ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ದಿಲ್' ಕದ್ದ ಚಾಕೊಲೇಟ್ ಗರ್ಲ್.! ಕನ್ನಡದ ಸೀತಾರಾಮ ಸೀರಿಯಲ್ ಖ್ಯಾತಿಯ ನಟಿ ಮೇಘನಾ ಶಂಕರಪ್ಪ (Meghana Shankarappa) ಡಿಕೆಡಿಗೆ ಕಾಲಿಟ್ಟಿದ್ದಾರೆ. ನಾನ್ ಡ್ಯಾನ್ಸರ್‌ಗೆ (Non-Dancer) ಇಲ್ಲಿ ಒಳ್ಳೆ ಚಾನ್ಸ್ ಸಿಕ್ಕಿದೆ. ಆದರೆ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇಲ್ಲಿ ಕೊಂಚ ಶಾಕ್ ಕೊಟ್ಟಿದ್ದಾರೆ. ಹುಡುಗರು ಸಿನಿಮಾದ “ಹೆಲ್ಲೋ 123 ಮೈಕ್ ಟೆಸ್ಟಿಂಗ್” ಹಾಡಿಗೆ ಜಬರ್‌ದಸ್ತ್ ಆಗಿಯೇ ಡ್ಯಾನ್ಸ್ ಮಾಡಿ ಶಾಕ್ (Shock) ಕೊಟ್ಟಿದ್ದಾರೆ. ಮೇಘನಾ ಡ್ಯಾನ್ಸ್ ನೋಡಿ ಸ್ವತಃ ಶಿವರಾಜ್ ಕುಮಾರ್ (Shiva Rajkumar) ಕೂಡ ಆಶ್ಚರ್ಯ ಪಟ್ಟಿದ್ದಾರೆ. ಆದರೆ, ಮೇಘನಾ ಬಗೆಗಿನ ಒಂದು ವಿಡಿಯೋ ನೋಡಿದ್ಮೇಲೆ ಶಿವಣ್ಣ ಕೂಡ ಕನ್ವೆನ್ಸ್ ಆಗಿಯೇ ಬಿಟ್ಟಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿಯೇ ಮೇಘನಾ ಕುರಿತ ಒಂದಷ್ಟು ಸೀಕ್ರೆಟ್ಸ್ ರಿವೀಲ್ ಆಗಿವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಮೇಘನಾ ಶಂಕರಪ್ಪ ಸೂಪರ್ ಡ್ಯಾನ್ಸರ್ ನೋಡಿ.! ಮೇಘನಾ ಶಂಕರಪ್ಪ ಒಂದು ವೇಳೆ ನಟಿ ಆಗದೇ ಇದ್ರೆ, ಒಳ್ಳೆ ಡ್ಯಾನ್ಸರ್ ಆಗ್ತಾ ಇದ್ರು. ಬಾಲ್ಯದಿಂದಲೂ ಡ್ಯಾನ್ಸ್ ಬಗ್ಗೆ ಜಾಸ್ತಿನೆ ಕ್ರೇಜ್ ಬೆಳೆಸಿಕೊಂಡಿದ್ದರು. ಆದರೆ, ಹೋಗ್ತಾ ಹೋಗ್ತಾ ಅದು ಸಾಧ್ಯವಾಗದೇ ಇದ್ದಾಗ, ನಟನೆ ಕಡೆಗೆ ವಾಲಿದ್ರು. ಆಗಾಗಿಯೇ ಕನ್ನಡದ ಹಲವು ಸೀರಿಯಲ್‌ಗಳಲ್ಲಿ ಮೇಘನಾ ತಮ್ಮ ಛಾಪು ಮೂಡಿಸಿದ್ದಾರೆ. ಡ್ಯಾನ್ಸ್ ಬಳಿಕ ಚಾಕೊಲೇಟ್ ಪಡೆದ ಚಾಕ್ಲೆಟ್ ಗರ್ಲ್.! ಮೇಘನಾ ಶಂಕರಪ್ಪ DKD ಅಲ್ಲಿ ಸಖತ್ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರಿಂದಲೂ ಪ್ರಶಂಸೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಇಲ್ಲಿ ಚಾಕೊಲೇಟ್ ರೂಪದಲ್ಲಿ ವಿಶೇಷ ಗಿಫ್ಟ್ ಕೂಡ ಪಡೆದುಕೊಂಡಿದ್ದಾರೆ. ಚಾಕೊಲೇಟ್ ಅಂದ್ರೆ ತುಂಬಾನೆ ಇಷ್ಟಪಡೋ ಮೇಘನಾ ಶಂಕರಪ್ಪ, ನಿರ್ಣಾಯಕ ವಿಜಯ ರಾಘವೇಂದ್ರ ಅವರಿಂದ ಒಂದಲ್ಲ, ಎರಡು ಚಾಕೊಲೇಟ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Aparna: ಅಪರ್ಣಾರ ಚಿಕ್ಕ ಚಿಕ್ಕ ಆಸೆಗಳೇನು ಗೊತ್ತಾ? ಅದರಲ್ಲೇ ಇತ್ತು ಅವರ ದೊಡ್ಡ ಖುಷಿ ಹಾಗೆ ಮೇಘನಾಗೆ ಪಾನಿಪುರಿ ಅಂದ್ರೂ ಬಲು ಇಷ್ಟ ಆಗುತ್ತವೆ. ಅದಕ್ಕೇನೆ ಯಾವಾಗ ನೋಡಿದ್ರೂ ಪಾನಿಪುರಿ ತಿಂತಾರೆ. ಹಾಗಾಗಿಯೇ ಸೀತಾರಾಮ ಸೀರಿಯಲ್‌ನಲ್ಲಿ ಪಾನಿಪುರಿ ತಿನ್ನೋ ಸೀನ್‌ಗಳು ಇದ್ದೇ ಇರುತ್ತವೆ. ನನ್ನ ಈ ಆಸೆ ನೋಡಿಯೇ ಸೀರಿಯಲ್‌ನಲ್ಲಿ ಪಾನಿಪುರಿ ತಿನ್ನೋ ಸೀನ್‌ಗಳೂ ಇರುತ್ತವೆ ಅನಿಸುತ್ತದೆ ಅಂತಲೇ ಮೇಘನಾ ಶಂಕರಪ್ಪ ಹೇಳಿದ್ದಾರೆ. ಮೇಘನಾ ಶಂಕರಪ್ಪ ಸೀರಿಯಲ್ ಪಯಣ.! ಮೇಘನಾ ಶಂಕರಪ್ಪ ಹಲವು ಸೀರಿಯಲ್ ಮಾಡಿದ್ದಾರೆ. ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ನೇತ್ರಾ ಅನ್ನೋ ವಿಲನ್ ರೋಲ್ ಮಾಡಿದ್ದರು. ನಿರೂಪಕಿ ಆಗಿಯೇ ಮೇಘನಾ ಶಂಕರಪ್ಪ ಮೊದಲು ಕರಿಯರ್ ಆರಂಭಿಸಿದ್ದರು. ಆ ಮೇಲೆ ಕಿನ್ನರಿ ಸೀರಿಯಲ್ ಮೂಲಕ ನಟನೆ ಆರಂಭಿಸಿದ್ದರು. ಇದಾದ್ಮೇಲೆ ಕೃಷ್ಣ ತುಳಸಿ, ದೇವಯಾನಿ, ಸಿಂಧೂರ, ರತ್ನಗಿರಿ ರಹಸ್ಯ ಹಿಂಗೆ ಕನ್ನಡದ ಹಲವಾರು ಸೀರಿಯಲ್‌ಗಳಲ್ಲಿಯೇ ಅಭಿನಯಿಸಿದ್ದಾರೆ. ಇದೀಗ ಸೀತಾರಾಮ ಸೀರಿಯಲ್‌ನಲ್ಲಿ ಸೀತಾ ಆಪ್ತ ಸ್ನೇಹಿತೆ ಪ್ರಿಯಾ ಪಾತ್ರದಲ್ಲಿಯೇ ಕಾಣಿಸುತ್ತಿದ್ದಾರೆ. ಇದರ ಮಧ್ಯೆ ಇದೀಗ DKD ಶೋಗೂ ಕಾಲಿಟ್ಟಿದ್ದಾರೆ. ಮೇಘನಾ ಟಫ್ ಕಾಂಪಿಟೇಟರ್ ಎಂದ ಶಿವಣ್ಣ.! ಮೇಘನಾ ಶಂಕರಪ್ಪ DKDಯ ಟಫ್ ಕಾಂಪಿಟೇಟರ್ ಆಗಿದ್ದಾರೆ. ಸಖತ್ ಡ್ಯಾನ್ಸ್ ಮಾಡೋ ಮೇಘನಾ ಇದೀಗ ಹೆಚ್ಚು ಗಮನ ಸೆಳೆದಿದ್ದಾರೆ. ಶೋದ ಮೊದಲ ಎಪಿಸೋಡ್‌ನಲ್ಲಿಯೇ ಮೇಘನಾ ಶಂಕರಪ್ಪ ಎಲ್ಲರ ದಿಲ್ ಕದ್ದು ಬಿಟ್ಟಿದ್ದಾರೆ. ಈ ಮೂಲಕ ತಾವು ಒಬ್ಬ ಡ್ಯಾನ್ಸರ್ ಅನ್ನೋದನ್ನ ಈಗಲೇ ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ಇದನ್ನ ನೋಡಿಯೇ ಮೇಘನಾ ಟಫ್ ಕಾಂಪಿಟೇಟರ್ ಅಂತಲೇ ಶಿವಣ್ಣ ಹೇಳಿದ್ದಾರೆ. ಮೇಘನಾ ಶಂಕರಪ್ಪ ಸಿನಿಮಾಗಳನ್ನ ಮಾಡಿದಂತೆ ಕಾಣೋದಿಲ್ಲ. ಸೀರಿಯಲ್‌ಗಳಲ್ಲಿಯೇ ಬ್ಯುಸಿ ಆಗಿರೋ ಮೇಘನಾ ಸದ್ಯ DKD ಮೂಲಕವೇ ವಿಭಿನ್ನವಾಗಿಯೇ ಎಲ್ಲರ ಗಮನ ಸೆಳೆಯೋಕೆ ಬರ್ತಿದ್ದಾರೆ. ಮುಂದಿನ ವಾರ ಯಾವ ರೂಪದಲ್ಲಿ.? ಯಾವ ನೃತ್ಯದ ಮೂಲಕ ಬರ್ತಾರೋ ಅನ್ನೋ ಕುತೂಹಲ ಕೂಡ ಈಗಲೇ ಮೂಡಿದೆ ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.