NEWS

Nagara Panchami: ಗಣಪತಿಯನ್ನಷ್ಟೇ ಅಲ್ಲ, ಉತ್ತರ ಕನ್ನಡದ ಇಲ್ಲೆಲ್ಲ ನಾಗಪ್ಪನಿಗೂ ನಡೆಯುತ್ತೆ ವಿಸರ್ಜನೆ!

ಇಲ್ಲಿ ವಿಡಿಯೋ ನೋಡಿ ಉತ್ತರ ಕನ್ನಡ: ಪುಟಾಣಿ ಹುಡುಗರ, ಎಳೆ ಮೀಸೆಯ ಯುವಕರ ಕೈಯಲ್ಲಿ ಮನೆ ಮನೆಗೆ ಸಾಗಿಬರುತ್ತಾನೆ ನಾಗಪ್ಪ. ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ (North Karnataka) ಮಂದಿಯ ಮಕ್ಕಳು ಹೀಗೊಂದು ಆಚರಣೆ ನಡೆಸುತ್ತಾರೆ. ನಾಗಪ್ಪನನ್ನು ತಾವೇ ಮನೆ ಮನೆಗೆ ಹೊತ್ತು ತರುತ್ತಾರೆ. ಹೀಗೆ ಖರೀದಿಸಿದ ಈ ನಾಗರ ಮೂರ್ತಿಯನ್ನು ವಿಸರ್ಜಿಸುವ ಕ್ರಮವೂ ಇಲ್ಲಿರುತ್ತದೆ. ನಾಗನ ಮೂರ್ತಿ ಮಾರಾಟ ಹೌದು, ಕರಾವಳಿ, ಮಲೆನಾಡು ಭಾಗದಲ್ಲಿ ಜನರಿಗೆ ನಾಗರ ಪಂಚಮಿ ಮನೆಯವರೊಬ್ಬರ ಪೈಕಿಯ ನೆನೆವಿನಂತೆ! ಕುಟುಂಬದ ನಾಗ, ಮನೆಯ ನಾಗ, ಜಮೀನಿನ ನಾಗ, ಊರಿನ ನಾಗ ಹೀಗೆ ನಾಗನ ನೆಲೆಯನ್ನು ಹಿರಿಯರು ಊರು ತುಂಬಾ ಕಂಡುಕೊಂಡವರು. ಏತನ್ಮಧ್ಯೆ ಉತ್ತರ ಕರ್ನಾಟಕದ ಆಚರಣೆ ಚೂರು ಬೇರೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಭಾಗದಲ್ಲಿ ವಲಸೆ ಬಂದಿರುವ ಉತ್ತರ ಕರ್ನಾಟಕದ ಜನರು ಮನೆಯಲ್ಲಿ ಮಣ್ಣಿನ ಮೂರ್ತಿ ಮಾಡಿ ನಾಗ ಪೂಜೆ ಮಾಡುತ್ತಿದ್ದರು. ಈಗ ನಾಗರ ಮೂರ್ತಿಗಳು ಮಾರಾಟವನ್ನೂ ಮಾಡುತ್ತಾರೆ. ಮಕ್ಕಳಿಂದ ಸಾಥ್‌ ಇಲ್ಲಿ ಗೃಹಿಣಿಯರು, ಮಕ್ಕಳು ನಾಗನನ್ನು ತಯಾರಿಸಿ ಮಾರಾಟ ಮಾಡುತ್ತಾರೆ‌. ಬೆಳಿಗ್ಗೆ ಹುತ್ತದ ಮಣ್ಣನ್ನು ಸಂಗ್ರಹಿಸಿ ಮಡಿಯಲ್ಲಿ ಅದಕ್ಕೆ ಹಾಲನ್ನು ಸೇರಿಸಿ ಹಿಟ್ಟಿನಂತೆ ಕಲಿಸಿ ಈ ರೀತಿ ಮೂರ್ತಿಗಳನ್ನು ಮಾಡಿ ಮಾರುತ್ತಾ ಬರುತ್ತಾರೆ. ನಾಗರಪಂಚಮಿಯ ರಜೆ ಇರುವ ಮಕ್ಕಳು ಅವರಿಗೆ ಸಾಥ್ ಕೊಡುತ್ತಾರೆ. ಇದನ್ನೂ ಓದಿ: Job Fair: ಚಿಕ್ಕಮಗಳೂರಿನಲ್ಲಿ ಮಿನಿ ಉದ್ಯೋಗ ಮೇಳ; ಟಾಟಾ, ಹೋಂಡಾ ಕಂಪೆನಿಗಳಿಂದ ನೇರ ಸಂದರ್ಶನ ಯಾರ ಕುಟುಂಬದಲ್ಲಿ ನಾಗ ಇಲ್ಲವೋ ಯಾರು ಹೊರಗೆ ತನು ಎರೆವ ಸಂಪ್ರದಾಯ ಇಟ್ಟುಕೊಂಡಿಲ್ಲವೋ ಅವರು ಇವರು ಬರುವುದನ್ನು ಕಾಯುತ್ತಿರುತ್ತಾರೆ. ಇವರು “ನಾಗಪ್ಪ ಬೇಕೇನ್ರೀ ನಾಗಪ್ಪ” ಅಂತ ಕೂಗು ಹಾಕಿಕೊಂಡು ಬರುತ್ತಾರೆ. ಒಂದಕ್ಕೆ ಇಪ್ಪತ್ತು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಇದನ್ನೂ ಓದಿ: Coastal Karnataka: 2040ಕ್ಕೆ ಮಂಗಳೂರು, ಉಡುಪಿಗೆ ಕಂಟಕ, ಅಪಾಯದ ಮುನ್ಸೂಚನೆ ನೀಡಿದ ವಿಜ್ಞಾನಿಗಳು! ಸಂಪಾದನೆಗೂ ಮೂಲ ಇಡೀ ಪಟ್ಟಣ ಸುತ್ತಿದ ಮೇಲೆ ಆ ದಿನದಂದು ಅವರು 2000-3000 ರೂಪಾಯಿ ಸಂಪಾದಿಸುತ್ತಾರೆ. ಎರಡು ದಿನ ಈ ರೀತಿ ಪದ್ಧತಿ ನಡೆಯುತ್ತದೆ. ಕೊನೆಗೆ ಷಷ್ಠಿ ಕಳೆದು ಮಾರನೇ ದಿನ ಆ ಮಣ್ಣಿನ ಮೂರ್ತಿಯನ್ನು ಗಣಪತಿಯನ್ನು ಮುಳುಗಿಸಿದ ಹಾಗೆ ವಿಸರ್ಜಿಸುತ್ತಾರೆ. ಇದು ಉತ್ತರ ಕರ್ನಾಟಕದ ಕಡೆಗಿನ ಪದ್ಧತಿ! ಒಂದೊಂದು ಕಡೆಯ ಪಂಚಮಿ ಒಂದೊಂದು ಬಗೆ ಅದೇ ವೈಶಿಷ್ಟ್ಯ! ಅದಕ್ಕೆ ಹೇಳುತ್ತಾರೆ ನಾಡಿನ ದೊಡ್ಡ ಹಬ್ಬ ನಾಗರಪಂಚಮಿಯೆಂದು! None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.