NEWS

Bengaluru: ರೈತರ ನಿರೀಕ್ಷೆ ಹೆಚ್ಚಿಸಿದ ಬಕ್ರೀದ್ ಸಂಭ್ರಮಾಚರಣೆ; ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ

ಕುರಿ ಬಜಾರ್ ರೇಟ್ ಜೂನ್​​ 17ಕ್ಕೆ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ (Bakrid festival)​​ ನಡೆಯಲಿದೆ. ಈ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಕುರಿ, ಮೇಕೆ ವ್ಯಾಪಾರ (Goat and Sheep) ಜೋರಾಗಿದೆ. ಎಂದಿನಂತೆ ಈ ಬಾರಿಯೂ ಬಗೆ ಬಗೆಯ ತಳಿಗಳ ಕುರಿಗಳು ಬಜಾರಿಗೆ ಬಂದಿದೆ. ನಗರದ ಅತಿ ದೊಡ್ಡ ಕುರಿ ಮಾರುಕಟ್ಟೆಯಾಗಿರುವ ಈದ್ಗಾ ಮೈದಾನದಲ್ಲಿ (Idgah Maidan ) ಈಗಲೇ ಭರ್ಜರಿ ವ್ಯಾಪಾರ ಶುರುವಾಗಿದೆ. ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್​​ ಸಮೀಪಿಸಿದೆ. ಜೂನ್​​ 17ಕ್ಕೆ ಸಾರ್ವತ್ರಿಕವಾಗಿ ನಾಡಿನೆಲ್ಲೆಡೆ ಬಕ್ರೀದ್​ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರಿಗೆ ಭಾರೀ ಪ್ರಮಾಣದಲ್ಲಿ ಕುರಿ, ಮೇಕೆಗಳು ಬಂದಿಳಿದಿದೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ನಗರದ ಕುರಿ ಮಾರುಕಟ್ಟೆಗೆ ಇಷ್ಟೊಂದು ಮೇಕೆ ಕುರಿಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಭರ್ಜರಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ ರೈತರು. ಆದರೆ ಗ್ರಾಹಕರು ಈ ಬಾರಿ ಕುರಿಗಳ ರೇಟ್​ ಹೆಚ್ಚಳವಾಗಿದೆ ಎನ್ನುತ್ತಿದ್ದಾರೆ. 1 ಲಕ್ಷದ ವರೆಗೆ ಮಾರಾಟವಾಗುತ್ತಿರುವ ಕುರಿಗಳು ನಗರದ ಚಾಮರಾಜಪೇಟೆ, ಟ್ಯಾನರಿ ರೋಡ್, ಆರ್ ಟಿ‌ನಗರ ಸೇರಿದಂತೆ ನಗರದ ಕೆಲವು ಭಾಗದಲ್ಲಿ ಭರ್ಜರಿಯಾಗಿ ಕುರಿ ವ್ಯಾಪಾರ ನಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ನಾಟಿ ಕುರಿ, ಬನ್ನೂರು, ಮೋಟಾ ಬನ್ನೂರು, ಕಿರಗಲ್ ಕುರಿ ಹಾಗೂ ಟಗರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. 15 ಸಾವಿರದಿಂದ 1 ಲಕ್ಷದ ವರೆಗೆ ವಿವಿಧ ತಳಿಯ ಕುರಿಗಳು ಬಜಾರ್​ ನಲ್ಲಿ ಮಾರಾಟವಾಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ನಗರದಲ್ಲಿ ಈ ಕುರಿ ವ್ಯಾಪಾರ ನಡೆಯಲಿದೆ. ಇದನ್ನೂ ಓದಿ: T20 World Cup 2024: ಗ್ರೌಂಡ್​​ನಲ್ಲೇ ಬುಮ್ರಾ ದಂಪತಿಯ ಕ್ಯೂಟ್​ ರೊಮ್ಯಾನ್ಸ್; ವಿಡಿಯೋ ನೋಡಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿರುವ ರೈತರು ಈ ಬಾರಿ ಬೆಂಗಳೂರಿಗೆ ಪಕ್ಕದ ರಾಮನಗರ, ತುಮಕೂರು, ಶಿರಾ, ಚಿತ್ರದುರ್ಗ, ಕೋಲಾರ, ಮೈಸೂರು ಭಾಗಗಳಿಂದ ಅತಿ ಹೆಚ್ಚು ಕುರಿಗಳನ್ನು ರೈತರು ಮಾರಾಟಕ್ಕಿಟ್ಟಿದ್ದಾರೆ. ಕೊರೋನಾ ಬಳಿಕ ಕುಗ್ಗಿರುವ ಹೈನುಗಾರಿಕೆ ಚಟುವಟಿಕೆ ಈ ಬಾರಿಯ ಬಕ್ರೀದ್​​ ನಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿದ್ದಾರೆ ರೈತರು. ಒಟ್ಟಾರೆ ಬಕ್ರೀದ್​​​ ಹಬ್ಬದ ಹಿನ್ನೆಲೆ ಪ್ರತಿ ವರ್ಷವೂ ಭರ್ಜರಿ ಕುರಿ ವ್ಯಾಪಾರ ನಡೆಯಲಿದೆ. ಆದರೆ ಕೋವಿಡ್ ಬಳಿಕ ಹೈನುಗಾರಿಕೆ ವಹಿವಾಟು ಕುಗ್ಗಿತ್ತು. ಈ ಬಾರಿಯ ಬಕ್ರೀದ್​​ ಗೆ ಇದು ಹಿಗ್ಗುವ ನಿರೀಕ್ಷೆಯಲ್ಲಿದ್ದಾರೆ ರೈತರು. ಕುರಿ ಬಜಾರ್ ರೇಟ್​ !! ನಾಟಿ ಕುರಿ : 30 ರಿಂದ 40 ಸಾವಿರ (ಜೋಡಿ) ಬನ್ನೂರು : 70 ರಿಂದ 95 ಸಾವಿರ (ಜೋಡಿ) ಬನ್ನೂರು ಮೋಟಾ : 95 ಸಾವಿರದಿಂದ 1.20 ಲಕ್ಷ (ಜೋಡಿ) ಕಿರಗಲ್ ಕುರಿ : 40 ರಿಂದ 60 ಸಾವಿರ (ಜೋಡಿ) ಟಗರು : 60 ರಿಂದ 90 ಸಾವಿರ (ಜೋಡಿ) (ವರದಿ: ಆಶಿಕ್ ಮುಲ್ಕಿ, ನ್ಯೂಸ್18, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.