NEWS

Yadagiri: PSI ನಿಗೂಢ ಸಾವಿನ ಕೇಸ್ ಸ್ಫೋಟಕ ಟ್ವಿಸ್ಟ್; ಪರಶುರಾಮ ಮನೆಯಲ್ಲಿ ಸಿಐಡಿಗೆ ಸಿಕ್ತು ಮಹತ್ವದ ಸಾಕ್ಷ್ಯ!

ಸಾಂದರ್ಭಿಕ ಚಿತ್ರ ಯಾದಗಿರಿ: PSI ಪರಶುರಾಮ (PSI Parshuram Case) ನಿಗೂಢ ಸಾವು ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸಿಐಡಿ ತನಿಖೆ ವೇಳೆ ಕೆಲವು ಮಹತ್ವದ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಪೋಸ್ಟಿಂಗ್‌‌ಗಾಗಿ (Posting) ಒಟ್ಟು 15 ಲಕ್ಷ ರೂಪಾಯಿ ಹಣವನ್ನು ಪರಶುರಾಮ ಹೊಂದಿಸಿದ್ದ, ಆದರೆ ಕೊನೆ ಕ್ಷಣದಲ್ಲಿ ಪೋಸ್ಟಿಂಗ್ ಮಿಸ್ ಆದ ಕಾರಣ 6 ಲಕ್ಷ ಬ್ಯಾಂಕ್‌ಗೆ ಜಮೆ ಮಾಡಿ 7 ಲಕ್ಷದ 35 ಸಾವಿರ ರೂಪಾಯಿಯನ್ನು ಮನೆಯಲ್ಲೇ (Home) ಇರಿಸಿದ್ದರಂತೆ. ಸ್ಥಳ ಮಹಜರು ವೇಳೆ 6 ಲಕ್ಷ ಹಣ, ಖಾಲಿ ಲೆಟರ್‌‌ ಹೆಡ್ (Letter Head) ಹಾಗೂ ಪರಶುರಾಮ ಉಪಯೋಗಿಸ್ತಿದ್ದ ಮೊಬೈಲ್ (Mobile Phone) ವಶಕ್ಕೆ ಪಡೆಯಲಾಗಿದೆ. ಸಿಐಡಿ ಪೊಲೀಸರ ಪರಿಶೀಲನೆ ವೇಳೆ ಪರಶುರಾಮ ಅವರು ಪತ್ನಿಯ ಹೆರಿಗೆಗೆ 65 ಸಾವಿರ ರೂಪಾಯಿ ಕೊಟ್ಟು ಕಳುಹಿಸಿದ್ದರಂತೆ. ಸ್ಥಳ ಮಹಜರು ವೇಳೆ ಮನೆಯಲ್ಲಿ ಶಾಸಕರ ಖಾಲಿ ಲೆಟರ್ ಹೆಡ್, ಜೊತೆಗೆ ಪರಶುರಾಮ ಬಳಸುತ್ತಿದ್ದ ಎರಡು ಮೊಬೈಲ್ ಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಪರಶುರಾಮ ಅವರು ಪ್ರತಿಯೊಂದು ಕಾಲ್ ರೆಕಾರ್ಡ್ ಮಾಡಿಕೊಳ್ತಿದ್ದರಂತೆ, ಈ ಹಿನ್ನೆಲೆ ಪರಶುರಾಮ ಮೊಬೈಲ್ ‌ನಲ್ಲಿ ಕೆಲವೊಂದಿಷ್ಟು ಸಾಕ್ಷ್ಯ ಸಿಗುವ ಸಾಧ್ಯತೆ ಇದೆ ಎಂಬ ಮಾಹಿತಿ ಪರಶುರಾಮ ಆಪ್ತ ಮೂಲಗಳಿಂದ ನ್ಯೂಸ್18 ಗೆ ಮಾಹಿತಿ ಲಭ್ಯವಾಗಿದೆ. ಪಿ ಎಸ್ ಐ ಪರಶುರಾಮ್ ಅವರ ಮೊಬೈಲ್​ನಲ್ಲಿ ಮಹತ್ವದ ಅಡಿಯೋ ಇದೆಯಾ? ಇದರೊಂದಿಗೆ ಆರೋಪ ಕೇಳಿ ಬಂದಿರುವ ಕಾಂಗ್ರೆಸ್ ಚೆನ್ನಾರೆಡ್ಡಿ ಪಾಟೀಲ್ ಅವರಿಗೆ ಕಂಠಕ ಪಿಕ್ಸ್ ಎನ್ನಲಾಗಿದೆ. ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಸನ್ನಿಗೌಡ ವಿರುದ್ಧ ಪರಶುರಾಮ ಅವರ ಪತ್ನಿ ಶ್ವೇತಾ ಅವರು ದೂರು ದಾಖಲಿಸಿದ್ದಾರೆ. ತ್ಮಮ ಪತಿಗೆ ಶಾಸಕ ಹಾಗೂ ಅವರ ಪುತ್ರ ಕಾರಣವೆಂದು ಶ್ವೇತಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇದನ್ನೂ ಓದಿ: Bengaluru: ಖಾಕಿ ಮೇಲೆ ಹೆಂಡ್ತೀರ ಡೌಟ್‌! ಪೊಲೀಸ್‌ರ ಪತ್ನಿಯರಿಂದಲೂ CDR ಖರೀದಿ, CID ಪೊಲೀಸನನ್ನ ಬಂಧಿಸಿದ CCB ಟೀಂ ಸದ್ಯ ಶ್ವೇತಾ ದೂರಿನ ಅನ್ವಯ ಪ್ರಕರಣದ ತನಿಕೆ ವಹಿಸಿಕೊಂಡಿರುವ ಸಿಐಡಿ ಎಸ್ಪಿ ಋತ್ವಿಕ್ ಶಂಕರ್ ಅವರು ತೀವ್ರ ತಲಾಶೆ ನಡೆಸಿದ್ದು, ಪರಶುರಾಮ ಮೊಬೈಲ್ ನಲ್ಲಿ ಶಾಸಕ ಹಾಗೂ ಪುತ್ರನ ಭವಿಷ್ಯ ಹುದುಗಿದ್ಯಾ? ಎಂಬ ಪ್ರಶ್ನೆ ಸದ್ಯ ಎದುರಾಗಿದೆ. ಮೃತ ಎಸ್​ಪಿ ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಕಾಲ್ ಡಿಟೇಲ್ಸ್ ಚೆಕ್ ಮಾಡಿದ್ದು, ಸಿಐಡಿ ಋತ್ವಿಕ್‌ ಶಂಕರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ವೇಗ ಪಡೆದುಕಕೊಂಡಿದ್ದಾರೆ. (ವರದಿ: ಗಣೇಶ್ ಪಾಟೀಲ್, ಯಾದಗಿರಿ, ನ್ಯೂಸ್ 18 ಕನ್ನಡ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.