ಬಂಧಿತ ಆರೋಪಿಗಳು ಬೆಂಗಳೂರು: ಅದು ಬೆಂಗಳೂರು (Bengaluru) ಕೂಗಳತೆ ದೂರದಲ್ಲಿರೋ ಇತಿಹಾಸ ಪ್ರಸಿದ್ದ (Ghati Subramanya) ಕ್ಷೇತ್ರ. ಈ ಕ್ಷೇತ್ರದ ಪಕ್ಕದಲ್ಲೇ ಸುಂದರವಾದ ಪಿಕಪ್ ಡ್ಯಾಂ ಒಂದಿದೆ. ದೇವಸ್ಥಾನಕ್ಕೆ (Temple) ಬಂದವರು ಇಲ್ಲಿಗೂ ಬಂದು ಹೋಗುತ್ತಿದ್ದರು. ಜೋಡಿ ಹಕ್ಕಿಗಳನ್ನೇ (Lovers) ಟಾರ್ಗೆಟ್ ಮಾಡುತ್ತಿದ್ದವರಿಗೆ ಖಾಕಿ ಕೋಳ ಬಿದ್ದಿದೆ. ಪೊದೆಯೊಳಗೆ ಹೋದರೆ ಸುಲಿಗೆ ಮಾಡೋದು ಫಿಕ್ಸ್! ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಎಂದರೆ, ಬೆಂಗಳೂರು ಸುತ್ತಮುತ್ತಲಿನ ಪಾಲಿಗೆ ಸುಪ್ರಸಿದ್ಧ ದೈವ ಕ್ಷೇತ್ರ. ಹೀಗಾಗಿಯೇ ಈ ಸನ್ನಿಧಿಗೆ ನಿತ್ಯವೂ ನೂರಾರು ಜನ ಬರ್ತಾರೆ. ಹೀಗೆ ಬಂದವರು ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನೋಡೋದಕ್ಕೂ ಒಂದು ರೌಂಡ್ಸ್ ಹೋಗುತ್ತಿದ್ದರು. ಪ್ರಕೃತಿಯ ಸೌಂದರ್ಯದ ಜೊತೆಗೆ ಜಲರಾಶಿಯ ವೈಭವವನ್ನ ಕಂಡು ಮೋಜು ಮಸ್ತಿ ಮಾಡುತ್ತಿದ್ದರು. ಇಂತಹವರನ್ನು ಇಲ್ಲೊಂದು ಗ್ಯಾಂಗ್ ಟಾರ್ಗೆಟ್ ಮಾಡ್ತಿತ್ತು. ಸುಲಿಗೆ ಮಾಡ್ತಿದ್ದ ಮೂವರ ಕೈಗೆ ಕೋಳ ಡ್ಯಾಂ ನೋಡೋಕೆ ಅಂತಾ ಬಂದವರಲ್ಲಿ ಒಂದಿಷ್ಟು ಮಂದಿ ಏಕಾಂತದಲ್ಲಿ ಮೈ ಮರೀತಿದ್ದರು. ಲವರ್ಸ್ ಪಾಲಿಗಂತೂ ಇದು ಹಾಟ್ ಸ್ಪಾಟ್ ಆಗಿತ್ತು. ಹೀಗಾಗಿಯೇ ವಾರದ ಹಿಂದೆ ಪ್ರೇಮಿಗಳೊಬ್ಬರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡಿದ್ದರು. ಅಷ್ಟೇ ಅಲ್ಲ ನವ ದಂಪತಿಗಳ ಬಳಿಯೂ ಚಿನ್ನಾಭರಣ ದೋಚಿ, 60 ಸಾವಿರ ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದರು. ಯಾವಾಗ ಈ ವಿಷ್ಯ ಪೊಲೀಸರ ಕಿವಿಗೆ ಬಿತ್ತೋ, ಖಾಕಿ ಪಡೆ ಅಲರ್ಟ್ ಆಗಿದೆ. ಪಿಕಪ್ ಡ್ಯಾಂನಲ್ಲಿ ಸುಲಿಗೆ ಮಾಡ್ತಿದ್ದ ಮೂವರ ಕೈಗೆ ಕೋಳ ತೊಡಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರವಾಸಿಗ ಗೌರವ್ ಎಂಬವರು, ಇಲ್ಲಿಗೆ ವಾರಾಂತ್ಯದಲ್ಲಿ ಹೆಚ್ಚು ಜನ ಬರ್ತಾರೆ, ಆದರೆ ವಾರದ ದಿನಗಳಲ್ಲಿ ಕಡಿಮೆ ಜನ ಇರ್ತಾರೆ. ಇದನ್ನೇ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುವ ಕೆಲಸ ಆಗ್ತಿದೆ. ಆದ್ದರಿಂದ ಪೊಲೀಸರು ಇಲ್ಲಿ ಸೆಕ್ಯುರಿಟಿ ಅಥವಾ ಬಿಟ್ ಏರ್ಪಡಿಸಿದರೆ ಉತ್ತಮ ಎಂದು ತಿಳಿಸಿದ್ದಾರೆ. ದಿವ್ಯಾ ಎಂಬವರು ಮಾತನಾಡಿ, ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರು ಬಂದರೆ ರಕ್ಷಣೆ ಇಲ್ಲದಂತೆ ಆಗುತ್ತೆ, ಆದ್ದರಿಂದ ಪೊಲೀಸರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡ್ತಿವಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಟ್ರಿಪ್ಗೆ ಅಂತಾ ಬಂದವರನ್ನೂ ಬಿಡದೆ ಸುಲಿಗೆ ಮಾಡ್ತಿದ್ದವ್ರು ಕಂಬಿ ಹಿಂದೆ ಸೇರಿದ್ದಾರೆ. ಕಂಡೋರ ಕಾಸಿಗೆ ಕೈ ಹಾಕಿದರೆ ಮುದ್ದೆಯೇ ಗ್ಯಾರಂಟಿ ಅನ್ನೋದನ್ನ ಪೊಲೀಸ್ರು ತೋರಿಸಿಕೊಟ್ಟಿದ್ದಾರೆ. (ವರದಿ: ಮನು ಹಾದ್ರೀಪುರ, ನ್ಯೂಸ್18 ಕನ್ನಡ, ದೊಡ್ಡಬಳ್ಳಾಪುರ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.