KANNADA

ಕ್ರಿಕೆಟ್‌ ಅಂಪೈರಿಂಗ್‌ನಲ್ಲಿ ಮಹಾಪ್ರಮಾದ... ಒಂದು ಓವರ್‌ನಲ್ಲಿ 6ರ ಬದಲಿಗೆ 5 ಎಸೆತವಷ್ಟೇ ಬೌಲಿಂಗ್‌! ಈ ದಿಗ್ಗಜ ಬೌಲರ್‌ಗೆ ಅಂಪೈರ್‌ನಿಂದಲೇ ಅನ್ಯಾಯ?

Cricket Unique Records: ಕ್ರಿಕೆಟ್ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಕೆಲವು ದಾಖಲೆಗಳು ತುಂಬಾ ಅಪರೂಪವಾಗಿದ್ದು ಅವುಗಳನ್ನು ಸುಲಭವಾಗಿ ನಂಬುವುದೂ ಸಹ ಕಷ್ಟವೇ. ಇನ್ನು ಕ್ರಿಕೆಟ್ ನಿಯಮಗಳ ಪ್ರಕಾರ, ಒಂದು ಓವರ್‌ನಲ್ಲಿ 6 ಕಾನೂನುಬದ್ಧ ಚೆಂಡುಗಳನ್ನು ಎಸೆಯಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ಎಸೆತಗಳ ಓವರ್‌ಗಳನ್ನು ಬೌಲ್ ಮಾಡಿದ 3 ಬೌಲರ್‌ಗಳು ಇದ್ದಾರೆ. ಈ ದಾಖಲೆಯು ಬಹಳ ವಿಶಿಷ್ಟವಾಗಿದ್ದು, 5 ಎಸೆತಗಳ ಓವರ್ ಬೌಲ್ ಮಾಡಿದ ಆ 3 ಬೌಲರ್‌ಗಳನ್ನು ನೋಡೋಣ. ಇದನ್ನೂ ಓದಿ: ಕೂದಲಿನ ಎಲ್ಲಾ ಸಮಸ್ಯೆಗೆ ರಾಮಬಾಣ ʼಈʼ ಎಲೆ..! ಹೀಗೆ ಬಳಸಿದ್ರೆ ಮೊನಕಾಲುದ್ದ.. ದಷ್ಟಪುಷ್ಟ ಕೇಶರಾಶಿ ನಿಮ್ಮದಾಗುತ್ತೆ!! ಲಸಿತ್ ಮಾಲಿಂಗ: ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಭಾರತ ವಿರುದ್ಧದ ಏಕದಿನ ಪಂದ್ಯದ ವೇಳೆ 1 ಓವರ್‌ನಲ್ಲಿ 6 ಅಲ್ಲ 5 ಎಸೆತಗಳನ್ನು ಎಸೆದಿದ್ದರು. 2012ರಲ್ಲಿ ಭಾರತ ವಿರುದ್ಧ ನಡೆದ ತ್ರಿಕೋನ ಸರಣಿಯ ಏಕದಿನ ಪಂದ್ಯದಲ್ಲಿ ಲಸಿತ್ ಮಾಲಿಂಗ ಈ ರೀತಿ ಬೌಲಿಂಗ್‌ ಮಾಡಿದ್ದರು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಭಾರತ ಕೇವಲ ಒಂದು ಎಸೆತದಿಂದ ಗೆಲ್ಲಲು ವಿಫಲವಾಗಿತ್ತು. ನವೀನ್ ಉಲ್ ಹಕ್: ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ 2022 ಪಂದ್ಯದ ವೇಳೆ 1 ಓವರ್‌ನಲ್ಲಿ 6 ಅಲ್ಲ 5 ಎಸೆತಗಳನ್ನು ಬೌಲ್ ಮಾಡಿದ್ದರು. ಆನ್-ಫೀಲ್ಡ್ ಅಂಪೈರ್ ತಪ್ಪು ಮಾಡಿದ್ದ ಕಾರಣ ನವೀನ್ ಉಲ್ ಹಕ್ ಅವರ ಓವರ್‌ನಲ್ಲಿ 1 ಬಾಲ್ ಕಡಿಮೆಯಾಗಿತ್ತು. ಇದನ್ನೂ ಓದಿ: ತನ್ನ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆಯದ ಕ್ರಿಕೆಟಿಗ ಯಾರು ಗೊತ್ತಾ? ಇವರು ಟೀಂ ಇಂಡಿಯಾದವರೇ.. ಯಾರೆಂದು ಗೆಸ್‌ ನೋಡೋಣ ಮುಸ್ತಫಿಜುರ್ ರೆಹಮಾನ್: 2021ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ವೇಳೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ 1 ಓವರ್‌ನಲ್ಲಿ 6 ಅಲ್ಲ 5 ಎಸೆತಗಳನ್ನು ಬೌಲ್ ಮಾಡಿದ್ದರು. ಆನ್-ಫೀಲ್ಡ್ ಅಂಪೈರ್‌ನ ತಪ್ಪಿನಿಂದ ಈ ದೊಡ್ಡ ಪ್ರಮಾದ ಕಂಡುಬಂದಿತ್ತು. ಬಾಂಗ್ಲಾದೇಶದ ಆನ್-ಫೀಲ್ಡ್ ಅಂಪೈರ್ ಗಾಜಿ ಸೊಹೈಲ್ ಮುಸ್ತಫಿಜುರ್ ರೆಹಮಾನ್ ಅವರ ಓವರ್‌ನಲ್ಲಿ 1 ಎಸೆತವನ್ನು ಕಡಿಮೆ ಎಣಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.