KANNADA

ಇದೆಂಥಾ ಕರ್ಮಾ...! ಬಿಗ್‌ ಬಾಸ್‌ ಮನೆಯೊಳಗೆ ಎಲ್ಲೆಂದರಲ್ಲಿ ಸ್ಪರ್ಧಿಗಳ ರೊಮ್ಯಾನ್ಸ್...‌ ನಟಿಯ ಸೀರೆ ಸರಿಸಿ ಸೊಂಟಕ್ಕೆ ಮುತ್ತು ಕೊಟ್ಟೇಬಿಟ್ಟ ಸಹಸ್ಪರ್ಧಿ

Bigg Boss Intimate scene and Controversies: ಬಿಗ್‌ ಬಾಸ್‌ ಮನೆ ಅಂದ್ರೆ ಶಿಸ್ತು, ನಿಯಮ ಪಾಲಿಸೋದು ಕಡ್ಡಾಯ. ಈ ಶೋ ನೋಡುವವರು ಒಬ್ಬರಲ್ಲ, ಇಬ್ಬರಲ್ಲ... ಲಕ್ಷ ಲಕ್ಷ ಮಂದಿ ವೀಕ್ಷಣೆ ಮಾಡುವ ಕಾರ್ಯಕ್ರಮ ಇದಾಗಿದೆ. ಅಂತಹ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡವಳಿಕೆಗಳ ಮೇಲೂ ಬಿಗ್‌ ಬಾಸ್‌ ತಂಡ ನಿಗಾ ಇಟ್ಟುಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್‌ ಬಾಸ್‌ ಶೋ ನಲ್ಲಿ ಅಸಹ್ಯ ಸಂಗತಿಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ರೋಲ್‌ ಪೇಜ್‌ವೊಂದು ಹಂಚಿಕೊಂಡಿದ್ದು, ಇದು ಬಿಗ್‌ ಬಾಸ್‌ ಮನೆಯಲ್ಲ... ಓಯೋ ಎಂದು ಬರೆದುಕೊಂಡಿದೆ. ಇದನ್ನೂ ಓದಿ: 500 ವರ್ಷಗಳ ಬಳಿಕ ಗಜಕೇಸರಿ ಯೋಗದಲ್ಲಿ ದೀಪಾವಳಿ ಆಗಮನ: ಈ 3 ರಾಶಿಗೆ ಶ್ರೀಮಂತಿಕೆ ಒಲಿಯುವ ಕಾಲ ದೂರ ಕನ್ನಡ ಬಿಗ್‌ ಬಾಸ್‌ ವಿಚಾರಕ್ಕೆ ಬರುವುದಾದರೆ, "ಇನ್ಮುಂದೆ ನಾನು ಬಿಗ್‌ ಬಾಸ್‌ ಹೋಸ್ಟ್‌ ಮಾಡಲ್ಲ, ಇದು ನನ್ನ ಕೊನೆಯ ಸೀಸನ್‌" ಎಂದು ಕಿಚ್ಚ ಇತ್ತೀಚೆಗೆಯಷ್ಟೇ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಆ ಪೋಸ್ಟ್‌ ವೈರಲ್‌ ಆಗಿದ್ದೇ ತಡ, ಅವರ ಅಭಿಮಾನಿಗಳು ಮಾತ್ರವಲ್ಲದೆ, ಕರ್ನಾಟಕದ ಅನೇಕ ಜನ, ಇನ್ಮುಂದೆ ಬಿಗ್‌ ಬಾಸ್‌ ಕೃಷ್ಟನಿಲ್ಲದ ಮಹಾಭಾರತದಂತಾಗುವುದು ಎಂದೆಲ್ಲಾ ಹೇಳಿದ್ದರು. ಇನ್ನು ಕನ್ನಡ ಬಿಗ್‌ ಬಾಸ್‌ನಲ್ಲಿ ಇದುವರೆಗೆ ಅಸಹ್ಯ ಘಟನೆಗಳು ನಡೆದಿಲ್ಲ. ಆದರೆ, ಇತರ ಭಾಷೆಗಳ ಶೋನಲ್ಲಿ ಸ್ಪರ್ಧಿಗಳು ತಮ್ಮ ಹದ್ದು ಮೀರಿ ವರ್ತಿಸಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದ ಒಂದು ತುಣುಕನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ಸಮರ್ಥ್ ಜುರೆಲ್ ಮತ್ತು ಇಶಾ ಮಾಳವೀಯಾ ಎಂಬ ಇಬ್ಬರು ಸ್ಪರ್ಧಿಗಳಿದ್ದರು. ಅವರ ಕೆಲ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಒಂದೊಮ್ಮೆ ಸಮರ್ಥ್, ಇಶಾ ಅವರ ಸೀರೆಯನ್ನು ಎತ್ತಿ ಸೊಂಟಕ್ಕೆ ಮುತ್ತಿಟ್ಟಿದ್ದರು. ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ, ಸ್ಪರ್ಧಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಿಗ್‌ ಬಾಸ್‌ ಎಂಬುದು ಫ್ಯಾಮಿಲಿ ಶೋ. ಇದನ್ನು ಮಕ್ಕಳಿಂದ ಹಿಡಿದು ಮುದುಕರವರೆಗೂ ನೋಡುವವರು ಇದ್ದಾರೆ. ಅಂತಹ ಕಾರ್ಯಕ್ರಮದಲ್ಲಿ ಈ ರೀತಿ ಅಸಹ್ಯ ಎಷ್ಟು ಸರಿ ಎಂಬುದು ವೀಕ್ಷಕರ ಪ್ರಶ್ನೆಯಾಗಿದೆ. ಇದನ್ನೂ ಓದಿ: ಕೇಬಲ್ ಟಿವಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ..! ಬೆಚ್ಚಿಬಿದ್ದ ಸಿರೀಯಲ್‌ ನೋಡುತ್ತಿದ್ದ ಜನ.. ಹಿಂದಿ ಬಿಗ್‌ ಬಾಸ್‌ನಲ್ಲಿ ಇದೊಂದೇ ಅಲ್ಲ, ಸಹಸ್ಪರ್ಧಿಗೆ ಒಬ್ಬ ಸ್ಪರ್ಧಿ ಲಿಪ್‌ ಟು ಲಿಪ್ ಕಿಸ್ ಮಾಡೋದು, ಯಾವ್ಯಾವುದೇ ಪಾರ್ಟ್‌ಗಳನ್ನು ಮುಟ್ಟೋದು, ಟಚ್‌ ಮಾಡೋದು ಹೀಗೆಲ್ಲಾ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇವೆ. ಕನ್ನಡಿಗರ ಪುಣ್ಯಕ್ಕೆ ನಮ್ಮ ಕನ್ನಡದಲ್ಲಿ ಇಂಥಹ ಅಸಹ್ಯಗಳಿಗೆ ಅವಕಾಶ ಇಲ್ವಲ್ಲ. ಮುಖ್ಯವಾಗಿ ಹೇಳುವುದಾದರೆ ದಕ್ಷಿಣ ಭಾರತದ ಬಿಗ್‌ಬಾಸ್ ಶೋ ನಿಜಕ್ಕೂ ಮನೆಮಂದಿ ಕೂತು ನೋಡುವಂತಿದೆ. ಇದೇ ಕಾರಣಕ್ಕೆ ಈ ಕಾರ್ಯಕ್ರಮ ಹೋಸ್ಟ್ ಮಾಡುವವರನ್ನೂ ಸಹ ಜನ ಬಹಳ ಗೌರವದಿಂದ ನೋಡುತ್ತಾರೆ. A post shared by Lyf_A_Zindagii (@lyf_a_zindagii) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.