KANNADA

Cricket Records: ವೈಡ್, ನೋಬಾಲ್ ಇಲ್ಲ... 3 ಎಸೆತಗಳಲ್ಲಿ 24 ರನ್! ವಿಶ್ವದಾಖಲೆ ಬರೆದ ಸ್ಟಾರ್‌ ಪ್ಲೇಯರ್‌

Cricket Records: ಕ್ರಿಕೆಟ್ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಕೆಲವು ದಾಖಲೆಗಳು ತುಂಬಾ ಅಪರೂಪವಾಗಿರುತ್ತದೆ. ಅವುಗಳನ್ನು ಸುಲಭವಾಗಿ ಯಾರೂ ಮರಿಯಲು ಸಾಧ್ಯವಿರುವುದಿಲ್ಲ. ಇದೇ ರೀತಿಯ ದಾಖಲೆ ಲಾರ್ಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಯಾವುದೇ ನೋಬಾಲ್ ಅಥವಾ ವೈಡ್ ಇಲ್ಲದೆ, ಸಚಿನ್ ತೆಂಡೂಲ್ಕರ್ 3 ಎಸೆತಗಳಲ್ಲಿ 24 ರನ್ ಗಳಿಸಿದರು. ಒಂದು ಲೀಗಲ್‌ ಬಾಲ್‌ನಲ್ಲಿ ಗರಿಷ್ಠ 6 ರನ್‌ಗಳನ್ನು ಮಾತ್ರ ಗಳಿಸಬಹುದು. 3 ಲೀಗಲ್‌ ಎಸೆತಗಳಲ್ಲಿ ಗರಿಷ್ಠ 18 ರನ್‌ಗಳನ್ನು ಮಾತ್ರ ಗಳಿಸಬಹುದು. ಆದರೆ ಸಚಿನ್ ತೆಂಡೂಲ್ಕರ್ 3 ಎಸೆತಗಳಲ್ಲಿ 24 ರನ್ ಗಳಿಸಿದ್ದು ಹೇಗೆ ಎಂಬುದನ್ನು ನೋಡೋಣ. 2002 ರಲ್ಲಿ ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸದ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. ಈ ಏಕದಿನ ಪಂದ್ಯದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಆಡಿದ ಇನ್ನಿಂಗ್ಸ್ ಅವರ ವೃತ್ತಿಜೀವನದ ಪ್ರಮುಖ ಇನ್ನಿಂಗ್ಸ್‌ ಎಂದು ಪರಿಗಣಿಸಲಾಗಿದೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ಸ್ವತಃ ಸಚಿನ್ ಕೂಡ ಹೇಳಿದ್ದಾರೆ. ಈ ODI ಪಂದ್ಯವನ್ನು 4 ಡಿಸೆಂಬರ್ 2002 ರಂದು ಕ್ರೈಸ್ಟ್‌ಚರ್ಚ್ ಮೈದಾನದಲ್ಲಿ ಆಡಲಾಯಿತು. ಈ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 27 ಎಸೆತಗಳಲ್ಲಿ 72 ರನ್ ಸಿಡಿಸಿದ್ದರು. ಈ ಸಮಯದಲ್ಲಿ, ಸಚಿನ್ 3 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಇದನ್ನೂ ಓದಿ: 728 ಎಸೆತ, 17 ಗಂಟೆ ಬ್ಯಾಟಿಂಗ್‌... ಸುದೀರ್ಘ ಇನ್ನಿಂಗ್‌ ಆಡಿ ವಿಶ್ವದಾಖಲೆ ಬರೆದ ದಾಂಡಿಗ! ಪಾಕ್‌ ಕ್ರಿಕೆಟಿಗನ ಆ ದಾಖಲೆ ಮುರಿದೇಬಿಟ್ಟ ಭಾರತದ ಸೂಪರ್‌ ಬ್ಯಾಟ್ಸ್‌ಮನ್ ಈ ಏಕದಿನ ಪಂದ್ಯವನ್ನು ತಲಾ 10 ಓವರ್‌ಗಳ 4 ಇನ್ನಿಂಗ್ಸ್‌ಗಳಾಗಿ ವಿಂಗಡಿಸಲಾಗಿತ್ತು. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ 10 ಓವರ್‌ಗಳ 2-2 ಇನ್ನಿಂಗ್ಸ್‌ಗಳನ್ನು ಆಡಬೇಕಾಗಿತ್ತು. ಎರಡೂ ತಂಡಗಳು 11 ಆಟಗಾರರ ಬದಲಿಗೆ 12 ಆಟಗಾರರೊಂದಿಗೆ ಆಡುತ್ತಿದ್ದವು. ಈ ಪಂದ್ಯ ಐಸಿಸಿಯ ಪ್ರಯೋಗದ ಭಾಗವಾಗಿತ್ತು. ಈ ODI ಪಂದ್ಯಕ್ಕೆ 'ಕ್ರಿಕೆಟ್ ಮ್ಯಾಕ್ಸ್ ಇಂಟರ್‌ನ್ಯಾಶನಲ್' ಎಂದು ಹೆಸರಿಸಲಾಯಿತು. ಈ ಪಂದ್ಯದಲ್ಲಿ, ಗ್ರೌಂಡ್‌ನ ಒಂದು ಭಾಗವನ್ನು "ಮ್ಯಾಕ್ಸ್ ಜೋನ್" ಎಂದು ಘೋಷಿಸಲಾಯಿತು. ಈ ಝೋನ್‌ನಲ್ಲಿ ಶಾಟ್‌ ಹೊಡೆಯುವ ವ್ಯಕ್ತಿ ಡಬಲ್‌ ರನ್‌ ಪಡೆಯುತ್ತಿದ್ದರು. ಅಂದರೆ ಯಾರಾದರೂ ಬೌಂಡರಿ ಬಾರಿಸಿದರೆ 4ರ ಬದಲು 8 ರನ್‌ಗಳು ಹಾಗೂ ಸಿಕ್ಸರ್‌ ಹೊಡೆದರೆ 6ರ ಬದಲು 12 ರನ್‌ಗಳು ಬರುತ್ತಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 10 ಓವರ್‌ಗಳಲ್ಲಿ 5 ವಿಕೆಟ್‌ಗೆ 123 ರನ್ ಗಳಿಸಿತು. ಈಗ ಭಾರತದ ಸರದಿ. ಆರಂಭಿಕರಾಗಿ ಬಂದ ಸಚಿನ್ ತೆಂಡೂಲ್ಕರ್ ಕ್ರೈಸ್ಟ್‌ಚರ್ಚ್‌ನಲ್ಲಿ ಬಿರುಗಾಳಿ ಎಬ್ಬಿಸಿದರು. ಸಚಿನ್ ತೆಂಡೂಲ್ಕರ್ ಗರಿಷ್ಠ ವಲಯದಲ್ಲಿ ಸತತ ಮೂರು ಎಸೆತಗಳನ್ನು ಬಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಸಚಿನ್ ಈ 3 ಎಸೆತಗಳಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಮತ್ತು 2 ರನ್ ಗಳಿಸಿದರು. ಆದರೆ ಮ್ಯಾಕ್ಸ್ ಝೋನ್ ನಿಯಮದಿಂದಾಗಿ 8, 12 ಮತ್ತು 4 ರನ್ ಸೇರ್ಪಡೆಗೊಂಡವು. ಈ ಮೂಲಕ ಸತತ 3 ಈಗಲ್ ಎಸೆತಗಳಲ್ಲಿ 24 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್ ಅವರ ಬಿರುಸಿನ ಇನ್ನಿಂಗ್ಸ್ ನಡುವೆಯೂ ಟೀಂ ಇಂಡಿಯಾ 21 ರನ್ ಗಳಿಂದ ಸೋಲು ಕಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 7 ವಿಕೆಟ್‌ಗೆ 118 ರನ್ ಗಳಿಸಿತ್ತು. ಗೆಲ್ಲಲು 119 ರನ್ ಗುರಿ ಇತ್ತು. ಟೀಮ್ ಇಂಡಿಯಾ 6 ವಿಕೆಟ್‌ಗೆ 87 ರನ್ ಗಳಿಸಿ ಪಂದ್ಯವನ್ನು ಕಳೆದುಕೊಂಡಿತು. ಇದನ್ನೂ ಓದಿ: ಏಕದಿನದಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಶತಕ ಬಾರಿಸಿದ ಕ್ರಿಕೆಟರ್‌ ಯಾರು ಗೊತ್ತಾ? ನೀವಂದುಕೊಂಡಂತೇ ಸಚಿನ್‌ ತೆಂಡೂಲ್ಕರ್‌ ಅಲ್ಲ.. ಈ ಹೆಸರು ನಿಮ್ಮ ಊಹೆಗೂ ನಿಲುಕದ್ದು!! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.