಕ್ಕೆ ಇನ್ನಷ್ಟು ಮೆರುಗು ಸಿಗುತ್ತದೆ. ಈ ಆಹಾರ ಪದಾರ್ಥಗಳ ಸಂಯೋಜನೆಗಳು ಬರೀ ನಮ್ಮ ಭಾರತ ದೇಶದಲ್ಲಿ ಅಲ್ಲದೆ, ಇಡೀ ಪ್ರಪಂಚದಾದ್ಯಂತ ಈ ಜೋಡಿಗಳು ಅಸ್ತಿತ್ವದಲ್ಲಿವೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಅನೇಕ ಕಂಟೆಂಟ್ ಕ್ರಿಯೇಟರ್‌ಗಳು ಕ್ಯಾಮೆರಾದ ಮುಂದೆ ಅತ್ಯಂತ ವಿಲಕ್ಷಣವಾದ ಆಹಾರ ಸಂಯೋಜನೆಗಳನ್ನು ತಯಾರಿಸುವುದನ್ನು ವಿಡಿಯೋ ಮಾಡುತ್ತಾರೆ. ಇಲ್ಲಿವೆ ನೋಡಿ 6 ಐಕಾನಿಕ್ ಫುಡ್ ಕಾಂಬೋಸ್: ಚಾಯ್-ಸಮೋಸಾ ಸರ್ಕಾರಿ ಕಛೇರಿಗಳಿಂದ ಹಿಡಿದು ಖಾಸಗಿ ಕಂಪನಿಗಳಲ್ಲಿ ಸಂಜೆ ಹೊತ್ತಿನಲ್ಲಿ ಉದ್ಯೋಗಿಗಳಿಗೆ ತಿನ್ನಲು ಇವತ್ತಿಗೂ ಸಹ ಚಾಯ್ ಮತ್ತು ಸಮೋಸಾ ನೀಡುತ್ತಾರೆ. ಸಮೋಸಾಗಳು ಹೆಚ್ಚಿನ ಕಚೇರಿ ಸ್ಥಳಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ಸಂಜೆಯ ಸಮಯದಲ್ಲಿ ಒಂದು ಕಪ್ ಬಿಸಿ ಚಹಾದ ಜೊತೆಗೆ ಪರಿಪೂರ್ಣವಾದ ಜೋಡಿಯಾಗಿದೆ. ಈ ರುಚಿಕರವಾದ ದೇಸಿ ಕಾಂಬೊ ಯಾವಾಗಲೂ ದಣಿದ ದಿನದ ನಂತರ ವ್ಯಕ್ತಿಯ ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ದೈನಂದಿನ ಡೋಸ್ ಗಾಸಿಪ್‌ಗಳೊಂದಿಗೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ದಾಲ್-ಚಾವಲ್ ದಾಲ್ ಚಾವಲ್ ಎಂದರೆ ಅನ್ನ ಮತ್ತು ಬೇಳೆ ಸಾರು ತುಂಬಾನೇ ಒಳ್ಳೆಯ ಜೋಡಿಯಾಗಿದೆ. ಈ ಜೋಡಿ “ಕಂಫರ್ಟ್ ಫುಡ್” ಅಥವಾ “ಘರ್ ಕಾ ಖಾನಾ” ಎಂದರೆ ಸರಿಯಾದ ಮನೆಯ ಊಟ ಅಂತ ಹೇಳಲಾಗುತ್ತದೆ. ಇದನ್ನು ಯಾವುದೇ ಚಮಚವನ್ನು ಬಳಸಿ ತಿನ್ನದೇ, ಕೈಗಳನ್ನು ಬಳಸಿ ತಿನ್ನುವಾಗ ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಇದರ ಜೊತೆಗೆ ಸ್ವಲ್ಪ ಮಾವಿನಕಾಯಿ ಉಪ್ಪಿನಕಾಯಿ ಅಥವಾ ಪಾಪಡ್‌ನೊಂದಿಗೆ ತಿಂದರೆ, ಇದು ಇನ್ನೂ ಉತ್ತಮವಾದ ಜೋಡಿಯಾಗುತ್ತದೆ. ಬಟರ್ ಚಿಕನ್-ಗಾರ್ಲಿಕ್ ಬಟರ್ ನಾನ್ ಜಾಗತಿಕ ಖ್ಯಾತಿಯನ್ನು ಗಳಿಸಿರುವ ಪಂಜಾಬಿ ಫುಡ್ ಕಾಂಬೊ, ಸಿಹಿ ಮತ್ತು ಮಸಾಲೆಯುಕ್ತ ಬಟರ್ ಚಿಕನ್ ಅನ್ನು ಬೆಳ್ಳುಳ್ಳಿ ಮತ್ತು ಬೆಣ್ಣೆಯೊಂದಿಗೆ ತಯಾರಿಸಿದ ನಾನ್‌ನೊಂದಿಗೆ ಸೇವಿಸಿದಾಗ ಇನ್ನಷ್ಟು ರುಚಿಕರವಾಗಿರುತ್ತದೆ. ಈ ರುಚಿಕರವಾದ ಸಂಯೋಜನೆಯು ನಿಮಗೆ ಎಲ್ಲವನ್ನೂ ಮರೆತು ಬಿಡುವಂತೆ ಮಾಡುತ್ತದೆ. ಈ ಜೋಡಿ ಆಹಾರ ಪದಾರ್ಥಗಳು ನಿಮ್ಮ ನಾಲಿಗೆಗೆ ಉತ್ತಮವಾದ ಬೆಣ್ಣೆಯ ಸುವಾಸನೆಯನ್ನು ನೀಡುತ್ತದೆ. ಇದನ್ನೂ ಓದಿ: Chikkamagaluru Farmer Success Story: ಚಿಕ್ಕಮಗಳೂರಿನ ಈ ರೈತನಿಗೆ ಬರವೇ ವರವಾಯ್ತು! 20 ಲಕ್ಷಕ್ಕೆ 95 ಲಕ್ಷ ಆದಾಯ ರಬ್ಡಿ-ಜಲೇಬಿ ಇಂಡಿಯನ್ ಡೆಸರ್ಟ್ ಕಾಂಬೊಗಳು ಯಾವುದೇ ಇತರ ಸಿಹಿಭಕ್ಷ್ಯವನ್ನು ಆಳಬಹುದು. ಬಿಸಿ ಮತ್ತು ಗರಿಗರಿಯಾದ ಜಲೇಬಿಯನ್ನು ಸಕ್ಕರೆ ಪಾಕದಲ್ಲಿ ಅದ್ದಿ ತಂಪು ಮತ್ತು ಕೆನೆ ರಬ್ಡಿಯೊಂದಿಗೆ ಸವಿದಾಗ ತುಂಬಾನೇ ಒಳ್ಳೆಯ ಜೋಡಿಯಾಗಿರುತ್ತದೆ. ಈ ಸಿಹಿ ಸಂಯೋಜನೆಯು ಎಲ್ಲಾ ಅಂಶಗಳಲ್ಲಿ ಪರಿಪೂರ್ಣವಾಗಿದೆ. ದಹಿ-ಪರಾಠಾ ದಹಿ ಪರಾಠಾ ಮತ್ತೊಂದು ಅದ್ಭುತವಾದ ಹಾಟ್-ಮೀಟ್ಸ್-ಕೋಲ್ಡ್ ದೇಸಿ ಫುಡ್ ಕಾಂಬೊ ಅಂತ ಹೇಳಬಹುದು. ಪರಾಠದೊಂದಿಗೆ ಮೊಸರನ್ನು ಹಚ್ಚಿಕೊಂಡು ತಿನ್ನಿರಿ. ಗೋಭಿ, ಮೂಲಿ, ಆಲೂ, ಪನೀರ್, ಮಿಶ್ರಿತ, ಮತ್ತು ತಣ್ಣಗಾದ ಮತ್ತು ಕೆನೆ ಮೊಸರಿನ ಬಟ್ಟಲಿನೊಂದಿಗೆ ಅದನ್ನು ಬಿಸಿ ಮತ್ತು ತಾಜಾವಾಗಿ ಆನಂದಿಸಿ. ಇಡ್ಲಿ-ಸಾಂಬಾರ್ ಈ ದಕ್ಷಿಣ ಭಾರತದ ಜನಪ್ರಿಯ ಉಪಾಹಾರವು ಎಂದಿಗೂ ತನ್ನ ಪ್ರಭಾವ ಬೀರುವುದನ್ನು ಮರೆತಿಲ್ಲ. ಮೃದುವಾದ ಮತ್ತು ಬಿಸಿಯಾದ ಇಡ್ಲಿಗಳು ಕಟುವಾದ ಮತ್ತು ಸುವಾಸನೆಯ ಸಾಂಬಾರ್‌ನೊಂದಿಗೆ ರುಚಿಕರವಾಗಿರುತ್ತದೆ. ನೀವು ಈ ಮೃದುವಾದ ಇಡ್ಲಿಗಳನ್ನು ಸಾಂಬಾರ್‌ನಲ್ಲಿ ಮುಳುಗಿಸಿಕೊಂಡು ಸೇವಿಸಬಹುದು ಅಥವಾ ಅವುಗಳನ್ನು ಸರಳವಾಗಿ ತಿನ್ನಬಹುದು ಮತ್ತು ಜೊತೆಗೆ ಬಿಸಿ ಸಾಂಬಾರ್ ಅನ್ನು ಸವಿಯಬಹುದು. ನಿಮ್ಮ ಆಹಾರ ಸೇವಿಸುವ ಶೈಲಿ ಏನೇ ಇರಲಿ, ಈ ಸಂಯೋಜನೆಯು ಯಾವಾಗಲೂ ಸುವಾಸನೆ ಮತ್ತು ತೃಪ್ತಿಕರವಾಗಿರುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.