NEWS

Nani in Kalki-2: ಟಾಲಿವುಡ್‌ ಕಲ್ಕಿ-2 ಚಿತ್ರದಲ್ಲಿ ನಾನಿ; ಸುದ್ದಿ ಕೇಳಿ ಶಾಕ್ ಆದ ನಟ ಹೇಳಿದ್ದೇನು?

ಟಾಲಿವುಡ್‌ ಕಲ್ಕಿ-2 ಚಿತ್ರದಲ್ಲಿ ನಾನಿ ಅಭಿನಯ; ಸುದ್ದಿ ಕೇಳಿ ಸ್ವತಃ ನಾನಿ ಶಾಕ್! ಟಾಲಿವುಡ್‌ನಲ್ಲಿ ಕಲ್ಕಿ ಚಿತ್ರ (Kalki Movie) ಮಾಡಿರೋ ಮೋಡಿ ಇನ್ನು ಇದೆ. ಬಹು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ, ಬಹು ಕೋಟಿಗಳನ್ನೆ ಬಾಚಿಕೊಂಡಿದೆ. ಇದೇ ಸಮಯದಲ್ಲಿಯೇ ಕಲ್ಕಿ-2 (Kalki-2 Movie) ಸಿನಿಮಾದ ಬಜ್ ಶುರು ಆಗಿತ್ತು. ಇದರ ಬೆನ್ನಲ್ಲಿಯೇ ಈ ಚಿತ್ರದಲ್ಲಿ ನಟ ನಾನಿ (Actor Nani) ಕೂಡ ಈ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋ ಸುದ್ದಿ ಕೇಳಿ ಬಂದಿದೆ. ಬಹು ದಿನಗಳಿಂದಲೂ ಕೇಳಿ ಬಂದ ಈ ಒಂದು ಸುದ್ದಿ ಕೇಳಿ ಸ್ವತಃ ನಾನಿ ಶಾಕ್ (Nani Shock) ಆಗಿದ್ದಾರೆ. ಜೊತೆಗೆ ಇದಕ್ಕೆ ಫುಲ್ ಸ್ಪಾಟ್ ಕೂಡ ಇಟ್ಟಿದ್ದಾರೆ. ಇದು ಸತ್ಯವೋ ಅಥವಾ ಸುಳ್ಳೋ ಅನ್ನೋದನ್ನು ಸಹ ಕ್ಲಿಯರ್ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಕಲ್ಕಿ ಚಿತ್ರದಲ್ಲಿ ನಾನಿ ಕ್ಯಾಮಿಯೋ ರೋಲ್ ಕಲ್ಕಿ ಚಿತ್ರದಲ್ಲಿ ತಾರಾ ಬಳಗ ದೊಡ್ಡದೇ ಇದೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಹಿಂಗೆ ಸಾಲು ಸಾಲು ಹೆಸರು ಕೇಳಿ ಬರುತ್ತಿವೆ. ಡೈರೆಕ್ಟರ್ ನಾಗ್ ಅಶ್ವಿನ್ ದೊಡ್ಡ ತಾರಾ ಬಳಗವನ್ನೆ ಇಲ್ಲಿ ಒಟ್ಟುಗೂಡಿಸಿದ್ದಾರೆ. ಆದರೆ, ಕಲ್ಕಿ ಚಿತ್ರದ ಕಥೆ ಒಂದು ಭಾಗದಲ್ಲಿ ಮುಗಿಯೋವಂತದ್ದು ಅಲ್ವೇ ಅಲ್ಲ ನೋಡಿ. ಹಾಗಾಗಿಯೇ ಕಲ್ಕಿ-2 ಚಿತ್ರದ ಹಿಂಟ್ ಕೂಡ ಕೊಟ್ಟಿದ್ದಾರೆ. ಅದನ್ನ ನೋಡಿದ ಸಿನಿಪ್ರೇಮಿಗಳು ಈಗ ಕಲ್ಕಿ-2 ಚಿತ್ರಕ್ಕಾಗಿಯೇ ಕಾಯುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಈ ಚಿತ್ರದ ಸುತ್ತ ಹಲವು ಸುದ್ದಿಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಮುದ್ದಾದ ರಾಧೆ-ಕೃಷ್ಣ ಫೋಟೋಸ್​ ಇಲ್ಲಿದೆ ಕಲ್ಕಿ-2 ಸಿನಿಮಾದಲ್ಲಿ ನಾನಿ ಅಭಿನಯ ಕಲ್ಕಿ-2 ಚಿತ್ರದಲ್ಲಿ ನಾನಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರಿಗೆ ಕ್ಯಾಮಿಯೋ ರೋಲ್ ಇದೆ. ಇನ್ನೇನು ಚಿತ್ರೀಕರಣದಲ್ಲೂ ಭಾಗಿ ಆಗುತ್ತಾರೆ. ಹೀಗೆ ಹತ್ತು ಹಲವು ವಿಚಾರಗಳು ಕೇಳಿ ಬಂದಿದ್ದವು. ಕೇಳಿ ಬಂದ ಸುದ್ದಿಗಳು ಎಷ್ಟು ಸ್ಟ್ರಾಂಗ್ ಇದ್ದವು ಅಂದ್ರೆ, ಇದರ ಬಗ್ಗೆ ತಿಳಿದುಕೊಂಡ ಸ್ವತ ನಾನಿನೇ ಶಾಕ್ ಆಗಿದ್ದಾರೆ. ಅಂದ್ರೆ, ಕಲ್ಕಿ-2 ಚಿತ್ರದಲ್ಲಿ ನಾನಿ ಇಲ್ವೇ.? ಈ ಚಿತ್ರದಲ್ಲಿ ನಾನಿ ಇರೋದು ಸುಳ್ಳೇ..? ಈ ಪ್ರಶ್ನೆಗಳು ನಿಮನ್ನ ಕಾಡಬಹುದು. ಆದರೆ, ನಾನಿ ಒಂದು ಸತ್ಯ ಹೇಳಿದ್ದಾರೆ. ಈ ಸತ್ಯ ಶಾಕಿಂಗ್ ಆಗಿಯೇ ಇದೆ. ನಾನು ಕಲ್ಕಿ-2 ಸಿನಿಮಾ ಮಾಡುತ್ತಿಲ್ಲ ಕಲ್ಕಿ-2 ಚಿತ್ರದಲ್ಲಿ ನಾನು ಅಭಿನಯಿಸುತ್ತಿಲ್ಲ. ಈ ಬಗ್ಗೆ ನನಗೂ ಶಾಕ್ ಆಗಿದೆ. ಸದ್ಯ ಹರಿದಾಡುತ್ತಿರೋ ಸುದ್ದಿ ಕೇಳಿ ಜನ ಹೇಗೆ ರಿಯ್ಯಾಕ್ಟ್ ಮಾಡ್ತಾರೋ, ಅದೇ ರೀತಿನೇ ನಾನು ಆಶ್ಚರ್ಯಗೊಂಡಿದೆ. ಹಾಗೇನೆ ಈ ವಿಚಾರವಾಗಿ ನನ್ನ ಯಾರೂ ಸಂಪರ್ಕ ಕೂಡ ಮಾಡಿಲ್ಲ. ಇದೆಲ್ಲ ಸುಳ್ಳು ಸುದ್ದಿ ಅಂತಲೇ ನಾನಿ ಹೇಳಿದ್ದಾರೆ. ಕಲ್ಕಿ-2 ಸಿನಿಮಾದ ಸುದ್ದಿ ಕೇಳಿ ನಾನು ಆಶ್ಚರ್ಯ ಪಟ್ಟಿದ್ದೇನೆ. ಆದರೆ, ಈಗ ಹರಿದಾಡ್ತಿರೋ ಯಾವುದೇ ಸುದ್ದಿನೂ ನಿಜ ಅಲ್ವೇ ಅಲ್ಲ. ಹೀಗೆ ತಮ್ಮ ಬಗ್ಗೆ ಇದ್ದ ಒಂದು ಇಂಟ್ರಸ್ಟಿಂಗ್ ಸುದ್ದಿಗೆ ಸ್ವತಃ ನಾನಿ ಈಗ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಮೂಲಕ ಕಲ್ಕಿ-2 ಸಿನಿಮಾದಲ್ಲಿ ನಾನಿ ಅಭಿನಯಿಸುತ್ತಾರೆ ಅನ್ನೋ ಮ್ಯಾಟರ್ ಕಂಪ್ಲೀಟ್ ಸುಳ್ಳು ಅನ್ನೋದು ಈಗ ಕ್ಲೀಯರ್ ಆಗಿದೆ. ನಾನಿ ಒಪ್ಪಿಕೊಂಡ ಸಿನಿಮಾಗಳು ನಾನಿ ಈ ಹಿಂದೆ ದಸರಾ ಚಿತ್ರ ಮಾಡಿದ್ದರು. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಇದಾದ್ಮೇಲೆ ಹಾಯ್ ನಾನಾ ಚಿತ್ರ ಮಾಡಿದ್ದರು. ಇದರ ಜಾನರ್ ಬೇರೆ ಇತ್ತು. ಇದನ್ನ ಜನ ಮೆಚ್ಚಿಕೊಂಡರು. ಈ ವರ್ಷ ಸರಿಪೋಧಾ ಸನಿವಾರಂ ಅನ್ನೋ ಚಿತ್ರ ಮಾಡಿದ್ದಾರೆ. ಇದು ರಿಲೀಸ್‌ಗೆ ರೆಡಿ ಇದೆ. ಇದೇ ತಿಂಗಳು 29 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ ಅಂತಲೇ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.