NEWS

HMPV Virus: ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್! ILI, ಸಾರಿ ಕೇಸ್‌ಗಳ ಮೇಲೆ ಹದ್ದಿನಕಣ್ಣು

ಬೆಂಗಳೂರು: ಕೋವಿಡ್ ವೈರಸ್ (Covid Virus) ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ಮತ್ತೊಂದು ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಈ ನಡುವೆ ನಿನ್ನೆ ಬೆಂಗಳೂರಿಗೂ ಈ ವೈರಸ್ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ ನಿನ್ನೆ ಇಬ್ಬರು ಮಕ್ಕಳಲ್ಲಿ ಈ HMPV ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ದೇಶದಲ್ಲಿ ನಿನ್ನೆ ಒಂದೇ ದಿನಕ್ಕೆ ಮೂರು ಕೇಸ್ ಪತ್ತೆ! ದೇಶದಲ್ಲಿ ಒಟ್ಟು HMPV ಮೂರು ಸೋಂಕು ಪತ್ತೆಯಾಗಿದೆ. ನಿನ್ನೆಯೇ ಗುಜರಾತ್‌ನಲ್ಲಿ ಒಂದು ಹಾಗೂ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಆರೋಗ್ಯ ಇಲಾಖೆ ರಾಜ್ಯದ ILI ಹಾಗೂ ಸಾರಿ ಕೇಸ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮಕ್ಕಳು ಹಾಗೂ ವೈದ್ಯರ ಆರೋಗ್ಯದ ಮೇಲೆ ಗಮನ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ತೀವ್ರ ಜ್ವರ ಕೆಮ್ಮು ಹಾಗೂ ಸಾರಿ ಗುಣಲಕ್ಷಣಗಳು ಕಂಡು ಬಂದ್ರೆ ಟೆಸ್ಟ್ ಮಾಡಿಸುವುದು ಹಾಗೂ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ತಿಳಿಸಿದೆ. ಮಕ್ಕಳು ಹಾಗೂ ವೈದ್ಯರ ಮೇಲೆ ಗಮನವಿರಬೇಕು. ಆಸ್ಪತ್ರೆಗಳಲ್ಲಿನ ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ನಿಮ್ಯೋನಿಯಾ ಕೇಸ್ ಗಳ ಬಗ್ಗೆ ಗಮನ ವಹಿಸಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ನಿಮೋನಿಯಾ ಪ್ರಕರಣ ಕಂಡು ಬಂದ್ರೆ ಟೆಸ್ಟಿಂಗ್ ಹಾಗೂ ರಿಪೋರ್ಟ್ ಮಾಡುವಂತೆ ಎಚ್ಚರಿಸಿದೆ. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! 3 ಗಂಟೆ ಅವಧಿಯಲ್ಲಿ ಬೆಂಗಳೂರಿನ ಮತ್ತೊಂದು ಮಗುವಿನಲ್ಲಿ HMPV ವೈರಸ್ ಪತ್ತೆ! ರಾಜ್ಯದಲ್ಲಿ HMPV ಮ್ಯುಟೇಷನ್ ಟೆಸ್ಟಿಂಗ್ ಕಿಟ್‌ಗಳ ಕೊರತೆ ಇನ್ನು ಆರೋಗ್ಯ ಇಲಾಖೆಯಲ್ಲಿ HMPV ಮ್ಯುಟೇಷನ್ ಪರೀಕ್ಷೆ ಮಾಡೋ ಕಿಟ್ ಗಳ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಇದು ಮ್ಯುಟೇಷನ್ ಅಥವಾ ಸಾಮಾನ್ಯ ವೈರಸ್ ಎಂದು ತಿಳಿಯಲು ಸಾಧ್ಯವಿಲ್ಲದಾಗಿದೆ. ಮ್ಯುಟೇಷನ್ ಆಗಿದಿಯಾ ಎಂದು ತಿಳಿಯಲು PCR ಟೆಸ್ಟ್ ಅವಶ್ಯಕವಾಗಿದೆ. ಆದರೆ ರಾಜ್ಯದಲ್ಲಿ ಟೆಸ್ಟಿಂಗ್ ಕಿಟ್‌ಗಳೇ ಲಭ್ಯವಿಲ್ಲ. ILI ಇರುವವರಿಗೆ ಹೆಚ್ಚು ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನಗರದ ರಾಜೀವ್ ಗಾಂಧಿ, ನಿಮ್ಹಾನ್ಸ್ , ಕಿಮ್ಸ್ ಹಾಗೂ ಬಿಎಂಸಿಯಲ್ಲಿ ಪ್ರಯೋಗಾಲಯಗಳಿವೆ ಆದರೆ ಈ ಎಲ್ಲಾ ಕಡೆಗಳಲ್ಲಿ PCR ಟೆಸ್ಟ್ ಕಿಟ್ ಇಲ್ಲ. ಈಗಾಗಲೇ ILI ಇರುವವರಿಗೆ ಹೆಚ್ಚು ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದ್ರೆ ಮಕ್ಕಳಿಗೆ ಪಾಸಿಟಿವ್ ಆಗಿದ್ರೂ, ಅದು ಮ್ಯುಟೇಷನ್ ಎಂದು ತಿಳಿಯಲು ಕಷ್ಟವಾಗುತ್ತಿದೆ. ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದೇನು? ಸಚಿವ ದಿನೇಶ್‌ ಗುಂಡೂರಾವ್ ಅವರು ಈ ವೈರಸ್‌ ಕುರಿತು ಮಾತನಾಡಿದ್ದು, ಸಾರ್ವಜನಿಕರಲ್ಲಿ HMPV ಔಟ್ ಬ್ರೇಕ್ ಆಗಿದೆ ಎಂದು ಆತಂಕ ಇದೆ. ನಗರದಲ್ಲಿ ಎರಡು ಕೇಸ್ ಆಗಿರೋದು ಭಯ ಹುಟ್ಟಿಸಿದೆ. ಇದು ಮೊದಲ ಕೇಸ್ ಅಲ್ಲ. ILI ಯವರಿಗೆ ಬೇರೆ ಬೇರೆ ವೈರಸ್ ಬರುತ್ತೆ. ಅದ್ರಲ್ಲಿ ಈ HMPV ಕೂಡಾ ಇರುತ್ತದೆ ಎಂದರು. ಇದನ್ನೂ ಓದಿ: HMPV Virus: HMPV ವೈರಸ್‌ಗೆ ಆತಂಕ ಪಡಬೇಡಿ; ಜೀವಕ್ಕೇನು ಅಪಾಯವಿಲ್ಲ ಆದ್ರೆ ಮಾಸ್ಕ್ ಹಾಕಲೇಬೇಕು! ದಿನೇಶ್ ಗುಂಡೂರಾವ್ ಹಾನಿಕಾರಕ ವೈರಸ್ ಅಂತ ಹೇಳಲು ಸಾಧ್ಯವಿಲ್ಲ ಇದು ಹಾನಿಕಾರಕ ವೈರಸ್ ಅಂತ ಹೇಳಲು ಸಾಧ್ಯವಿಲ್ಲ. ಇದು ಸಹಜವಾಗಿರುವಂಥದ್ದು, ILI ಕೇಸ್ ನಲ್ಲಿ ಬೇರೆ ಬೇರೆ ವೈರಸ್ ಬರುತ್ತೆ. ಇದು ಬೇರೆ ಸಮಸ್ಯೆಗಳು ಸೇರಿಕೊಂಡು ಬರುತ್ತದೆ ಎಂದು ಹೇಳಿದ್ದಾರೆ. ಇದೀಗ ಆರೋಗ್ಯ ಇಲಾಖೆ ಹೊಸ HMPV ವೈರಸ್‌ ಬಗ್ಗೆ ಮುನ್ನೆಚ್ಚರಿಕಾ ಕ್ರಮವನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಮಕ್ಕಳು, ವಯಸ್ಕರು, ವೃದ್ದರು ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಏನು ಮಾಡಬಹುದು? ಏನು ಮಾಡಬಾರದು? ರಾಜಧಾನಿ ಬೆಂಗಳೂರಿನಲ್ಲಿ HMP ವೈರಸ್ ಪತ್ತೆ ಹಿನ್ನೆಲೆ, ಇದೀಗ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳೇನು? ಏನು ಮಾಡಬಹುದು? ರೋಗ ಲಕ್ಷಣ ಹಾಗೂ ಜ್ವರದ ಲಕ್ಷಣ ಇದ್ದವರು ಕರವಸ್ತ್ರ ಅಥವಾ ಮಾಸ್ಕ್ ನಿಂದ ಬಾಯಿಯನ್ನ ಮುಚ್ಚಿಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗೆಯೇ ಸ್ಯಾನಿಟೆಸರ್ ಬಳಕೆ ಮಾಡ್ಬೇಕು. ಜನರ ಗುಂಪಿನಲ್ಲಿ ಸೇರಬಾರದು ಜನಸಂದಣಿ ಪ್ರದೇಶದಲ್ಲಿ ಎಚ್ಚರವಹಿಸಬೇಕು ಬಿಸಿಯಾದ ಆಹಾರ ಸೇವನೆ ಮಾಡಬೇಕು ಹೆಚ್ಚಾಗಿ ನೀರು ಕುಡಿಯಬೇಕು. ಏನು ಮಾಡಬಾರದು? ಬಳಸಿದ ಕರವಸ್ತ್ರವನ್ನೆ ಬಳಸಬಾರದು ಸದಾ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬಾರದು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.