NEWS

Pakistani Citizen: ಪಾಕ್ ಪ್ರಜೆಗಳು ಭಾರತದೊಳಗೆ ನುಸುಳಿದ್ದು ಯಾಕೆ? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬೆಂಗಳೂರಲ್ಲಿ ಬಂಧನವಾದ ಪರ್ವೇಜ್!

ಸಾಂದರ್ಭಿಕ ಚಿತ್ರ ಬೆಂಗಳೂರು: ಇತ್ತೀಚಿಗೆ ಜಿಗಣಿಯಲ್ಲಿ (Jigani) ಪಾಕಿಸ್ತಾನಿ ಪ್ರಜೆ (Pakistani Citizen) ಮತ್ತು ಆತನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು (Police) ಬಂಧಿಸಿದ್ದರು. ಈ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಮೇರೆಗೆ ಮತ್ತೆ ಮೂವರು ಪಾಕ್‌ ಪ್ರಜೆಗಳನ್ನು ಬೆಂಗಳೂರಿನ (Bangalore) ಪೀಣ್ಯದಲ್ಲಿ (Pinya) ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಈ ಪ್ರಮುಖ ಆರೋಪಿಯು ಪಾಕ್ ಪ್ರಜೆಗಳಿಗೆ ಅಕ್ರಮವಾಗಿ ಭಾರತ (India) ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತಿದ್ದ ಎಂದು ಹೇಳಲಾಗಿದೆ. ಸಧ್ಯ ಪೊಲೀಸರು ಆತನನ್ನು ಅಜ್ಞಾತ ಸ್ಥಳದಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಇವನೇ ಕಾರಣ ಪಾಕ್ ಪ್ರಜೆಗಳ ಬಂಧನ ಪ್ರಕರಣದ ಪ್ರಮುಖ ರೂವಾರಿ ಪರ್ವೇಜ್‌ನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಖರ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪರ್ವೇಜ್‌ ಜಿಗಣಿ ಪೊಲೀಸರ ವಶದಲ್ಲಿ ಇದ್ದಾನೆ. ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಇವನೇ ಪ್ರಮುಖ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ಧರ್ಮ ಗುರುಗಳ ಪ್ರವಚನ ಭಾರತೀಯ ದಾಖಲೆಗಳನ್ನು ಸಹ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ಈತನೇ ಮಾಡಿಕೊಟ್ಟಿದ್ದ. ಅಲ್ಲದೇ, ಯೂನಸ್ ಆಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಪ್ರಚಾರಕ. ಬಂಧಿತ ಪ್ರಜೆಗಳೆಲ್ಲರೂ ಸಹ ಇವನ ಸಂಪರ್ಕದಲ್ಲಿ ಇದ್ದರು. ಇವನ ಸೂಚನೆಯ ಮೇರೆಗೆ ಧರ್ಮ ಗುರುಗಳ ಪ್ರವಚನವನ್ನು ಪಾಕ್ ಪ್ರಜೆಗಳು ಭಾರತದಲ್ಲಿ ಮಾಡುತ್ತಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ. ಸದ್ಯ ಜಿಗಣಿ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟು ಅಂಶಗಳು ಹೊರಬರಬೇಕಿದೆ. ಇದನ್ನೂ ಓದಿ: ‘ಹಿಂದೂ ಮಕ್ಕಳನ್ನು ಅನ್ಯಧರ್ಮೀಯರ ಶಾಲೆಗೆ ಕಳಿಸಬೇಡಿ’! ಹೇಳಿಕೆ ಕೊಟ್ಟ ಪ್ರಾಧ್ಯಾಪಕನ ವಿರುದ್ಧ FIR ಪ್ರಕರಣದ ಪ್ರಮುಖ ಆರೋಪಿ ಪರ್ವೇಜ್, ಮೆಹದಿ ಫೌಂಡೇಷನ್ ಪ್ರಮುಖ ವ್ಯಕ್ತಿ ಪ್ರಕರಣದ ಪ್ರಮುಖ ಆರೋಪಿ ಪರ್ವೇಜ್, ಮೆಹದಿ ಫೌಂಡೇಷನ್ ಪ್ರಮುಖ ವ್ಯಕ್ತಿಯಾಗಿದ್ದಾನೆ. ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನ ಪ್ರಚಾರದ ಭಾರತದ ಉಸ್ತುವಾರಿಯನ್ನು ಇತನೇ ನಿರ್ವಹಿಸುತ್ತಾನಂತೆ. ಪೊಲೀಸರು ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳು ಈ ಕೆಳಗಿನಂತಿವೆ.. ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಬಗ್ಗೆ ವಿಚಾರಣೆ ದೇಹಶುದ್ಧಿಗಿಂತ ಆತ್ಮ ಶುದ್ಧಿ ಬಗ್ಗೆ ನಂಬಿಕೆ ಯೂನಸ್ ಅಲ್ಗೋರ್ ಧರ್ಮ ಗುರುಗಳು ದೇಹಶುದ್ಧಿಗಿಂತ ಆತ್ಮ ಶುದ್ಧಿ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರಂತೆ, ಇವರ ವಿಚಾರಧಾರೆಗಳಿಂದ ಕಟ್ಟರ್ ಮುಸ್ಲಿಂವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಸ್ಲಿಂ ಗುರುಗಳ ದಾಳಿಯಿಂದ ಪಾರಾಗಲು ಪರ್ವೇಜ್ ಅಂಡ್ ಟೀಮ್ ಪಾಕಿಸ್ತಾನವನ್ನು ತ್ಯಜಿಸಿದ್ದನು. ಬಾಂಗ್ಲಾದೇಶದಲ್ಲಿಯು ದಿನ್ ಐ ಇಲಾಹಿ ಮಾದರಿ ಧರ್ಮ ಪ್ರವಚನ ಪ್ರಚಾರ ಮಾಡಲು ಪ್ರಯತ್ನಿಸಿದಾಗ ಅಲ್ಲಿಯೂ ಮುಸ್ಲಿಂ ಧರ್ಮ ಗುರುಗಳಿಂದ ಜೀವ ಬೆದರಿಕೆ ಬಂದಿದೆ. ಹಾಗಾಗಿಸುರಕ್ಷತೆ ದೃಷ್ಟಿಯಿಂದ ಪಾಕ್ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆ. ಆದ್ರೆ ದಶಕಗಳ ಹಿಂದೆ ದಿನ್ ಐ ಇಲಾಹಿ ಪಂಥ ನಶಿಸಿ ಹೋಗಿದೆ. ಆದರೂ ಅದರ ವಿಚಾರಧಾರೆಗಳನ್ನು ಮೆಹದಿ ಫೌಂಡೇಷನ್ ಪ್ರಚಾರ ಮಾಡುತ್ತಿದೆ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. 8 ಮಂದಿ ಪಾಕಿಸ್ತಾನಿ ಪ್ರಜೆಗಳ ಬಂಧನ ಸದ್ಯ ಪರ್ವೇಜ್ ಸೇರಿದಂತೆ 8 ಮಂದಿ ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್ ಆಗಿದ್ದಾರೆ. ಪರ್ವೇಜ್ ಸಂಪರ್ಕದಲ್ಲಿದ್ದ ಮತ್ತಷ್ಟು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳು None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.