ತನುಷ್ ಕೋಟ್ಯಾನ್ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಮಧ್ಯೆಯೇ ರವಿಚಂದ್ರನ್ ಅಶ್ವಿನ್ (Ravichandran Ashwin) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದು ತಿಳಿದೇ ಇದೆ. ಇದೀಗ ಮುಂಬರುವ 2 ಟೆಸ್ಟ್ ಪಂದ್ಯಗಳಿಗಾಗಿ ಬಿಸಿಸಿಐ (BCCI) ಬದಲಿ ಆಟಗಾರನನ್ನ ಘೋಷಿಸಿದೆ. ಮುಂಬೈನ ಆಲ್ ರೌಂಡರ್ ತನುಷ್ ಕೋಟ್ಯಾನ್ (Tanush Karunakar Kotian) ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಈಗಾಗಲೇ ಮೂರು ಟೆಸ್ಟ್‌ಗಳು ಮುಗಿದಿದ್ದು, ಎರಡೂ ತಂಡಗಳು ಪ್ರತಿ ಪಂದ್ಯವನ್ನು ಗೆದ್ದು 1-1 ಸಮಬಲ ಸಾಧಿಸಿವೆ. ಮೂರನೇ ಟೆಸ್ಟ್ ಮಳೆಯಿಂದಾಗಿ ಡ್ರಾ ಆಗಿತ್ತು. ಅಶ್ವಿನ್ ಜಾಗಕ್ಕೆ ಮುಂಬೈ ಸ್ಪಿನ್ನರ್ ಮೂರನೇ ಟೆಸ್ಟ್ ಬಳಿಕ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ವಿದಾಯ ಹೇಳಿದ್ದರು. ನಿವೃತ್ತಿ ಘೋಷಿಸಿದ ಮರುದಿನವೇ ಅಶ್ವಿನ್ ಮನೆಗೆ ಮರಳಿದ್ದಾರೆ. ಕೊನೆಯ ಎರಡು ಟೆಸ್ಟ್‌ಗಳಿಗೆ ಅವರ ಸ್ಥಾನಕ್ಕೆ ಸ್ಪಿನ್ ಆಲ್‌ರೌಂಡರ್ ತನುಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಜಯ್ ಹಜಾರೆ ಟ್ರೋಫಿ ಆಡುತ್ತಿರುವ ಕೋಟ್ಯಾನ್ಗೆ ಕರೆ ಬಂದಿರುವುದು ಮೂಲಗಳಿಂದ ತಿಳಿದುಬಂದಿದೆ. ಇದರ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗುವ ನಾಲ್ಕನೇ ಟೆಸ್ಟ್ ಮತ್ತು ಜನವರಿ 3 ರಿಂದ ಸಿಡ್ನಿಯಲ್ಲಿ ಪ್ರಾರಂಭವಾಗುವ ಅಂತಿಮ ಟೆಸ್ಟ್‌ಗೆ ತನುಷ್ ಕೋಟ್ಯಾನ್ ಭಾರತ ತಂಡಕ್ಕೆ ಲಭ್ಯವಿರುತ್ತಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: Ishan Kishan: 78 ಎಸೆತಗಳಲ್ಲಿ 134 ರನ್! ಸ್ಫೋಟಕ ಶತಕ ಸಿಡಿಸಿ ಭಾರತಕ್ಕೆ ಮರಳುವ ಮುನ್ಸೂಚನೆ ಕೊಟ್ಟ ಯುವ ಕ್ರಿಕೆಟಿಗ ಅತ್ಯುತ್ತಮ ಆಲ್‌ರೌಂಡರ್ 26 ವರ್ಷದ ತನುಷ್ ಕೋಟ್ಯಾನ್, ಆಫ್ ಸ್ಪಿನ್ನರ್, ಮುಂಬೈ ಪರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿಷ್ಠಿತ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯ ಭಾಗವಾಗಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತನುಷ್ ಕೋಟ್ಯಾನ್ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದರು. ಅವರು 10 ಓವರ್ ಬೌಲ್ ಮಾಡಿ 38 ರನ್ ನೀಡಿ ಎರಡು ವಿಕೆಟ್ ಪಡೆದಿದ್ದಲ್ಲದೆ, ಅಜೇಯ 38 ರನ್ಗಳಿಸಿದ್ದರು. ತನಿಷ್ ಕೋಟ್ಯಾನ್ ಶತಕ ತನುಷ್ ಕೋಟ್ಯಾನ್ ಅಶ್ವಿನ್ ಶೈಲಿಯಲ್ಲಿ ಆಫ್ ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇರುವುದರಿಂದ ಅವರನ್ನ ಆಸೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ತನುಷ್ ಕೋಟ್ಯಾನ್ ಅವರು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಹಿರಿಯ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಒಳಗೊಂಡಿರುವ ಸ್ಪಿನ್ ವಿಭಾಗದ ಭಾಗವಾಗಲಿದ್ದಾರೆ. ಇದುವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ತನುಷ್ ಕೋಟ್ಯಾನ್ 101 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಮೂರು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್ನಲ್ಲೂ ಎರಡು ಶತಕ ಮತ್ತು 13 ಅರ್ಧ ಶತಕಗಳೊಂದಿಗೆ 1525 ರನ್ ಗಳಿಸಿದ್ದಾರೆ. ಇದನ್ನೂ ಓದಿ: 16 ಬೌಂಡರಿ, 11 ಸಿಕ್ಸರ್ಗಳ ಸಹಿತ ಗಾಯಕ್ವಾಡ್ ಸಿಡಿಲಬ್ಬರದ ಶತಕ! 20 ಓವರ್ನಲ್ಲಿ ಚೇಸಿಂಗ್ ಫಿನಿಶ್ ಕಳೆದ ಐಪಿಎಲ್ 2024 ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ತನುಷ್ ಕೋಟ್ಯಾನ್ ಈ ಋತುವಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನುಷ್ ಕೋಟ್ಯಾನ್ ಆಯ್ಕೆ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಕೋಟ್ಯಾನ್ ಭಾರತ ಎ ತಂಡದಲ್ಲಿ ಆಸೀಸ್ ನೆಲದಲ್ಲಿ ಆಡಿದ್ದರಿಂದ ವೀಸಾ ಸಮಸ್ಯೆ ಇರುವುದಿಲ್ಲ, ಡಿಸೆಂಬರ್ 26ರೊಳಗೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.