NEWS

Mysuru News: ಭಾರೀ ಮಳೆಯಿಂದ ಜಲಾಶಯಗಳ ಒಳಹರಿವು ಪ್ರಮಾಣವೂ ಹೆಚ್ಚಳ!

ಒಳಹರಿವು ಹೆಚ್ಚಳ ಮೈಸೂರು: ಹಳೆ ಮೈಸೂರು ಭಾಗದ ಪ್ರಮುಖ ಜಲಾಶಯಗಳಿಗೆ ಒಂದು ತಿಂಗಳಿನಿಂದ ನೀರಿನ ಒಳಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಮೇ ತಿಂಗಳ ಆರಂಭದಲ್ಲಿ ನೀರಿನ ಒಳಹರಿವು ಕಡಿಮೆ ಪ್ರಮಾಣದಲ್ಲಿತ್ತು. ಮೇ ತಿಂಗಳಲ್ಲಿ ಒಳಹರಿವಿನ (Water Inflow) ಪ್ರಮಾಣ ಜಲಾಶಯಗಳಿಗೆ ತೀರ ಕಡಿಮೆ ಮಟ್ಟದಲ್ಲಿ ಇತ್ತು. ಆದರೆ, ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಆರಂಭದ ಬಳಿಕ ಮೈಸೂರು ಭಾಗದ ಜಲಾಶಯಗಳ ನೀರಿನ ಪ್ರಮಾಣ ಹೆಚ್ಚಿದೆ. ಇಂದಿನ ಒಳಹರಿವು ಎಷ್ಟರ ಪ್ರಮಾಣ ಏರಿಕೆ ಆಗಿದೆ ಅನ್ನೋದನ್ನ ನೋಡೋಣ ಬನ್ನಿ. ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2284 ಅಡಿಗಳ ಸಾಮರ್ಥ್ಯ ಇರುವಂತಹ ಜಲಾಶಯದ ಇಂದಿನ ಮಟ್ಟ 2262.27 ಅಡಿಗಳಾಗಿದ್ದು, ಜಲಾಶಯದಿಂದ 300 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಕೇವಲ 300 ರಿಂದ 400 ಕ್ಯೂಸೆಕ್‌ ನಷ್ಟಿದ್ದ ಒಳಹರಿವಿನ ಪ್ರಮಾಣ ಕಳೆದ 2-3 ದಿನಗಳಿಂದ 2000 ಕ್ಯೂಸೆಕ್‌ ಗಡಿಯನ್ನು ದಾಟಿದೆ. ಜಲಾಶಯದ ಇಂದಿನ ಒಳಹರಿವಿನ ಪ್ರಮಾಣ 2263 ಕ್ಯೂಸೆಕ್‌ ಆಗಿದ್ದು, ನಿನ್ನೆ ಜಲಾಶಯಕ್ಕೆ 2068 ಕ್ಯೂಸೆಕ್‌ ನೀರು ಹರಿವು ಇತ್ತು. ಇದನ್ನೂ ಓದಿ: Mayank Agarwal: ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ ಮಾಯಾಂಕ್‌ ಅಗರ್‌ವಾಲ್;‌ ವಿಶೇಷ ಪೂಜೆ ಸಲ್ಲಿಕೆ ಇದನ್ನೂ ಓದಿ: Solar Home: ಬೆಳಗಾವಿಯಲ್ಲಿದೆ ಸಂಪೂರ್ಣ ಸೋಲಾರ್‌ ಮನೆ; ಕೆಂಪು ಇಟ್ಟಿಗೆಯ ಮಲೆನಾಡ ಸೊಬಗಿನ ಲುಕ್! ಇನ್ನು ಮಂಡ್ಯ ಜಿಲ್ಲೆಯ ಪ್ರಮುಖ ಜಲಾಶಯವಾದಂತಹ ಕೆಆರ್‌ಎಸ್ ಜಲಾಶಯಕ್ಕೂ ಕೂಡ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಾ ಬರುತ್ತಿದೆ. ಮೇ ಕೊನೆಯ ವಾರದಲ್ಲಿ ಏರಿಕೆಯಾಗಿದ್ದಂತಹ ಒಳಹರಿವಿನ ಪ್ರಮಾಣ ಕಳೆದ 3-4 ದಿನಗಳಿಂದ ಮತ್ತಷ್ಟು ಏರಿಕೆಯನ್ನು ಕಂಡಿದೆ. 124.80 ಅಡಿಗಳ ಸಾಮರ್ಥ್ಯವಿರುವಂತಹ ಜಲಾಶಯದ ಇಂದಿನ ಮಟ್ಟ 85.40 ಅಡಿಗಳಾಗಿದ್ದು, ಜಲಾಶಯದಿಂದ 450 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ 1759 ಕ್ಯೂಸೆಕ್‌ ಒಳಹರಿವಿನ ಪ್ರಮಾಣ ಇದೆ. ನಿನ್ನೆ ಇದೇ ಜಲಾಶಯದ ಒಳಹರಿವಿನ ಪ್ರಮಾಣ 1055 ಕ್ಯೂಸೆಕ್‌ನಷ್ಟಿತ್.ತು ಒಂದೇ ದಿನಕ್ಕೆ 304 ಕ್ಯೂಸೆಕ್ಸ್‌ನಷ್ಟು ಒಳಹರಿವು ಇತ್ತು. ಕನ್ನಡ ಸುದ್ದಿ / ನ್ಯೂಸ್ / ಮೈಸೂರು / Mysuru News: ಭಾರೀ ಮಳೆಯಿಂದ ಜಲಾಶಯಗಳ ಒಳಹರಿವು ಪ್ರಮಾಣವೂ ಹೆಚ್ಚಳ! Mysuru News: ಭಾರೀ ಮಳೆಯಿಂದ ಜಲಾಶಯಗಳ ಒಳಹರಿವು ಪ್ರಮಾಣವೂ ಹೆಚ್ಚಳ! ಒಳಹರಿವು ಹೆಚ್ಚಳ ಹಳೆ ಮೈಸೂರು ಭಾಗದ ಜಲಾಶಯಗಳಿಗೆ 4-5 ದಿನಗಳಿಂದ ಒಳಹರಿವಿನ ಪ್ರಮಾಣ ಹೆಚ್ಚಿದೆ. ಮುಂದೆ ಓದಿ … 5-MIN READ Kannada Last Updated : June 11, 2024, 10:46 am IST Whatsapp Facebook Telegram Twitter Follow us on Follow us on google news Published By : Irshad Kinnigoli Reported By : Manish Gowda ಸಂಬಂಧಿತ ಸುದ್ದಿ ಮೈಸೂರು: ಹಳೆ ಮೈಸೂರು ಭಾಗದ ಪ್ರಮುಖ ಜಲಾಶಯಗಳಿಗೆ ಒಂದು ತಿಂಗಳಿನಿಂದ ನೀರಿನ ಒಳಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಮೇ ತಿಂಗಳ ಆರಂಭದಲ್ಲಿ ನೀರಿನ ಒಳಹರಿವು ಕಡಿಮೆ ಪ್ರಮಾಣದಲ್ಲಿತ್ತು. ಮೇ ತಿಂಗಳಲ್ಲಿ ಒಳಹರಿವಿನ (Water Inflow) ಪ್ರಮಾಣ ಜಲಾಶಯಗಳಿಗೆ ತೀರ ಕಡಿಮೆ ಮಟ್ಟದಲ್ಲಿ ಇತ್ತು. ಆದರೆ, ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಆರಂಭದ ಬಳಿಕ ಮೈಸೂರು ಭಾಗದ ಜಲಾಶಯಗಳ ನೀರಿನ ಪ್ರಮಾಣ ಹೆಚ್ಚಿದೆ. ಇಂದಿನ ಒಳಹರಿವು ಎಷ್ಟರ ಪ್ರಮಾಣ ಏರಿಕೆ ಆಗಿದೆ ಅನ್ನೋದನ್ನ ನೋಡೋಣ ಬನ್ನಿ. ಜಾಹೀರಾತು ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2284 ಅಡಿಗಳ ಸಾಮರ್ಥ್ಯ ಇರುವಂತಹ ಜಲಾಶಯದ ಇಂದಿನ ಮಟ್ಟ 2262.27 ಅಡಿಗಳಾಗಿದ್ದು, ಜಲಾಶಯದಿಂದ 300 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಕೇವಲ 300 ರಿಂದ 400 ಕ್ಯೂಸೆಕ್‌ ನಷ್ಟಿದ್ದ ಒಳಹರಿವಿನ ಪ್ರಮಾಣ ಕಳೆದ 2-3 ದಿನಗಳಿಂದ 2000 ಕ್ಯೂಸೆಕ್‌ ಗಡಿಯನ್ನು ದಾಟಿದೆ. ಜಲಾಶಯದ ಇಂದಿನ ಒಳಹರಿವಿನ ಪ್ರಮಾಣ 2263 ಕ್ಯೂಸೆಕ್‌ ಆಗಿದ್ದು, ನಿನ್ನೆ ಜಲಾಶಯಕ್ಕೆ 2068 ಕ್ಯೂಸೆಕ್‌ ನೀರು ಹರಿವು ಇತ್ತು. ಜಾಹೀರಾತು ಇದನ್ನೂ ಓದಿ: Mayank Agarwal: ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ ಮಾಯಾಂಕ್‌ ಅಗರ್‌ವಾಲ್;‌ ವಿಶೇಷ ಪೂಜೆ ಸಲ್ಲಿಕೆ ಡಾ.ರಾಜ್‌ ಮೊಮ್ಮಗ ‘ಯುವ’ ದಾಂಪತ್ಯದಲ್ಲಿ ಬಿರುಕು! ಇನ್ನಷ್ಟು ಸುದ್ದಿ… ಇದನ್ನೂ ಓದಿ: Solar Home: ಬೆಳಗಾವಿಯಲ್ಲಿದೆ ಸಂಪೂರ್ಣ ಸೋಲಾರ್‌ ಮನೆ; ಕೆಂಪು ಇಟ್ಟಿಗೆಯ ಮಲೆನಾಡ ಸೊಬಗಿನ ಲುಕ್! ಇನ್ನು ಮಂಡ್ಯ ಜಿಲ್ಲೆಯ ಪ್ರಮುಖ ಜಲಾಶಯವಾದಂತಹ ಕೆಆರ್‌ಎಸ್ ಜಲಾಶಯಕ್ಕೂ ಕೂಡ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಾ ಬರುತ್ತಿದೆ. ಮೇ ಕೊನೆಯ ವಾರದಲ್ಲಿ ಏರಿಕೆಯಾಗಿದ್ದಂತಹ ಒಳಹರಿವಿನ ಪ್ರಮಾಣ ಕಳೆದ 3-4 ದಿನಗಳಿಂದ ಮತ್ತಷ್ಟು ಏರಿಕೆಯನ್ನು ಕಂಡಿದೆ. 124.80 ಅಡಿಗಳ ಸಾಮರ್ಥ್ಯವಿರುವಂತಹ ಜಲಾಶಯದ ಇಂದಿನ ಮಟ್ಟ 85.40 ಅಡಿಗಳಾಗಿದ್ದು, ಜಲಾಶಯದಿಂದ 450 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ 1759 ಕ್ಯೂಸೆಕ್‌ ಒಳಹರಿವಿನ ಪ್ರಮಾಣ ಇದೆ. ನಿನ್ನೆ ಇದೇ ಜಲಾಶಯದ ಒಳಹರಿವಿನ ಪ್ರಮಾಣ 1055 ಕ್ಯೂಸೆಕ್‌ನಷ್ಟಿತ್.ತು ಒಂದೇ ದಿನಕ್ಕೆ 304 ಕ್ಯೂಸೆಕ್ಸ್‌ನಷ್ಟು ಒಳಹರಿವು ಇತ್ತು. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: kabini , KRS Dam , Local 18 , mysuru First Published : June 11, 2024, 10:46 am IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.