KANNADA

T20 ವಿಶ್ವಕಪ್‌ ವೇಳೆ ಗಾಯವಾಗಿದ್ದು ಸುಳ್ಳು: ಲೈವ್‌ ಪಂದ್ಯದಲ್ಲೇ ತಾನಾಡಿದ್ದ ನಾಟಕದ ಬಗ್ಗೆ ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ರಿಷಬ್‌ ಪಂತ್‌

Rishabh Pant Revealed About His Fake Injury: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 2024 ರ ಟಿ 20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: "ತಮಟೆ" ಚಿತ್ರದ ಶೋ ರೀಲ್ ಉದ್ಘಾಟನೆ‌ ಮಾಡಿ ಶುಭ ಕೋರಿದ ಡಿಸಿಎಂ ಡಿ.ಕೆ ಶಿವಕುಮಾರ್ 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಒಂದು ಬಾರಿ 30 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ಆ ಸಮಯದಲ್ಲಿ, ರಿಷಬ್ ಪಂತ್ ಗಾಯಗೊಂಡಂತೆ ನಟಿಸುವ ಮೂಲಕ ಆಟವನ್ನು ನಿಧಾನಗೊಳಿಸಿ, ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ಇದೀಗ ಆ ಗಾಯದ ಬಗ್ಗೆ ಹೇಳಿಕೆ ನೀಡಿದ್ದು, ಎಲ್ಲರನ್ನೂ ಅಚ್ಚರಿಗೀಡುಮಾಡಿದೆ. "ಇದ್ದಕ್ಕಿದ್ದಂತೆ ಪಂದ್ಯದ ಗತಿ ಬದಲಾಯಿತು. 2-3 ಓವರ್‌ಗಳಲ್ಲಿ ಸಾಕಷ್ಟು ರನ್‌ಗಳು ಬಂದವು. ಆಗ ಸಮಯ ವ್ಯರ್ಥ ಮಾಡುವ ಆಲೋಚನೆಯಲ್ಲಿದ್ದೆ. ಗಾಯವಾದಂತೆ ನಟಿಸಿದ್ದೆ. ಆಗ ಫಿಸಿಯೋ ನನ್ನ ಬಳಿ ಕೇಳಿದರು; ಮೊಣಕಾಲು ನೋವು ಕಡಿಮೆಯಾಗಿದೆಯೇ ಎಂದು. ಅದಕ್ಕೆ ನಾನು ಹೇಳಿದೆ, "ನಾನು ನಟಿಸುತ್ತಿದ್ದೇನೆ. ಮೆಲ್ಲಗೆ ಬ್ಯಾಂಡೇಜ್‌ ಕಟ್ಟು" ಎಂದು. ಈ ರೀತಿಯ ಟ್ರಿಕ್ ಪ್ರತಿ ಬಾರಿಯೂ ಕೆಲಸ ಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ ಆದರೆ ಕೆಲವೊಮ್ಮೆ ಕೆಲಸ ಮಾಡುತ್ತದೆ. ಅದರಲ್ಲೂ ವಿಶ್ವಕಪ್ ಫೈನಲ್‌ನಂತಹ ಕ್ಷಣದಲ್ಲಿ ಕೆಲಸ ಮಾಡಿದರೆ, ಇನ್ನೇನು ಬೇಕು" ಎಂದು ಬಹಿರಂಗವಾಗೇ ಹೇಳಿದ್ದಾರೆ. ಅಂದಹಾಗೆ, ಇತ್ತೀಚೆಗೆ ಹಾಸ್ಯನಟ ಕಪಿಲ್ ಶರ್ಮಾ ಅವರ ಶೋನಲ್ಲಿ ರೋಹಿತ್ ಶರ್ಮಾ ರಿಷಬ್ ಪಂತ್ ಅವರ ನಕಲಿ ಗಾಯದ ಬಗ್ಗೆ ಬಹಿರಂಗಪಡಿಸಿದ್ದರು ಇದನ್ನೂ ಓದಿ: ಲವಂಗವನ್ನು ಹೀಗೆ ಬಳಸಿದ್ರೆ ಹೊಟ್ಟೆಸುತ್ತ ತುಂಬಿರುವ ಹಠಮಾರಿ ಬೊಜ್ಜು ಒಂದೇ ವಾರದಲ್ಲಿ ಕರಗುತ್ತೆ! ಸ್ಲಿಮ್‌ ಆಗೋಕೆ ಇಂದೇ ಟ್ರೈ ಮಾಡಿ!! ಅಂತಿಮ ಪಂದ್ಯದ ವೇಳೆ, ದ.ಆಫ್ರಿಕಾ ಗೆಲುವಿಗೆ ಕೇವಲ 30 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿದ್ದಾಗ, ಅಲ್ಪ ವಿರಾಮವಿತ್ತು. ಆ ಸಮಯದಲ್ಲಿ ರಿಷಭ್ ಪಂತ್ ಅವರು ಗಾಯದ ನೆಪದಲ್ಲಿ ಹೆನ್ರಿಚ್ ಕ್ಲಾಸೆನ್ ಅವರ ಲಯವನ್ನು ಅಡ್ಡಿಪಡಿಸುವಲ್ಲಿ ಉತ್ತಮ ಕೆಲಸ ಮಾಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.