ಉಣಕಲ್ ಕೆರೆ ಹುಬ್ಬಳ್ಳಿ: ಸತತ ಮಳೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕೆರೆ-ಜಲಪಾತಗಳಿಗೆ ಜೀವಕಳೆ ಬರುತ್ತಿದೆ. ಹುಬ್ಬಳ್ಳಿಯ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಉಣಕಲ್ ಕೆರೆ ಮೈದುಂಬಿ ಹರಿಯುತ್ತಿದೆ. ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತಲ ಹಳ್ಳಿಯಲ್ಲಿ ಸುರಿದ ಮಳೆಯಿಂದ ಕೆರೆ ಭರ್ತಿಯಾಗಿದೆ. ಕೆರೆ ಕೋಡಿ ಹರಿದು ನೀರು ರಾಜಕಾಲುವೆ ಸೇರುತ್ತಿದೆ. ಕೋಡಿ ಹರಿಯುತ್ತಿರುವ ಮನೋಹರ ದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಕೆರೆ ನೀರ ಜೊತೆಗೆ ತ್ಯಾಜ್ಯ ನೀರು ಸಹ ಹಳ್ಳಕ್ಕೆ ಹೋಗುತ್ತಿದೆ. ಮಳೆ ನೀರು ಹೆಚ್ಚಾಗಿ ರಾಜಕಾಲುವೆ ತುಂಬಿದರೆ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾಜಕಾಲುವೆ ಸಂಪೂರ್ಣ ಕಸದಿಂದ ತುಂಬಿರೋದ್ರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. 110 ವರ್ಷ ಇತಿಹಾಸ ಹೊಂದಿರುವ ಕೆರೆ ಉಣಕಲ್ ಕೆರೆಯು ಹುಬ್ಬಳ್ಳಿ ನಗರದ ಒಳಗೆ ಇರುವ ಒಂದು ಸುಂದರವಾದ ವಿಹಾರ ತಾಣವಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಅಂದಾಜು 110 ವರ್ಷಗಳಷ್ಟು ಹಳೆಯದಾದ ಈ ಕೆರೆಯು ಸುಮಾರು 200 ಎಕರೆ ವಿಸ್ತೀರ್ಣವನ್ನು ಹೊಂದಿದೆ ಎನ್ನುತ್ತದೆ ಇತಿಹಾಸ. ಶ್ರೀ ಸಿದ್ದಪ್ಪಜ್ಜನ ‘ಕರ್ಮಭೂಮಿ’ ಈ ತಾಣವು 1859 ರಲ್ಲಿ ಜನಿಸಿದ ಶ್ರೀ ಸಿದ್ದಪ್ಪಜ್ಜನ ‘ಕರ್ಮಭೂಮಿ’ ಎಂದು ಪ್ರಸಿದ್ಧವಾಗಿದೆ. ಅವರು ಗುರುವನ್ನು ಹುಡುಕಲು 14 ನೇ ವಯಸ್ಸಿನಲ್ಲಿ ತಮ್ಮ ಮನೆಯನ್ನು ತ್ಯಜಿಸಿ ಉಣಕಲ್ ಮೈಲಾರ್ಲಿಂಗ ದೇವಸ್ಥಾನದಲ್ಲಿ ನೆಲೆಸಿದರು. 1921 ರಲ್ಲಿ ಶ್ರೀ ಸಿದ್ದಪ್ಪಜ್ಜ ನಿಧನರಾದ ನಂತರ ಈ ಸ್ಥಳದಲ್ಲಿ ಜಾತ್ರೆ ಆಯೋಜಿಸಲಾಗುತ್ತಿದೆ. ಇದನ್ನೂ ಓದಿ: Siddharoodha Postal Stamp: ಅಂಚೆ ಚೀಟಿ ಮೇಲೂ ಸಿದ್ಧಾರೂಢರು, ಭಕ್ತರ ಬಹು ವರ್ಷಗಳ ಕನಸು ಕೊನೆಗೂ ನನಸು! ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣನ ಅಬ್ಬರ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಬೆಳಿಗ್ಗೆಯಿಂದಲೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆಯೇ ಮಳೆ ರಭಸ ಪಡೆದುಕೊಂಡಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಸತತ ಮಳೆಯಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಸುದ್ದಿ / ನ್ಯೂಸ್ / ಹುಬ್ಬಳ್ಳಿ-ಧಾರವಾಡ / Hubballi Unkal Lake: ಮೈದುಂಬಿದ ಉಣಕಲ್, ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಸುವ ಈ ಕೆರೆಯ ಇತಿಹಾಸ ಗೊತ್ತಾ? Hubballi Unkal Lake: ಮೈದುಂಬಿದ ಉಣಕಲ್, ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಸುವ ಈ ಕೆರೆಯ ಇತಿಹಾಸ ಗೊತ್ತಾ? ಉಣಕಲ್ ಕೆರೆ ಅಂದಾಜು 110 ವರ್ಷಗಳಷ್ಟು ಹಳೆಯದಾದ ಈ ಕೆರೆಯು ಸುಮಾರು 200 ಎಕರೆ ವಿಸ್ತೀರ್ಣವನ್ನು ಹೊಂದಿದೆ ಎನ್ನುತ್ತದೆ ಇತಿಹಾಸ. ಮುಂದೆ ಓದಿ … 5-MIN READ Kannada Hubli-Dharwad,Dharwad,Karnataka Last Updated : July 22, 2024, 10:40 am IST Whatsapp Facebook Telegram Twitter Follow us on Follow us on google news Published By : ಗುರುಗಣೇಶ ಡಬ್ಗುಳಿ Reported By : SHIVARAM ASUNDI ಸಂಬಂಧಿತ ಸುದ್ದಿ ಹುಬ್ಬಳ್ಳಿ: ಸತತ ಮಳೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕೆರೆ-ಜಲಪಾತಗಳಿಗೆ ಜೀವಕಳೆ ಬರುತ್ತಿದೆ. ಹುಬ್ಬಳ್ಳಿಯ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಉಣಕಲ್ ಕೆರೆ ಮೈದುಂಬಿ ಹರಿಯುತ್ತಿದೆ. ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತಲ ಹಳ್ಳಿಯಲ್ಲಿ ಸುರಿದ ಮಳೆಯಿಂದ ಕೆರೆ ಭರ್ತಿಯಾಗಿದೆ. ಕೆರೆ ಕೋಡಿ ಹರಿದು ನೀರು ರಾಜಕಾಲುವೆ ಸೇರುತ್ತಿದೆ. ಕೋಡಿ ಹರಿಯುತ್ತಿರುವ ಮನೋಹರ ದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಕೆರೆ ನೀರ ಜೊತೆಗೆ ತ್ಯಾಜ್ಯ ನೀರು ಸಹ ಹಳ್ಳಕ್ಕೆ ಹೋಗುತ್ತಿದೆ. ಮಳೆ ನೀರು ಹೆಚ್ಚಾಗಿ ರಾಜಕಾಲುವೆ ತುಂಬಿದರೆ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾಜಕಾಲುವೆ ಸಂಪೂರ್ಣ ಕಸದಿಂದ ತುಂಬಿರೋದ್ರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. 110 ವರ್ಷ ಇತಿಹಾಸ ಹೊಂದಿರುವ ಕೆರೆ ಉಣಕಲ್ ಕೆರೆಯು ಹುಬ್ಬಳ್ಳಿ ನಗರದ ಒಳಗೆ ಇರುವ ಒಂದು ಸುಂದರವಾದ ವಿಹಾರ ತಾಣವಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಅಂದಾಜು 110 ವರ್ಷಗಳಷ್ಟು ಹಳೆಯದಾದ ಈ ಕೆರೆಯು ಸುಮಾರು 200 ಎಕರೆ ವಿಸ್ತೀರ್ಣವನ್ನು ಹೊಂದಿದೆ ಎನ್ನುತ್ತದೆ ಇತಿಹಾಸ. ಶ್ರೀ ಸಿದ್ದಪ್ಪಜ್ಜನ ‘ಕರ್ಮಭೂಮಿ’ ಈ ತಾಣವು 1859 ರಲ್ಲಿ ಜನಿಸಿದ ಶ್ರೀ ಸಿದ್ದಪ್ಪಜ್ಜನ ‘ಕರ್ಮಭೂಮಿ’ ಎಂದು ಪ್ರಸಿದ್ಧವಾಗಿದೆ. ಅವರು ಗುರುವನ್ನು ಹುಡುಕಲು 14 ನೇ ವಯಸ್ಸಿನಲ್ಲಿ ತಮ್ಮ ಮನೆಯನ್ನು ತ್ಯಜಿಸಿ ಉಣಕಲ್ ಮೈಲಾರ್ಲಿಂಗ ದೇವಸ್ಥಾನದಲ್ಲಿ ನೆಲೆಸಿದರು. 1921 ರಲ್ಲಿ ಶ್ರೀ ಸಿದ್ದಪ್ಪಜ್ಜ ನಿಧನರಾದ ನಂತರ ಈ ಸ್ಥಳದಲ್ಲಿ ಜಾತ್ರೆ ಆಯೋಜಿಸಲಾಗುತ್ತಿದೆ. ಇದನ್ನೂ ಓದಿ: Siddharoodha Postal Stamp: ಅಂಚೆ ಚೀಟಿ ಮೇಲೂ ಸಿದ್ಧಾರೂಢರು, ಭಕ್ತರ ಬಹು ವರ್ಷಗಳ ಕನಸು ಕೊನೆಗೂ ನನಸು! ಭೂಕುಸಿತ ಆಗೋದಕ್ಕೆ ಇದೇ ಕಾರಣ! ಇನ್ನಷ್ಟು ಸುದ್ದಿ… ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣನ ಅಬ್ಬರ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಬೆಳಿಗ್ಗೆಯಿಂದಲೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆಯೇ ಮಳೆ ರಭಸ ಪಡೆದುಕೊಂಡಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಸತತ ಮಳೆಯಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Dharwad , Hubballi , Lake , Local 18 First Published : July 22, 2024, 10:36 am IST ಮುಂದೆ ಓದಿ None
Popular Tags:
Share This Post:
Darshan: ದರ್ಶನ್ ಆಚೆ ಬರೋಕೆ ಅದೊಂದೇ ದೊಡ್ಡ ಸಮಸ್ಯೆ? ಹೈಡ್ರಾಮಾ ನಡೆಯುತ್ತಾ?
- by Sarkai Info
- October 30, 2024
What’s New
Spotlight
Today’s Hot
-
- October 30, 2024
-
- October 30, 2024
-
- October 30, 2024
Featured News
Latest From This Week
Subscribe To Our Newsletter
No spam, notifications only about new products, updates.