KANNADA

Best Mileage Bikes: ಇವೇ ನೋಡಿ ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್‌ ಬೈಕ್‌ಗಳು

Best Mileage Bikes: ದೇಶೀಯ ಮಾರುಕಟ್ಟೆಯಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕ ಅತ್ಯುತ್ತಮ ಬೈಕುಗಳಿವೆ. ಹಲವಾರು ಕಂಪನಿಗಳು ಗ್ರಾಹಕರಿಗೆ ಇಷ್ಟವಾಗುವ ರೀತಿಯ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಪ್ರತಿಯೊಬ್ಬ ಗ್ರಾಹಕರು ಬೈಕ್‌ ಖರೀದಿಸಬೇಕಾದರೆ ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸುತ್ತಾರೆ. ಈ ಪೈಕಿ ಅತಿಹೆಚ್ಚು ಮೈಲೇಜ್‌ ನೀಡುವ ಬೈಕ್‌ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ನೀವು 250KM ವ್ಯಾಪ್ತಿಯಲ್ಲಿರುವ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಲು ಅನುಕೂಲವಾಗುವ ಕೆಲವು ಬೈಕ್‌ಗಳಿವೆ. ಈ ಬೈಕ್‌ ಗಳನ್ನು ಖರೀದಿಸುವುದು ನಿಮಗೆ ಲಾಭದಾಯಕವಾಗಬಹದು. ಏಕೆಂದರೆ ಈ ಬೈಕ್‌ಗಳು ಹೆಚ್ಚು ಮೈಲೇಜ್‌ ನೀಡುತ್ತವೆ. ಈ ಬೈಕ್‌ಗಳು ಪ್ರತಿ ಲೀಟರ್‌ ಪೆಟ್ರೋಲ್‌ಗೆ ಸರಾಸರಿ 70-72KM ಮೈಲೇಜ್ ನೀಡುತ್ತವೆ. ನೀವು 4 ಲೀಟರ್ ಪೆಟ್ರೋಲ್ ಹಾಕಿಸಿದರೆ ಕೇವಲ 350 ರಿಂದ 400 ರೂ.ಗಳಲ್ಲಿ ಈ ದೂರವನ್ನು ಕ್ರಮಿಸಬಹುದು. ಅತಿಹೆಚ್ಚು ಮೈಲೇಜ್‌ ನೀಡುವ ಬೈಕ್‌ಗಳು ಯಾವುವು ಮತ್ತು ಅವುಗಳ ವೈಶಿಷ್ಟ್ಯಗಳು ಏನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಇದನ್ನೂ ಓದಿ: Daily GK Quiz: ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? ಬಜಾಜ್ ಪ್ಲಾಟಿನಾ 100 ಬಜಾಜ್ ಪ್ಲಾಟಿನಾ 100 ಬೈಕ್‌ 102 CC, ಸಿಂಗಲ್-ಸಿಲಿಂಡರ್,‌ DTS-I ಎಂಜಿನ್ ಹೊಂದಿದ್ದು, ಇದು 7.79 BHP ಪವರ್ ಮತ್ತು 8.34 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ ಇದು 72 kmpl ನೀಡುತ್ತದೆ. ಟ್ರಾನ್ಸ್ಮಿಷನ್ ಬಗ್ಗೆ ಹೇಳುವುದಾದರೆ, ಗ್ರಾಹಕರು 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯುತ್ತಾರೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಇದರ ಬೆಲೆಯ ಬಗ್ಗೆ ಹೇಳುವುದಾರೆ, ಇದು ₹61,617 - ₹66,440 (ಎಕ್ಸ್ ಶೋ ರೂಂ, ದೆಹಲಿ) ಬೆಲೆಯಲ್ಲಿ ಲಭ್ಯವಿದೆ. ಟಿವಿಎಸ್ ಸ್ಪೋರ್ಟ್ ಟಿವಿಎಸ್ ಸ್ಪೋರ್ಟ್ 109.7 CC, BS 6 ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಆಗಿದ್ದು, ಇದನ್ನು ಟಿವಿಎಸ್ ಮೋಟಾರ್ ಕಂಪನಿ ತಯಾರಿಸಿದೆ. ಇದು ಇಂಧನ ದಕ್ಷತೆ, ಕೈಗೆಟುಕುವ ಬೆಲೆ ಮತ್ತು ಆರಾಮದಾಯಕ ಸವಾರಿಗಾಗಿ ಹೆಸರುವಾಸಿಯಾಗಿದೆ. ಇದರ ಮೈಲೇಜ್ 70 kmpl. ಈ ಮೋಟಾರ್‌ಸೈಕಲ್‌ನ ಎಂಜಿನ್ ಕುರಿತು ಹೇಳುವುದಾರೆ, ಗ್ರಾಹಕರು 109.7cc, ಸಿಂಗಲ್-ಸಿಲಿಂಡರ್, SOHC, ಏರ್-ಕೂಲ್ಡ್ ಎಂಜಿನ್ ಅನ್ನು ಪಡೆಯುತ್ತಾರೆ, ಇದು 8.07 PS ಪವರ್ ಮತ್ತು 8.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾರೆ, ಇದು 70-80 kmpl ಮತ್ತು ಟ್ರಾನ್ಸ್ಮಿಷನ್ ಬಗ್ಗೆ ಹೇಳುವುದಾದರೆ, ಇದು 4-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಬರುತ್ತದೆ. ಮೋಟಾರ್ಸೈಕಲ್ನಲ್ಲಿ ಗ್ರಾಹಕರು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ಗಳನ್ನು ಪಡೆಯುತ್ತಾರೆ, 10 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇದರ ಬೆಲೆಯ ಬಗ್ಗೆ ಹೇಳುವುದಾರೆ, ಇದು ₹59,881 - ₹71,223 (ಎಕ್ಸ್ ಶೋ ರೂಂ, ದೆಹಲಿ)ನಲ್ಲಿ ಲಭ್ಯವಿದೆ. ಇದನ್ನೂ ಓದಿ: Jio, Airtel ಗೆ ಸೆಡ್ಡು ಹೊಡೆಯಲು ಮುಂದಾದ ಬಿಎಸ್ಎನ್ಎಲ್...! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.