NEWS

Mysuru Dasara 2024: ದಸರಾ ಆನೆಗಳಿಗೆ ರಾಜಬೀದಿಯಲ್ಲಿ ತಾಲೀಮು; ಕಂಜನ್‌ ಆನೆಗಷ್ಟೇ ವಿಶ್ರಾಂತಿ!

ಇಲ್ಲಿ ವಿಡಿಯೋ ನೋಡಿ ಮೈಸೂರು: ನಾಡಹಬ್ಬ ದಸರಾಕ್ಕೆ ಆರಂಭಿಕ ತಯಾರಿ ಶುರುವಾಗಿದೆ. ಈಗಾಗಲೇ ಆಗಸ್ಟ್‌ 21ರಂದು ದಸರಾ ಗಜಪಡೆಗಳು (Dasara Elephants) ಅರಮನೆ ಆವರಣ ಪ್ರವೇಶಿಸಿದೆ. ಇದೀಗ ಹಂತ ಹಂತವಾಗಿ ಆನೆಗಳಿಗೆ ತಾಲೀಮು ಆರಂಭಗೊಂಡಿದೆ. ಇಂದು ಮೈಸೂರಿನ ಜಂಬೂಸವಾರಿ (Jambu Savari) ಸಾಗುವ ರಾಜಬೀದಿಯಲ್ಲಿ ದಸರಾ ಆನೆಗಳಿಗೆ ತಾಲೀಮು ನಡೆದವು. ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ದಸರಾ ಗಜಪಡೆಯ ಮೊದಲ ತಂಡದ ಆನೆಗಳಿಗೆ ತಾಲೀಮು ಆರಂಭಗೊಂಡಿದೆ. ಕಳೆದೆರಡು ದಿನದಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ತಾಲೀಮು, ಇದೀಗ ಅರಮನೆಯಾಚೆಗೆ ನಡೆಯಿತು. ಮೊದಲ ದಿನವೇ ಜಂಬೂಸವಾರಿ ಮಾರ್ಗದಲ್ಲಿ ಬನ್ನಿಮಂಟಪದವರೆಗೂ ಪೂರ್ಣಪ್ರಮಾಣದಲ್ಲಿ ಎಂಟು ಆನೆಗಳು ನಡೆದವು. ಕಾಲು ನೋವಿನಿಂದಾಗಿ ಕಂಜನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದನ್ನೂ ಓದಿ: Karnataka Weather Update: ರಾಜ್ಯದಲ್ಲಿ ಇನ್ನು 1 ವಾರ ಮಳೆ- ಯಾವ್ಯಾವ ಜಿಲ್ಲೆಗೆ ಅಲರ್ಟ್‌? ಇದನ್ನೂ ಓದಿ: Krishna Janmashtami: ಗೋಕರ್ಣದಲ್ಲಿ ಪೆಟ್ಲೆ ಹಬ್ಬಕ್ಕೆ ಕ್ಷಣಗಣನೆ; 150 ರೂಪಾಯಿಗೆ ಸಿಗುತ್ತೆ ಈ ಹಸಿರು ಪಟಾಕಿ! ತಾಲೀಮಿನಲ್ಲಿ ಅಭಿಮನ್ಯು, ಏಕಲವ್ಯ, ಧನಂಜಯ, ವರಲಕ್ಷ್ಮಿ, ಭೀಮ, ಲಕ್ಷ್ಮಿ, ರೋಹಿತ್, ಗೋಪಿ ಆನೆಗಳು ಭಾಗಿಯಾಗಿದ್ದವು. ಆನೆಗಳಿಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಅರಮನೆಯ ಬಲರಾಮ ದ್ವಾರದಿಂದ ಬೆಳಗ್ಗೆ 7ಕ್ಕೆ ಹೊರಟು ಕೆ.ಆರ್‌.ವೃತ್ತ, ಸಯ್ನಾಜಿರಾವ್‌ ರಸ್ತೆ, ಕೆ.ಆರ್‌.ಆಸ್ಪತ್ರೆ, ಹೈವೇ ವೃತ್ತದ ಮೂಲಕ ಸಾಗಿ 8.25ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದವು. ಕೆಲ ಹೊತ್ತಿನ ಬಳಿಕ ಮತ್ತೆ ಅಲ್ಲಿಂದ ವಾಪಸಾದವು. ಕನ್ನಡ ಸುದ್ದಿ / ನ್ಯೂಸ್ / ರಾಜ್ಯ / ಮೈಸೂರು / Mysuru Dasara 2024: ದಸರಾ ಆನೆಗಳಿಗೆ ರಾಜಬೀದಿಯಲ್ಲಿ ತಾಲೀಮು; ಕಂಜನ್‌ ಆನೆಗಷ್ಟೇ ವಿಶ್ರಾಂತಿ! Mysuru Dasara 2024: ದಸರಾ ಆನೆಗಳಿಗೆ ರಾಜಬೀದಿಯಲ್ಲಿ ತಾಲೀಮು; ಕಂಜನ್‌ ಆನೆಗಷ್ಟೇ ವಿಶ್ರಾಂತಿ! ಇಲ್ಲಿ ವಿಡಿಯೋ ನೋಡಿ ದಸರಾ ಹಬ್ಬದ ಪ್ರಮುಖ ಆಕರ್ಷಣೆಯ ಜಂಬೂ ಸವಾರಿಗೆ ಬೇಕಾಗಿ ಗಜಪಡೆಗಳಿಗೆ ತಾಲೀಮು ಆರಂಭಗೊಂಡಿದೆ. ಮುಂದೆ ಓದಿ … 2-MIN READ Kannada Mysore,Karnataka Last Updated : August 26, 2024, 6:50 pm IST Whatsapp Facebook Telegram Twitter Follow us on Follow us on google news Published By : Irshad Kinnigoli Reported By : Suma C S ಸಂಬಂಧಿತ ಸುದ್ದಿ ಮೈಸೂರು: ನಾಡಹಬ್ಬ ದಸರಾಕ್ಕೆ ಆರಂಭಿಕ ತಯಾರಿ ಶುರುವಾಗಿದೆ. ಈಗಾಗಲೇ ಆಗಸ್ಟ್‌ 21ರಂದು ದಸರಾ ಗಜಪಡೆಗಳು (Dasara Elephants) ಅರಮನೆ ಆವರಣ ಪ್ರವೇಶಿಸಿದೆ. ಇದೀಗ ಹಂತ ಹಂತವಾಗಿ ಆನೆಗಳಿಗೆ ತಾಲೀಮು ಆರಂಭಗೊಂಡಿದೆ. ಇಂದು ಮೈಸೂರಿನ ಜಂಬೂಸವಾರಿ (Jambu Savari) ಸಾಗುವ ರಾಜಬೀದಿಯಲ್ಲಿ ದಸರಾ ಆನೆಗಳಿಗೆ ತಾಲೀಮು ನಡೆದವು. ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ದಸರಾ ಗಜಪಡೆಯ ಮೊದಲ ತಂಡದ ಆನೆಗಳಿಗೆ ತಾಲೀಮು ಆರಂಭಗೊಂಡಿದೆ. ಕಳೆದೆರಡು ದಿನದಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ತಾಲೀಮು, ಇದೀಗ ಅರಮನೆಯಾಚೆಗೆ ನಡೆಯಿತು. ಮೊದಲ ದಿನವೇ ಜಂಬೂಸವಾರಿ ಮಾರ್ಗದಲ್ಲಿ ಬನ್ನಿಮಂಟಪದವರೆಗೂ ಪೂರ್ಣಪ್ರಮಾಣದಲ್ಲಿ ಎಂಟು ಆನೆಗಳು ನಡೆದವು. ಕಾಲು ನೋವಿನಿಂದಾಗಿ ಕಂಜನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಜಾಹೀರಾತು ಇದನ್ನೂ ಓದಿ: Karnataka Weather Update: ರಾಜ್ಯದಲ್ಲಿ ಇನ್ನು 1 ವಾರ ಮಳೆ- ಯಾವ್ಯಾವ ಜಿಲ್ಲೆಗೆ ಅಲರ್ಟ್‌? ಕೃಷ್ಣಾ ನದಿಗೆ ಕೃಷ್ಣಾ ಹೆಸರು ಬರಲು ಕಾರಣವೇನು! ಪುರಾಣ ಹೀಗೆನ್ನುತ್ತೆ! ಇನ್ನಷ್ಟು ಸುದ್ದಿ… ಇದನ್ನೂ ಓದಿ: Krishna Janmashtami: ಗೋಕರ್ಣದಲ್ಲಿ ಪೆಟ್ಲೆ ಹಬ್ಬಕ್ಕೆ ಕ್ಷಣಗಣನೆ; 150 ರೂಪಾಯಿಗೆ ಸಿಗುತ್ತೆ ಈ ಹಸಿರು ಪಟಾಕಿ! ತಾಲೀಮಿನಲ್ಲಿ ಅಭಿಮನ್ಯು, ಏಕಲವ್ಯ, ಧನಂಜಯ, ವರಲಕ್ಷ್ಮಿ, ಭೀಮ, ಲಕ್ಷ್ಮಿ, ರೋಹಿತ್, ಗೋಪಿ ಆನೆಗಳು ಭಾಗಿಯಾಗಿದ್ದವು. ಆನೆಗಳಿಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಅರಮನೆಯ ಬಲರಾಮ ದ್ವಾರದಿಂದ ಬೆಳಗ್ಗೆ 7ಕ್ಕೆ ಹೊರಟು ಕೆ.ಆರ್‌.ವೃತ್ತ, ಸಯ್ನಾಜಿರಾವ್‌ ರಸ್ತೆ, ಕೆ.ಆರ್‌.ಆಸ್ಪತ್ರೆ, ಹೈವೇ ವೃತ್ತದ ಮೂಲಕ ಸಾಗಿ 8.25ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದವು. ಕೆಲ ಹೊತ್ತಿನ ಬಳಿಕ ಮತ್ತೆ ಅಲ್ಲಿಂದ ವಾಪಸಾದವು. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: jambu savari , Local 18 , Mysore Dasara Elephant , Mysuru Dasara First Published : August 26, 2024, 6:50 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.