KANNADA

ಕೇಬಲ್ ಟಿವಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ..! ಬೆಚ್ಚಿಬಿದ್ದ ಸಿರೀಯಲ್‌ ನೋಡುತ್ತಿದ್ದ ಜನ.. ವಿಡಿಯೋ ಇಲ್ಲಿದೆ

Obscence video on Cable tv : ಟಿವಿ.. ಪ್ರತಿಯೊಬ್ಬರ ಮನೆಯ ಸದಸ್ಯ.. ಇತ್ತೀಚಿಗೆ ಕೆಲವರು ಪ್ರತ್ಯೇಕವಾಗಿ ಡಿಶ್‌ ಹಾಕಿಸಿದ್ದಾರೆ.. ಇನ್ನೂ ಕೆಲವರು ಕೇಬಲ್‌ ನೆಟ್‌ವರ್ಕ್‌ ಬಳಸುತ್ತಿದ್ದಾರೆ.. ಈ ಪೈಕಿ ಕೇಬಲ್‌ ಟಿವಿಯೊಂದರಲ್ಲಿ ಮನೆ ಮಂದಿ ಎಲ್ಲಾ ಕುಳಿತು ನೋಡುತ್ತಿರುವಾಗಲೇ ಅಸಭ್ಯ ವೀಡಿಯೊಗಳು ಪ್ರಸಾರವಾಗಿದೆ.. ಈ ಘಟನೆ ನಡೆದದ್ದು ಎಲ್ಲಿ..? ಬನ್ನಿ ನೋಡೋಣ.. ಟಿವಿಯಲ್ಲಿ ಪ್ರಸಾರವಾದ ಅನಿರೀಕ್ಷಿತವಾಗಿ ಲೈವ್ ಅಶ್ಲೀಲ ವೀಡಿಯೊ ನೋಡಿ ಕುಟುಂಬ ಸದಸ್ಯರು ಮುಜುಗರಕ್ಕೆ ಒಳಗಾಗಿದ್ದಾರೆ.. ಒಂದಲ್ಲ ಎರಡೆರಡು ಬಾರಿ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪ್ರೇಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆಂಧ್ರಪ್ರದೇಶದ ನಂದಿಕೋಟ್ಕೂರಿನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: Daily GK Quiz: ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸುವರ್ಣ ವಿಧಾನ ಸೌಧವಿದೆ..? ನಂದಿಕೋಟ್ಕೂರು ಪಟ್ಟಣದಲ್ಲಿ ಫಿರೋಜ್ ಡಿಶ್ ಕೇಬಲ್ ಸೇವೆ ಲಭ್ಯವಿದೆ. ಈ ಡಿಶ್ ಟಿವಿ ಚಂದಾದಾರರ ಟಿವಿಯಲ್ಲಿ ನೀಲಿ ಚಿತ್ರ ಪ್ರಸಾರವಾಗಿದೆ. ಸಿನಿಮಾ, ಧಾರಾವಾಹಿ ನೋಡುವಾಗ ಇಂತಹ ವಿಡಿಯೋಗಳನ್ನು ಕಂಡ ಜನರಿಗೆ ಆಘಾತವಾಗಿದೆ. ಯಾರೋ ಒಬ್ಬರು ಈ ಘಟನೆಯ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಡಿಶ್ ಸಂಘಟಕರ ವಿರುದ್ಧ ಸ್ಥಳೀಯರು ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ನಂದಿ ಕೊಟ್ಕೂರು ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿರಬಹುದು ಎನ್ನುತ್ತಾರೆ ಕೆಲ ಸ್ಥಳೀಯರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.