NEWS

Jobs In India: 2023-24ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 4 ಕೋಟಿಗೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿ!

ಸಾಂದರ್ಭಿಕ ಚಿತ್ರ ನಿರುದ್ಯೋಗ ಅನ್ನೋದು ಭಾರತದ ಆರ್ಥಿಕ ಸ್ಥಿತಿಗೆ ಸವಾಲೊಡ್ಡುವ ನಿರ್ಣಾಯಕ ಸಮಸ್ಯೆಯಾಗಿದೆ. ವೈವಿಧ್ಯಮಯ ಉದ್ಯೋಗಿಗಳನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿ ನಿರುದ್ಯೋಗ ದರದಲ್ಲಿನ ಏರಿಳಿತಗಳು ಭಾರತದಲ್ಲಿ ಸಹಜವಾಗಿದೆ. ಇದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ದೂರಗಾಮಿ ಪರಿಣಾಮಗಳನ್ನು ಸಹ ಬೀರುತ್ತದೆ. ಉದ್ಯೋಗ ಡೇಟಾ ಆರ್‌ಬಿಐನ KLEMS ಡೇಟಾಬೇಸ್‌ನ ಇತ್ತೀಚಿನ ವರದಿಗಳು 2023-24ರ ಆರ್ಥಿಕ ವರ್ಷದಲ್ಲಿ ಭಾರತವು 4.7 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ತಿಂಗಳಿಗೆ 38 ಲಕ್ಷ ಉದ್ಯೋಗಗಳನ್ನು ನೀಡಿದೆ. ಇದು ನಾಲ್ಕು ದಶಕಗಳಲ್ಲಿ ಅತಿ ಹೆಚ್ಚು ವಾರ್ಷಿಕ ಉದ್ಯೋಗ ಸೃಷ್ಟಿ ಎಂಬ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕತೆಯ ಸ್ಪಷ್ಟ ಚಿತ್ರಣವನ್ನು ಕಂಡುಹಿಡಿಯುವುದು ನಿಜಕ್ಕೂ ಸವಾಲಿನ ಸಂಗತಿ. ಆದರೆ ದೇಶ ಉದ್ಯೋಗದ ಬಿಕ್ಕಟ್ಟನ್ನು ಎದುರಿಸುತ್ತಿದೆ ಅನ್ನೋದಂತೂ ಸತ್ಯ ಎನ್ನುತ್ತಿವೆ ವಿವಿಧ ಮೂಲಗಳ ವರದಿಗಳು. ಭಾರತದಲ್ಲಿ ಉದ್ಯೋಗಗಳ ಸ್ಥಿತಿ ಗುಣಮಟ್ಟ v/s ಪ್ರಮಾಣ: ಉದ್ಯೋಗ ಗುಣಮಟ್ಟ ಚರ್ಚೆ ಕೆಲಸದ ಸ್ಥಿರತೆ, ಅವಧಿ ಮತ್ತು ವೇತನವನ್ನು ಒಳಗೊಂಡಿರುವ ಕೆಲಸದ ಗುಣಮಟ್ಟವು ನಿರ್ಣಾಯಕ ಸಮಸ್ಯೆಯಾಗಿ ಉಳಿದಿದೆ. ಭಾರತದಲ್ಲಿ, ಉದ್ಯೋಗಿಗಳ ಗಮನಾರ್ಹ ಭಾಗವು ಸ್ವಯಂ ಉದ್ಯೋಗಿ ಅಥವಾ ಅನೌಪಚಾರಿಕ ಉದ್ಯೋಗದಲ್ಲಿದೆ, ಇದು ಕೆಲಸದ ಗುಣಮಟ್ಟದ ಮೌಲ್ಯಮಾಪನವನ್ನು ಸಂಕೀರ್ಣಗೊಳಿಸುತ್ತದೆ. ಉದಾಹರಣೆಗೆ, ನೀವು ವಾರದಲ್ಲಿ ಒಂದು ಗಂಟೆ ಮಾತ್ರ ಕೆಲಸ ಮಾಡಿದರೂ ಅಥವಾ ವರ್ಷದಲ್ಲಿ 30 ದಿನ ಕೆಲಸ ಮಾಡಿದರೂ ಸಹ ನಿಮ್ಮನ್ನು ಉದ್ಯೋಗಿ ಎಂದು ಪರಿಗಣಿಸಬಹುದು. ಉದ್ಯೋಗದ ಈ ವಿಶಾಲವಾದ ವ್ಯಾಖ್ಯಾನವು ಕೆಲವೊಮ್ಮೆ ತಾತ್ಕಾಲಿಕ ಅಥವಾ ಕಡಿಮೆ-ಪಾವತಿಸುವ ಉದ್ಯೋಗಗಳನ್ನು ಒಳಗೊಂಡಿರುತ್ತದೆ. ಪ್ರಾದೇಶಿಕ ಅಸಮಾನತೆಗಳು ಮತ್ತು ವಲಯದ ವ್ಯತ್ಯಾಸಗಳು ಉದ್ಯೋಗದ ಗುಣಮಟ್ಟ ಮತ್ತು ಉದ್ಯೋಗ ದರಗಳು ರಾಜ್ಯಗಳಾದ್ಯಂತ ಗಮನಾರ್ಹವಾಗಿ ಬದಲಾಗುತ್ತವೆ. ಉದಾಹರಣೆಗೆ, ಕೇರಳ ಮತ್ತು ಗೋವಾದಲ್ಲಿ ಯುವ ನಿರುದ್ಯೋಗವು ಸುಮಾರು 30% ರಷ್ಟಿದೆ. ಆದರೆ ಬಿಹಾರವು ತನ್ನ ಯುವಕರಲ್ಲಿ ಬಹುತೇಕ ಸಂಪೂರ್ಣ ಉದ್ಯೋಗ ದರವನ್ನು ಹೊಂದಿದೆ. ಆದರೂ ಕೇರಳದಲ್ಲಿ ಕೃಷಿ ವೇತನವು ಬಿಹಾರಕ್ಕಿಂತ ಗಣನೀಯವಾಗಿ ಹೆಚ್ಚಿದ್ದು, ಇದು ಪ್ರಾದೇಶಿಕ ಆರ್ಥಿಕ ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಸನ್ನಿವೇಶ ಮತ್ತು ಭಾರತದ ವಿಶಿಷ್ಟ ಸವಾಲುಗಳು ಯುವ ನಿರುದ್ಯೋಗವು ಕೇವಲ ಭಾರತವಲ್ಲದೇ ಜಾಗತಿಕ ಸಮಸ್ಯೆಯಾಗಿದ್ದು, ಬ್ರೆಜಿಲ್, ಚೀನಾ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಉದ್ಯೋಗದ ಅವಧಿ ಮತ್ತು ಆದಾಯದ ಸಮರ್ಪಕತೆಯಂತಹ ಉದ್ಯೋಗದ ಮೂಲಭೂತ ವಿಷಯಗಳ ಬಗ್ಗೆ ಸ್ಪಷ್ಟತೆಯ ಕೊರತೆಯು ಭಾರತದ ಮತ್ತೊಂದು ಸವಾಲಾಗಿ ನಿಂತಿದೆ. ಈ ತಿಳುವಳಿಕೆಯ ಕೊರತೆಯು ಉದ್ಯೋಗ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಪ್ರಯತ್ನಗಳಿಗೆ ತಡೆಯಾಗಿ ನಿಂತಿದೆ. ಉದ್ಯೋಗ ಸ್ಥಿತಿ ವಾರ್ಷಿಕ ಸ್ಥಿತಿ: ಉದ್ಯೋಗ ಸ್ಥಿತಿಯನ್ನು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ: ಒಂದು ‘ಪ್ರಧಾನ ಸ್ಥಿತಿ’ ಮತ್ತೊಂದು ‘ಅಧೀನ ಸ್ಥಿತಿ’. ಸಮೀಕ್ಷೆಯ ಹಿಂದಿನ 365 ದಿನಗಳ ಗಮನಾರ್ಹ ಭಾಗಕ್ಕೆ ಒಬ್ಬ ವ್ಯಕ್ತಿ ಕೆಲಸ ಮಾಡಿದರೆ ‘ಪ್ರಧಾನ ಸ್ಥಿತಿ’ಯಲ್ಲಿ ಉದ್ಯೋಗಿ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: Uttara Kannada Landslide: ಭೂಕುಸಿತಕ್ಕೆ ಪ್ರಮುಖ ಕಾರಣ ಇದುವೇ ಅಂತಿದ್ದಾರೆ ತಜ್ಞರು! ಈ ಅವಧಿಯಲ್ಲಿ ಕನಿಷ್ಠ 30 ದಿನಗಳ ಕಾಲ ಕೆಲಸ ಮಾಡಿದವರನ್ನು ‘ಅಧೀನ ಸ್ಥಿತಿ’ ಅಡಿಯಲ್ಲಿ ವರ್ಗೀಕರಿಸಲಾಗಿದೆ. ವ್ಯಕ್ತಿಗಳು ವಿವಿಧ ಸಮಯಗಳಲ್ಲಿ ಬಹು ಉದ್ಯೋಗಗಳನ್ನು ಹೊಂದಿರಬಹುದು. ಈ ಮಾಹಿತಿಯನ್ನು ವಾರ್ಷಿಕವಾಗಿ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯಲ್ಲಿ (PLFS) ಸಂಗ್ರಹಿಸಲಾಗುತ್ತದೆ, ಜುಲೈ-ಜೂನ್ ಅವಧಿಯನ್ನು ಒಳಗೊಂಡ ವರದಿಗಳು ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತವೆ. ಇತ್ತೀಚಿನ ವರದಿಯು ಜುಲೈನಲ್ಲಿಏ ಹೊರಬಿದ್ದಿದೆ. ಪ್ರಸ್ತುತ ಸಾಪ್ತಾಹಿಕ ಸ್ಥಿತಿ: ಈ ವರ್ಗೀಕರಣವು ಸಮೀಕ್ಷೆಯ ಮೊದಲು ಕಳೆದ ವಾರದೊಳಗೆ ಯಾವುದೇ ದಿನದಂದು ಕನಿಷ್ಠ ಒಂದು ಗಂಟೆ ಕೆಲಸ ಮಾಡಿದ್ದರೆ ಅವರನ್ನು ಉದ್ಯೋಗಿಗಳೆಂದು ಪರಿಗಣಿಸುತ್ತದೆ. ಈ ಸ್ಥಿತಿಯ ಡೇಟಾವನ್ನು ಎರಡು ರೂಪಗಳಲ್ಲಿ ಪ್ರಕಟಿಸಲಾಗುತ್ತದೆ. ಅವುಗಳೆಂದರೆ ಮೊದಲನೆಯದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಂಕಿಅಂಶಗಳನ್ನು ಒಳಗೊಂಡಿರುವ ವಾರ್ಷಿಕ ವರದಿ, ಮತ್ತು ಎರಡನೇಯದಾಗಿ ಕೇವಲ ನಗರ ಉದ್ಯೋಗದ ಮೇಲೆ ಕೇಂದ್ರೀಕರಿಸುವ ಪ್ರತ್ಯೇಕ ತ್ರೈಮಾಸಿಕ ವರದಿಗಳು. ಈ ವರ್ಷ ಡೇಟಾವನ್ನು ಮೇ 2024 ರಲ್ಲಿ ಬಿಡುಗಡೆ ಮಾಡಲಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.