NEWS

Breakfast Recipe: ದೋಸೆ-ಇಡ್ಲಿ, ಉಪ್ಪಿಟ್ಟು ಬೋರ್ ಆಯ್ತಾ? ಹಾಗಾದ್ರೆ ರವೆ-ಅವಲಕ್ಕಿ ಬೈಟ್ಸ್ ಟೇಸ್ಟ್ ಮಾಡಿ; ಶುಗರ್ ಇದ್ದವರಿಗೂ ಬೆಸ್ಟ್!

ಸಾಂದರ್ಭಿಕ ಚಿತ್ರ ನಮ್ಮೆಲ್ಲರ ದಿನ ಆರಂಭವಾಗುವುದೇ ಉಪಾಹಾರದಿಂದ. ಆರೇಳು ಗಂಟೆಗಳ ನಿದ್ರೆಯ ಬಳಿಕ ದೇಹಕ್ಕೆ ಸಿಗುವ ಮೊದಲ ಆಹಾರವೇ ಬೆಳಗಿನ ಉಪಾಹಾರ(Breakfast). ಹೀಗಾಗಿ ಬೆಳಗ್ಗಿನ ಉಪಾಹಾರಕ್ಕೆ ಪೋಷಕಾಂಶಗಳಿರುವ ಆಹಾರವನ್ನು (Food) ಸೇವನೆ ಮಾಡಿದರೆ, ಆಗ ದಿನವಿಡೀ ದೇಹವು ತುಂಬಾ ಉಲ್ಲಾಸಭರಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಉಪಾಹಾರವು ಸರಿಯಾಗಿಲ್ಲದಿದ್ದರೆ ದೇಹಕ್ಕೆ ಬೇಕಾಗುವ ಶಕ್ತಿವು ಸಿಗದೆ, ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗಬಹುದು. ಅದರಲ್ಲೂ ನಿಮಗೆ ದೋಸೆ (Dosa), ಉಪ್ಪಿಟ್ಟು (Upma), ಇಡ್ಲಿ (Idli), ಚಪಾತಿ (Chapati) ತಿಂದು ಬೋರಾಗಿದ್ಯಾ? ಏನಾದ್ರೂ ವೆರೈಟಿ ಬ್ರೇಕ್ ಫಾಸ್ಟ್ ತಿನ್ನಬೇಕು ಅನಿಸ್ತಾ ಇದ್ಯಾ ? ಹಾಗಿದ್ದರೇ ಈ ರೆಸಿಪಿ ಮರಿಯದೇ ಟ್ರೈ ಮಾಡಿ. ರವೆ (Rava) ಮತ್ತು ಅವಲಕ್ಕಿ (Poha) ಬೈಟ್ಸ್. ಇದು ಕೇಳೋಕೆ ಮಾತ್ರವಲ್ಲ ನೋಡೋಕೆ ಕೂಡ ಆಕರ್ಷಕವಾಗಿರೋದರ ಜೊತೆಗೆ ಅತ್ಯಂತ ಟೇಸ್ಟಿ ಆಗಿದ್ದು, ಒಮ್ಮೆ ಸವಿದರೇ ಮತ್ತೊಮ್ಮೆ ಸವಿಬೇಕು ಅನ್ಸೋದ್ರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ ಹಬ್ಬ ಹರಿದಿನದಲ್ಲಿ, ಉಪವಾಸ ವ್ರತಕ್ಕೂ ಈ ಬೆಳಗಿನ ತಿಂಡಿ ನಿಮಗೆ ನೆರವಾಗಲಿದೆ. ರವೆ ಅವಲಕ್ಕಿ ಬೈಟ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ರವೆ ಅವಲಕ್ಕಿ ಬೈಟ್ಸ್ ಮಾಡುವ ವಿಧಾನ ಕನ್ನಡ ಸುದ್ದಿ / ನ್ಯೂಸ್ / ಲೈಫ್ ಸ್ಟೈಲ್ / Breakfast Recipe: ದೋಸೆ-ಇಡ್ಲಿ, ಉಪ್ಪಿಟ್ಟು ಬೋರ್ ಆಯ್ತಾ? ಹಾಗಾದ್ರೆ ರವೆ-ಅವಲಕ್ಕಿ ಬೈಟ್ಸ್ ಟೇಸ್ಟ್ ಮಾಡಿ; ಶುಗರ್ ಇದ್ದವರಿಗೂ ಬೆಸ್ಟ್! Breakfast Recipe: ದೋಸೆ-ಇಡ್ಲಿ, ಉಪ್ಪಿಟ್ಟು ಬೋರ್ ಆಯ್ತಾ? ಹಾಗಾದ್ರೆ ರವೆ-ಅವಲಕ್ಕಿ ಬೈಟ್ಸ್ ಟೇಸ್ಟ್ ಮಾಡಿ; ಶುಗರ್ ಇದ್ದವರಿಗೂ ಬೆಸ್ಟ್! ಸಾಂದರ್ಭಿಕ ಚಿತ್ರ ದೋಸೆ, ಉಪ್ಪಿಟ್ಟು,ಇಡ್ಲಿ,ಚಪಾತಿ ತಿಂದು ಬೋರಾಗಿದ್ಯಾ? ಏನಾದ್ರು ಇಂಟ್ರಸ್ಟಿಂಗ್ ಬ್ರೇಕ್ ಫಾಸ್ಟ್ ತಿನ್ನಬೇಕು ಅನ್ನಸ್ತಾ ಇದ್ಯಾ ? ಹಾಗಿದ್ದರೇ ಈ ರೆಸಿಪಿ ಮರಿದೇ ಟ್ರೈ ಮಾಡಿ. ರವೆ ಮತ್ತು ಅವಲಕ್ಕಿ ಬೈಟ್ಸ್. ಇದು ಕೇಳೋಕೆ ಮಾತ್ರವಲ್ಲ ನೋಡೋಕೆ ಆಕರ್ಷಕವಾಗಿರೋದರ ಜೊತೆಗೆ ಅತ್ಯಂತ ಟೆಸ್ಟಿ ಆಗಿದ್ದು, ಒಮ್ಮೆ ಸವಿದರೇ ಮತ್ತೊಮ್ಮೆ ಸವಿಬೇಕು ಅನ್ಸೋದ್ರಲ್ಲಿ ಅನುಮಾನವೇ ಇಲ್ಲ. ಮುಂದೆ ಓದಿ … 4-MIN READ Kannada Last Updated : August 26, 2024, 7:15 pm IST Whatsapp Facebook Telegram Twitter Follow us on Follow us on google news Published By : Monika N Written By : Poornima Hegde ಸಂಬಂಧಿತ ಸುದ್ದಿ ನಮ್ಮೆಲ್ಲರ ದಿನ ಆರಂಭವಾಗುವುದೇ ಉಪಾಹಾರದಿಂದ. ಆರೇಳು ಗಂಟೆಗಳ ನಿದ್ರೆಯ ಬಳಿಕ ದೇಹಕ್ಕೆ ಸಿಗುವ ಮೊದಲ ಆಹಾರವೇ ಬೆಳಗಿನ ಉಪಾಹಾರ(Breakfast). ಹೀಗಾಗಿ ಬೆಳಗ್ಗಿನ ಉಪಾಹಾರಕ್ಕೆ ಪೋಷಕಾಂಶಗಳಿರುವ ಆಹಾರವನ್ನು (Food) ಸೇವನೆ ಮಾಡಿದರೆ, ಆಗ ದಿನವಿಡೀ ದೇಹವು ತುಂಬಾ ಉಲ್ಲಾಸಭರಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಉಪಾಹಾರವು ಸರಿಯಾಗಿಲ್ಲದಿದ್ದರೆ ದೇಹಕ್ಕೆ ಬೇಕಾಗುವ ಶಕ್ತಿವು ಸಿಗದೆ, ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗಬಹುದು. ಅದರಲ್ಲೂ ನಿಮಗೆ ದೋಸೆ (Dosa), ಉಪ್ಪಿಟ್ಟು (Upma), ಇಡ್ಲಿ (Idli), ಚಪಾತಿ (Chapati) ತಿಂದು ಬೋರಾಗಿದ್ಯಾ? ಏನಾದ್ರೂ ವೆರೈಟಿ ಬ್ರೇಕ್ ಫಾಸ್ಟ್ ತಿನ್ನಬೇಕು ಅನಿಸ್ತಾ ಇದ್ಯಾ ? ಹಾಗಿದ್ದರೇ ಈ ರೆಸಿಪಿ ಮರಿಯದೇ ಟ್ರೈ ಮಾಡಿ. ರವೆ (Rava) ಮತ್ತು ಅವಲಕ್ಕಿ (Poha) ಬೈಟ್ಸ್. ಇದು ಕೇಳೋಕೆ ಮಾತ್ರವಲ್ಲ ನೋಡೋಕೆ ಕೂಡ ಆಕರ್ಷಕವಾಗಿರೋದರ ಜೊತೆಗೆ ಅತ್ಯಂತ ಟೇಸ್ಟಿ ಆಗಿದ್ದು, ಒಮ್ಮೆ ಸವಿದರೇ ಮತ್ತೊಮ್ಮೆ ಸವಿಬೇಕು ಅನ್ಸೋದ್ರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ ಹಬ್ಬ ಹರಿದಿನದಲ್ಲಿ, ಉಪವಾಸ ವ್ರತಕ್ಕೂ ಈ ಬೆಳಗಿನ ತಿಂಡಿ ನಿಮಗೆ ನೆರವಾಗಲಿದೆ. ಜಾಹೀರಾತು ಸಾಂದರ್ಭಿಕ ಚಿತ್ರ ರವೆ ಅವಲಕ್ಕಿ ಬೈಟ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ರವೆ - 1 ಬೌಲ್ ದಪ್ಪ ಅವಲಕ್ಕಿ - 1 ಬೌಲ್ ಮೊಸರು - 1 ಕಪ್ ಕರಿ ಎಳ್ಳು - 2 ಸ್ಪೂನ್ ಕೊತ್ತಂಬರಿ ಸೊಪ್ಪು - 2-3 ಸ್ಪೂನ್ ಸಾಸಿವೆ - 2 ಸ್ಪೂನ್ ಜೀರಿಗೆ - 2 ಸ್ಪೂನ್ ಮಸಾಲೆ ಪುಡಿ/ ಚಾಟ್ ಮಸಾಲ - 2 ಸ್ಪೂನ್ ಒಗ್ಗರಣೆಗೆ - 4 ಸ್ಪೂನ್ ಎಣ್ಣೆ ಹಸಿಮೆಣಸು - 4 ಸಾಂದರ್ಭಿಕ ಚಿತ್ರ ರವೆ ಅವಲಕ್ಕಿ ಬೈಟ್ಸ್ ಮಾಡುವ ವಿಧಾನ ಒಂದು ದೊಟ್ಟ ಬೌಲ್​ಗೆ ದಪ್ಪ ಅವಲಕ್ಕಿ ಹಾಕಿ ನೀರಿನಲ್ಲಿ ತೊಳೆದುಕೊಳ್ಳಿ. ಬಳಿಕ ಚೂರು ನೀರು ರವೆ ಹಾಗೂ ಮೊಸರು ಸೇರಿಸಿ ಚೆನ್ನಾಗಿ ಕಲೆಸಿ. ಈ ಮಿಶ್ರಣಕ್ಕೆ ಕರಿಎಳ್ಳು, ಹೆಚ್ಚಿದ ಹಸಿಮೆಣಸು, ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ 10 ನಿಮಿಷ ಮುಚ್ಚಿಡಿ. ಬಳಿಕ ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ ಅಂಗೈನಲ್ಲಿ ತಟ್ಟಿ ಈ ಬೈಟ್ಸ್ ಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 10 ನಿಮಿಷ ಬೇಯಿಸಿ. ಈರುಳ್ಳಿ ತಿಂದ್ರೆ ಈ ಕಾಯಿಲೇ ಬರೋದಿಲ್ಲ! ಇನ್ನಷ್ಟು ಸುದ್ದಿ… ಬಳಿಕ ಈ ಬೈಟ್ಸ್ ಗಳನ್ನು ತಣಿಯಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ. ನಂತರ ಇದಕ್ಕೆ ಬೇಯಿಸಿದ ರವೆ-ಅವಲಕ್ಕಿ ಬೈಟ್ಸ್ ಹಾಕಿ ಮಿಕ್ಸ್ ಮಾಡಿ ಮೇಲಿನ ಚಾಟ್ ಮಸಾಲ ಅಥವಾ ಸಾಂಬಾರ ಪುಡಿ ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿಯಾಗಿ ಸರ್ವ್ ಮಾಡಿದರೇ ರವೆ-ಅವಲಕ್ಕಿ ಬೈಟ್ಸ್ ರೆಡಿ. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: breakfast , Food , Recipe First Published : August 26, 2024, 7:12 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.