NEWS

Vegetable Price Hike: ಮಳೆಯಿಂದಾಗಿ ಆಮದು ಕಡಿಮೆ, ಇಲ್ಲಿದೆ ಇಂದಿನ ತರಕಾರಿ ದರ

ಇಂದಿನ ತರಕಾರಿ ದರ ಬೆಂಗಳೂರು: ಮುಂಗಾರು ಚುರುಕಾದ ಬೆನ್ನಲ್ಲೇ ಬೆಂಗಳೂರಲ್ಲಿ ತರಕಾರಿ ದರಗಳು ಏರಿಕೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ತರಕಾರಿ ಬೆಲೆ (Vegetable Price Hike) ಹೆಚ್ಚಳಗೊಂಡಿದೆ‌. ಟೊಮ್ಯಾಟೊ ಶತಕದ ಸನಿಹ ತಲುಪಿದ್ರೆ, ಇತರೆ ತರಕಾರಿ ಬೆಲೆಗಳೂ ಗಗನಕ್ಕೇರಿದೆ. ಮಳೆಯಿಂದಾಗಿ ಆಮದು ಕಡಿಮೆ, ಗ್ರಾಹಕರ ಕೈ ಸುಟ್ಟ ದರ ಅನ್ನಕ್ಕೆ ತರಕಾರಿ ಎಲ್ಲಾ ಹಾಕಿ ಒಳ್ಳೆ ತರಕಾರಿ ಸಾಂಬಾರು ಮಾಡೋಣ ಅಂದುಕೊಂಡವರು ತಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳೊದು ಉತ್ತಮ. ಯಾಕಂದ್ರೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಜಾಸ್ತಿ ಆಗಿದೆ. ನಿರಂತರ ಮಳೆಯ ಕಾರಣ ತರಕಾರಿ ಬೆಲೆ ಹೆಚ್ಚಳಗೊಂಡಿದೆ. ರಾಜ್ಯದ ಉದ್ದಗಲಕ್ಕೂ ಅಬ್ಬರಿಸುತ್ತಿರುವ ಮುಂಗಾರು ಮಳೆಗೆ ಇಳುವರಿ ಕಡಿಮೆಯಾಗಿದೆ ಇದರ ಜೊತೆಗೆ ಆಮದು ಕೂಡ ಕುಗ್ಗಿದ್ದು, ದುಬಾರಿ ದುನಿಯಾದಲ್ಲಿ ಶ್ರೀ ಸಾಮಾನ್ಯರ ಬದುಕು ಕಷ್ಟವಾಗಿದೆ. ಮತ್ತೆ ಶತಕ ಬಾರಿಸಿದ ಟೊಮ್ಯಾಟೋ ದರ ತರಕಾರಿ ಬೆಲೆ ಹೆಚ್ಚಳ ಜನರಿಗೆ ಬಿಸಿ‌ ಮುಟ್ಟಿಸಿದೆ. ಅದರಲ್ಲೂ ಪ್ರತಿ ಅಡುಗೆಗೆ ಬೇಕಿರುವ ಟೊಮ್ಯಾಟೊ ಬೆಲೆ ಜಾಸ್ತಿ ಆಗಿದೆ. ಒಳ್ಳೆ ಕ್ವಾಲಿಟಿ ಟೊಮ್ಯಾಟೊ ಬೆಲೆ 100 ರಿಂದ 130 ರೂಪಾಯಿವರೆಗೆ ದರ ನಗರದ ಪ್ರಮುಖ ಮಾರುಕಟ್ಟೆಗಳಲ್ಲೇ ನಡೆಯುತ್ತಿದೆ. ಇದರ ಜೊತೆಗೆ ಇತರೆ ತರಕಾರಿಗಳ ಬೆಲೆಯೂ ಗ್ರಾಹಕರ ಜೇಬು ಸುಡುತ್ತಿದೆ. ತರಕಾರಿ ಬೆಲೆಗಳೇ ಈ ರೀತಿ ಏರಿಕೆಯಾದರೆ ಜನರು ಏನು ತಿನ್ನಬೇಕು? ಸರ್ಕಾರದ ದರ ಗಳ ಮೇಲೆ ಹಿಡಿತ ಸಾಧಿಸಿಕೊಳ್ಳಬೇಕು ಇಲ್ಲಿದಿದ್ದರೆ ಬದುಕು ಮತ್ತಷ್ಟು ಕಷ್ಟ ಆಗಲಿದೆ ಎನ್ನುತ್ತಿದ್ದಾರೆ ಗ್ರಾಹಕರು. ಇತರೆ ತರಕಾರಿ ದರವೂ ತುಟ್ಟಿ ರಾಜ್ಯದಲ್ಲಿ ಟೊಮ್ಯಾಟೋ ಉತ್ಪಾದನೆ ಕುಸಿತ ಕಂಡ ಹಿನ್ನೆಲೆ ಬೆಲೆ ಏರಿಕೆಯಾಗಿದೆಯಂತೆ. ಮಂಡ್ಯ, ಕೋಲಾರ, ಕನಕಪುರ, ಕಡೂರು, ಮದ್ದೂರು ಕಡೆಗಳಲ್ಲಿ ಟೊಮ್ಯಾಟೋ ಇಳುವರಿ ಕುಸಿತವಾಗಿದೆ. ಸದ್ಯ ಮಹಾರಾಷ್ಟ್ರದಿಂದ ಆಮದಾಗುವ ಟೊಮ್ಯಾಟೋ ನೆಚ್ಚಿಕೊಂಡಿದೆ ಬೆಂಗಳೂರಿನ ಮಾರುಕಟ್ಟೆಗಳು. ಟೊಮ್ಯಾಟೋ ಜೊತೆಗೆ ಬೀನ್ಸ್, ಬೆಳ್ಳುಳ್ಳಿ ಸೇರಿದಂತೆ ಇತರೆ ತರಕಾರಿ ದರವೂ ತುಟ್ಟಿಯಾಗಿದೆ. ಮುಂದಿನ ಕೆಲ ದಿನಗಳ ತರಕಾರಿ ದರ ಹೀಗೆಯೇ ಇರುವ ಸಾಧ್ಯತೆ ಇದೆ. ಒಟ್ಟಾರೆ ಮಳೆ ನಿಲ್ಲುವ ತನಕ ತರಕಾರಿ ಬೆಲೆ ಏರಿಳಿತ ಕಾಣುತ್ತಲೇ ಇರಲಿದೆ. ಸ್ಬಲ್ಪ ದಿನದಲ್ಲಿ ಈರುಳ್ಳಿ ಬೆಲೆ ಕೂಡ ಹೆಚ್ಚಳ ಕಾಣುವ ಸಾಧ್ಯತೆ ಇದೆ. ಹೀಗಾಗಿ ಈ‌ ಮಳೆಗಾಲ ಜನರ ಕೈ ಸುಡುವುದಂತೂ ಗ್ಯಾರಂಟಿ. ಹೇಗಿದೆ ಇಂದಿನ ತರಕಾರಿ ದರ !? ಟೊಮ್ಯಾಟೋ : ₹100 - ₹130 ಬೀನ್ಸ್ : ₹100 - ₹140 ಬಿಳಿ ಬದನೆ : ₹100 ಕ್ಯಾರೆಟ್ : ₹100 - ₹120 ಬಜ್ಜಿ ಮೆಣಸಿನಕಾಯಿ : ₹80 - ₹100 ಕ್ಯಾಪ್ಸಿಕಂ : ₹100 - ₹120 ಬೆಂಡೆಕಾಯಿ : ₹50 - ₹80 ಮೂಲಂಗಿ : ₹60 - ₹90 ನುಗ್ಗೆಕಾಯಿ : ₹175 - ₹190 ಶುಂಠಿ : ₹190 - ₹260 ಬೆಳ್ಳುಳ್ಳಿ : ₹290 - ₹360 ಹೀರೇಕಾಯಿ : ₹90 - ₹120 None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.