KANNADA

ಜಿಯೋ ರಿಚಾರ್ಜ್ ಪ್ಲಾನ್ಸ್: ಎರಡು ಪ್ಲಾನ್ಸ್ ನಡುವೆ ₹1 ಅಷ್ಟೇ ವ್ಯತ್ಯಾಸ, ಆದರೆ ಪ್ರಯೋಜನ ಮಾತ್ರ ಅಗಾಧ..!

Jio Prepaid Plans: ಭಾರತದ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್‌ ರಿಲಯನ್ಸ್ ಜಿಯೋ ಎರಡು ಅತ್ಯಾಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ದೀರ್ಘಾವಧಿಯ ಮಾನ್ಯತೆಯೊಂದಿಗೆ ಲಭ್ಯವಿರುವ ಈ 2 ಯೋಜನೆಗಳಲ್ಲಿ ಅನಿಯಮಿತ ಕರೆ, 5ಜಿ ಡೇಟಾ ಸಮೇತ ಹಲವು ಪ್ರಯೋಜನಗಳು ಲಭ್ಯವಿವೆ. ಇಬುಗಳ ಬೆಲೆ 1028 ರೂ. ಮತ್ತು 1029ರೂ. ರಿಲಯನ್ಸ್ ಜಿಯೋ ಈ ಎರಡೂ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ ಕೇವಲ 1 ರೂ. ವ್ಯತ್ಯಾಸವಷ್ಟೇ ಇದ್ದರೂ ಎರಡೂ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ಸ್ ನಡುವಿನ ಪ್ರಯೋಜನಗಳಲ್ಲಿ ಮಾತ್ರ ಅಗಾಧ ವ್ಯತ್ಯಾಸವನ್ನು ಕಾಣಬಹುದು. ಇದನ್ನೂ ಓದಿ- Jio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟ ಜಿಯೋ 1028 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನ: ಜಿಯೋ 1028 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಅನ್ಲಿಮಿಟೆಡ್ ಕಾಲ್, ನಿತ್ಯ 100 ಎಸ್ಎಂಎಸ್, ಪ್ರತಿದಿನ 2ಜಿ‌ಬಿ ಡೇಟಾ ಎಂದರೆ ಒಟ್ಟು 168GB ಡೇಟಾ ಪ್ರಯೋಜನ ಸಿಗಲಿದೆ. ಇದರಲ್ಲಿ 5ಜಿ ನೆಟ್‌ವರ್ಕ್‌ ಸಿಗುವ ಪ್ರದೇಶಗಳಲ್ಲಿ ಅನಿಯಮಿತ 5ಜಿ ಡೆತಾವನ್ನು ಸಹ ಆನಂದಿಸಬಹುದಾಗಿದ್ದು, ಹೆಚ್ಚುವರಿಯಾಗಿ ಸ್ವಿಗ್ಗಿ ಒನ್ ಲೈಟ್‌ನ ಉಚಿತ ಸದಸ್ಯತ್ವ ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಸೇವೆಗಳು ಲಭ್ಯವಾಗಲಿವೆ. ಇದನ್ನೂ ಓದಿ- ಫೋನಿನಲ್ಲಿ ಸದಾ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಒಮ್ಮೆಲೇ ಬೂಸ್ಟ್ ಆಗುತ್ತದೆ ಸಿಗ್ನಲ್ ಜಿಯೋ 1029 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನ: ರಿಲಯನ್ಸ್ ಜಿಯೋದ 1029 ರೂ. ರಿಚಾರ್ಜ್ ಪ್ಲಾನ್‌ನಲ್ಲಿ 1028ರೂ. ರಿಚಾರ್ಜ್ ಯೋಜನೆಯ ಎಲ್ಲಾ ಪ್ರಯೋಜನಗಳು ಲಭ್ಯವಿದೆ. ಇವುಗಳೊಂದಿಗೆ, ಗ್ರಾಹಕರಿಗೆ 3 ತಿಂಗಳವರೆಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಸಂಪೂರ್ಣವಾಗಿ ಉಚಿತವಾಗಿರಲಿದೆ. ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಅಮೆಜಾನ್ ಶಾಪಿಂಗ್ ವೇಳೆಯೂ ಅಮೆಜಾನ್ ಪ್ರೈಮ್ ಸದಸ್ಯತ್ವದ ಪ್ರಯೋಜನವನ್ನು ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.