KANNADA

ನಿಮ್ಮ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆಯೇ..? ನಿರ್ಲಕ್ಷ್ಯ ಬೇಡ.. ನಾಗರ ಹಾವು ಕಂಡರಂತೂ.. ತಕ್ಷಣ ಹೀಗೆ ಮಾಡಿ..

Snake in Dream luck : ಸಾಮಾನ್ಯವಾಗಿ ಎಲ್ಲರಿಗೂ ಕನಸುಗಳು ಬೀಳುತ್ತವೆ. ಅದರಲ್ಲೂ ನಾವು ಮಲಗುವಾಗಿ ಹೆಚ್ಚಾಗಿ ಯಾವ ವಿಚಾರ ಮತ್ತು ವ್ಯಕ್ತಿಯ ಕುರಿತು ಯೋಚಿಸಿರುತ್ತೇವೆಯೋ ಆ ವ್ಯಕ್ತಿ ಕನಸಿನಲ್ಲಿ ಬರುತ್ತಾನೆ.. ಕೆಲವೊಂದು ಸರಿ ಈ ರೀತಿ ಆಗುವುದಿಲ್ಲ.. ಸುಖಾಸುಮ್ಮನೆ ಹಾವು, ಚೇಳು, ನರಿ ಸೇರಿದಂತೆ ಇತರ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ.. ಹೌದು.. ಆದರೆ ಕೆಲವರಿಗೆ ಕನಸಿನಲ್ಲಿ ಸತ್ತವರು, ಮದುವೆಯಾದವರು, ಊಟ ಮಾಡುತ್ತಿರುವ ಜನ, ಜಲಪಾತ, ಹಾವುಗಳು ಕಾಣಿಸುತ್ತವೆ. ಈ ಭಯದಿಂದಾಗಿ ಅನೇಕರು ತಕ್ಷಣವೇ ಎಚ್ಚರಗೊಳ್ಳುತ್ತಾರೆ. ಅದೇನೇ ಇರಲಿ.. ಕೆಲವೊಮ್ಮೆ ಹಾವುಗಳು ಕಾಣಿಸಿಕೊಂಡು ಜಾತಕದಲ್ಲಿ ಮಿಶ್ರಫಲಗಳನ್ನು ಕೊಡುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಇದನ್ನೂ ಓದಿ: ಬೆಳಗ್ಗೆ ಎದ್ದಾಗ ಅಪ್ಪಿ ತಪ್ಪಿಯೂ ಈ 5 ವಸ್ತುಗಳನ್ನು ನೋಡಲೇಬಾರದು..! ಅವು ಯಾವುವು.. ಏಕೆ ಗೊತ್ತೆ..? ನೀವು ಕನಸಿನಲ್ಲಿ ಹಾವುಗಳನ್ನು ನೋಡಿದರೆ, ಇದು ಮುಂಬರುವ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ನಿಮ್ಮ ಕನಸಿನಲ್ಲಿ ನಾಗರಹಾವುಗಳನ್ನು ಕಂಡರೆ, ನೀವು ದೊಡ್ಡ ತೊಂದರೆಗೆ ಒಳಗಾಗುತ್ತೀರಿ ಎಂದರ್ಥ. ಅದೇ ರೀತಿ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ ಶುಭ ಸಂಕೇತ ಎಂಬ ನಂಬಿಕೆಯಿದೆ. ಹಾವುಗಳು ಬಲದಿಂದ ಎಡಕ್ಕೆ ಚಲಿಸಿದರೆ ಅಶುಭ ಸಂಭವಿಸುತ್ತದೆ, ಅದೇ ರೀತಿ ಎಡದಿಂದ ಬಲಕ್ಕೆ ಚಲಿಸಿದರೆ ಒಳ್ಳೆಯದಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಯಾವುದೇ ಸಂದರ್ಭದಲ್ಲೂ ಹಾವುಗಳಿಗೆ ಹಾನಿ ಮಾಡಬಾರದು. ಇದರಿಂದ ಕಾಳಸರ್ಪದೋಷ ಬರುತ್ತದೆ, ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆಯಂತೆ. ಇದನ್ನೂ ಓದಿ: ಮೊಸರಿನಲ್ಲಿ ಈ ಕಾಳಿನ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿದರೆ ಬುಡದಿಂದಲೂ ಗಾಢ ಕಪ್ಪಾಗುತ್ತೆ! ಅದೇ ರೀತಿ ಕನಸಿನಲ್ಲಿ ಹಾವುಗಳು ಬಂದರೆ. ನಾಗದೇವನಿಗೆ ಹಾಲು ನೈವೇದ್ಯ ಮಾಡಬೇಕು. ರಾಹು ಮತ್ತು ಕೇತುಗಳನ್ನು ಸಮಾಧಾನಪಡಿಸಬೇಕು. ನಾಗರ ಪಂಚಮಿಯಂದು ಉಪವಾಸ ಮಾಡಬೇಕು. (ಹಕ್ಕುತ್ಯಾಗ: ಈ ಮೇಲೆ ನೀಡಿರುವ ಅಂಶಗಳು ಕೇವಲ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಷಯವನ್ನು ಆಧರಿಸಿವೆ. ಇದನ್ನು Kannada News ಪರಿಶೀಲಿಸಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.