ದುನಿಯಾ ವಿಜಯ್ ಭೀಮ ಸಿನಿಮಾ ಹೇಗಿದೆ? ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್ (Duniya Vijay) ಡೈರೆಕ್ಷನ್ ಮಾಡಿರೋ ಭೀಮ ಸಿನಿಮಾ ಫಸ್ಟ್ ಡೇ ಫಸ್ಟ್ ರಿಪೋರ್ಟ್ ಹೊರಗೆ ಬರ್ತಿದೆ. ಒಂದೊಂದಾಗಿಯೆ ಸಿನಿಮಾದ ವಿಷಯ ರಿವೀಲ್ ಆಗುತ್ತಿದೆ. ಬೆಳಗಿನ 10 ಗಂಟೆ ಶೋ ನೋಡಿದ ಜನ ಚಿತ್ರದ ಫಸ್ಟ್ ಹಾಫ್ (First Half) ಅನ್ನ ತುಂಬಾನೆ ಇಷ್ಟಪಟ್ಟಿದ್ದಾರೆ. ಟ್ವಿಟರ್‌ನಲ್ಲಿ ಕೆಲವ್ರು ಡೈಲಾಗ್ ಸಖತ್ ಆಗಿಯೇ ಇವೆ. ಚರಣ್ ರಾಜ್ ಅವರ ಬಿಜಿಎಂ (BGM) ಕೂಡ ಇಂಟ್ರಸ್ಟಿಂಗ್ ಆಗಿಯೇ ಇದೆ ಅಂತಿದ್ದಾರೆ. ಹಾಗಾಗಿಯೇ ಭೀಮ ಸಿನಿಮಾದ (Bheema Movie) ಒಟ್ಟು ಚಿತ್ರಣ ಏನು ಅನ್ನೋ ಕುತೂಹಲ ಇದೆ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ಓದಿ. ಭೀಮ ಚಿತ್ರದ ಫಸ್ಟ್ ಹಾಫ್ ಗುಡ್..! ಭೀಮ ಚಿತ್ರದ ಮೊದಲಾರ್ಧ ಚೆನ್ನಾಗಿದೆ. ಚಿತ್ರದಲ್ಲಿ ವಿಜಯ್ ಪಾತ್ರಗಳನ್ನ ಚೆನ್ನಾಗಿಯೇ ಪ್ರಸೆಂಟ್ ಮಾಡಿದ್ದಾರೆ. ಚಿತ್ರದ ವಿಲನ್ ಪಾತ್ರಗಳನ್ನ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ದುನಿಯಾ ವಿಜಯ್ ಇಲ್ಲಿ ತೋರಿದ್ದಾರೆ. ಬೆಂಗಳೂರಿನ ಗಲ್ಲಿಗಳನ್ನ ಇಲ್ಲಿ ಚೆನ್ನಾಗಿಯೇ ತೋರಿದ್ದಾರೆ. ಭೀಮ ಸಿನಿಮಾದಲ್ಲಿ ಗಾಂಜಾ ಗುಂಗಿದೆ. ಬೆಂಗಳೂರಿನ ಸ್ಲಂ ಹುಡುಗರ ಕಥೆ ಕೂಡ ಇದೆ. ಆದರೆ, ಯುವರನ್ನ ರೌಡಿಗಳು ಹೇಗೆಲ್ಲ ಬೆಳಸಿಕೊಳ್ತಾರೆ ಅನ್ನೋದನ್ನ ವಿಜಯ್ ಇಲ್ಲಿ ತುಂಬಾನೇ ಚೆನ್ನಾಗಿ ತೋರಿದ್ದಾರೆ. ಆದರೆ, ಸಿನಿಮಾದ ಡೈಲಾಗ್ ರಾ ಆಗಿಯೇ ಇವೆ. ಅಂದ್ರೆ, ಇದರಲ್ಲಿ ಬೈಗುಳಗಳೇ ತುಂಬಿವೆ ಅಂತಲೂ ಹೇಳಬಹದು. ಇದನ್ನೂ ಓದಿ: Mahesh Babu: ವಯಸ್ಸೇ ಆಗದ ಸೂಪರ್ ಸ್ಟಾರ್! ಯುವತಿಯರ ನೆಚ್ಚಿನ ಪ್ರಿನ್ಸ್ ಮಹೇಶ್ ಬಾಬು ವಯಸ್ಸೆಷ್ಟು? ಭೀಮ ಚಿತ್ರದಲ್ಲಿ ಕಾಮಿಡಿ ಝಲಕ್.! ಭೀಮ ಸಿನಿಮಾದಲ್ಲಿ ಕಾಮಿಡಿ ಝಲಕ್ ಕೂಡ ಇದೆ. ಪಕ್ಕಾ ಲೋಕಲ್ ಅನಿಸೋ ಈ ಚಿತ್ರದ ಹಾಸ್ಯ ಖುಷಿಕೊಡುವಂತೇನೆ ಇದೆ. ಆದರೆ, ಅದ್ಯಾಕೋ ಕೆಲವು ದೃಶ್ಯಗಳು ಹಾಗೂ ಸಂಭಾಷಣೆ ನಾಟ್ ಗುಡ್ ಅನ್ನೋ ಹಾಗೇನೆ ಇವೆ. ಭೀಮ ಸಿನಿಮಾದ ಹಾಡುಗಳು ಗಮನ ಸೆಳೆಯುವಂತೇನೆ ಇವೆ. ಹಾಗೆ ಇಲ್ಲಿ ಪೊಲೀಸ್ ಅಧಿಕಾರಿ ಹಾಗೂ ದುನಿಯಾ ವಿಜಯ್ ಜೋಡಿಯಾಗಿಯೇ ಗಾಂಜಾ ಮಾರಾಟಗಾರರ ವಿರುದ್ಧ ಸಿಡಿದೇಳುತ್ತಾರೆ. ಹೀಗೆ ಸಾಗೋ ಸಿನಿಮಾದಲ್ಲಿ ಎಲ್ಲವೂ ಇದೆ. ಮೈನವಿರೇಳಿಸೋ ಭೀಮ ಪ್ರೀ-ಕ್ಲೈಮ್ಯಾಕ್ಸ್! ಭೀಮ ಸಿನಿಮಾದ ಕ್ಲೈಮ್ಯಾಕ್ಸ್ ಹಾಗೂ ಪ್ರೀ-ಕ್ಲೈಮ್ಯಾಕ್ಸ್ ರೋಮಾಂಚನ ಮೂಡಿಸುತ್ತದೆ. ಟ್ವಿಟರ್‌ನಲ್ಲಿ ದುನಿಯಾ ವಿಜಯ್ ಫ್ಯಾನ್ಸ್ ಇದನ್ನೆ ಹೇಳಿಕೊಳ್ಳುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಇದನ್ನ ಹೇಳಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತವನ್ನು ತುಂಬಾನೆ ಹೊಗಳಿದ್ದಾರೆ. ಭೀಮ ವೈಲೆನ್ಸ್ ಅನ್ನೋ ಓಪಿನಿಯನ್.! ಭೀಮ ಚಿತ್ರದಲ್ಲಿ ವೈಲೆನ್ಸ್ ಇದೆ ಅನ್ನೋರು ಇದ್ದಾರೆ. ವೈಲೆನ್ಸ್ ಇಷ್ಟಪಡದೇ ಇರೋರಿಗೆ ಈ ಚಿತ್ರ ಕಷ್ಟ ಕಷ್ಟ ಅನ್ನೋ ಅಭಿಪ್ರಾಯ ಕೂಡ ಬರುತ್ತಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.