KANNADA

22 ಸಿಕ್ಸರ್‌, 36 ಬೌಂಡರಿ ಬಾರಿಸಿ ಅಬ್ಬರಿಸಿದ ದಾಂಡಿಗ..! ಧೋನಿ ಶಿಷ್ಯನ ಬ್ಯಾಟಿಂಗ್‌ ಕ್ರೇಜ್‌ʼಗೆ ಕ್ರಿಕೆಟ್‌ ಲೋಕವೇ ಫಿದಾ

Texas Super Kings faf du plessis: ಧೋನಿ ಶಿಷ್ಯ ಅಮೆರಿಕದ T20 ಲೀಗ್ MLC 2024 ರಲ್ಲಿ ಅಬ್ಬರಿಸಿದ್ದಾರೆ ಆ ಆಟಗಾರ ಬೇರಾರು ಅಲ್ಲ, ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್‌ ನಾಯಕರಾಗಿರುವ ಫಾಫ್ ಡುಪ್ಲೆಸಿಸ್. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ನ್ಯೂಯಾರ್ಕ್ ವಿರುದ್ಧ ಬಲಗೈ ಬ್ಯಾಟ್ಸ್‌ಮನ್ 47 ಎಸೆತಗಳಲ್ಲಿ 72 ರನ್ ಗಳಿಸಿದ್ದಾರೆ. ಅವರ ಅದ್ಭುತ ಇನ್ನಿಂಗ್ಸ್‌ನಿಂದ ಟೆಕ್ಸಾಸ್ ಸೂಪರ್ ಕಿಂಗ್ಸ್ 9 ವಿಕೆಟ್‌ಗಳಿಂದ ಗೆದ್ದು ಚಾಲೆಂಜರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಇದನ್ನೂ ಓದಿ: ಫಿಕ್ಸ್ ಆಯ್ತಾ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮದುವೆ? ಗುಳಿಕೆನ್ನೆ ಚೆಲುವೆಯ ಹುಡುಗ ಯಾರು? ಈ ಮಹತ್ವದ ಪಂದ್ಯದಲ್ಲಿ 40ರ ಹರೆಯದ ಡುಪ್ಲೆಸಿಸ್ ರನ್‌ʼಗಳ ಮಹಾಪೂರವನ್ನೇ ಹರಿಸಿದ್ದರು. ಇದುವರೆಗೆ 7 ಪಂದ್ಯಗಳನ್ನಾಡಿದ್ದು 375 ರನ್ ಗಳಿಸಿದ್ದಾರೆ. ಡುಪ್ಲೆಸಿಸ್ ಅವರ ಬ್ಯಾಟಿಂಗ್ ಸರಾಸರಿ 53.57 ಆಗಿದ್ದರೆ ಸ್ಟ್ರೈಕ್ ರೇಟ್ 170 ಮೀರಿದೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಡುಪ್ಲೆಸಿಸ್ ಪಾತ್ರರಾಗಿದ್ದಾರೆ. ಡುಪ್ಲೆಸಿಸ್ ತಮ್ಮ ಬ್ಯಾಟ್‌ನಲ್ಲಿ ಇದುವರೆಗೆ 22 ಸಿಕ್ಸರ್ ಮತ್ತು 36 ಬೌಂಡರಿಗಳನ್ನು ಬಾರಿಸಿದ್ದಾರೆ. ಇದನ್ನೂ ಓದಿ: ಶೆಫಾಲಿ-ಸ್ಮೃತಿ ಅಬ್ಬರಕ್ಕೆ ಮಣಿದ ಬಾಂಗ್ಲಾದೇಶ: ಭಾರತ ವನಿತೆಯರ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶ ಒಂದೆಡೆ ಮೇಜರ್ ಲೀಗ್ ಕ್ರಿಕೆಟ್ʼನಲ್ಲಿ ಡುಪ್ಲೆಸಿಸ್ ಪವಾಡ ಮಾಡಿದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಡುಪ್ಲೆಸಿಸ್ 2021 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಮತ್ತು ಏಕದಿನ ಮಾದರಿಯಲ್ಲಿ ಆಡಲು ಆಸಕ್ತಿ ತೋರಿದ್ದರೂ ದಕ್ಷಿಣ ಆಫ್ರಿಕಾದ ಆಯ್ಕೆಗಾರರು ಯಾವುದೇ ಮಾದರಿಯಲ್ಲಿ ಅವಕಾಶ ನೀಡುತ್ತಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.