KANNADA

95 ನಿಮಿಷಗಳ ಥ್ರಿಲ್ಲರ್ `ಪ್ರಕರಣ ತನಿಖಾ ಹಂತದಲ್ಲಿದೆ' ಚಿತ್ರ ಈ ವಾರ ತೆರೆಗೆ!

ಶೀರ್ಷಿಕೆಯ ಕಾರಣದಿಂದ ಆರಂಭಿಕವಾಗಿ ಗಮನ ಸೆಳೆದಿದ್ದ ಚಿತ್ರ `ಪ್ರಕರಣ ತನಿಖಾ ಹಂತದಲ್ಲಿದೆ'. ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥಾನಕದ ಸುಳಿವು ಬಿಟ್ಟು ಕೊಟ್ಟಿದ್ದ `ಪ್ರಕರಣ ತನಿಖಾ ಹಂತದಲ್ಲಿದೆ' ಸಿನಿಮಾ ಈ ವಾರ ಅಂದರೆ, ಅಕ್ಟೋಬರ್ 17ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಒಟ್ಟಾರೆ ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರನ್ನೆಲ್ಲ ಟ್ರೈಲರ್ ಅಚ್ಚರಿಗೀಡುಮಾಡಿತ್ತು. ಹಾಗೆ ಮೂಡಿಕೊಂಡಿದ್ದ ನಿರೀಕ್ಷೆಗಳ ನಡುವೆ ಈ 95 ನಿಮಿಷಗಳ ವಿಶಿಷ್ಟ ಥ್ರಿಲ್ಲರ್ ತೆರೆಗಾಣಲು ದಿನಗಣನೆ ಶುರುವಾಗಿದೆ. ಇದನ್ನೂ ಓದಿ: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕೀಳುಮಟ್ಟದ ಪದ ಬಳಕೆ: ಐಜಿಪಿ ಚಂದ್ರಶೇಖರ್‌ ವಿರುದ್ದ ಕ್ರಮಕ್ಕೆ ಸೂಚನೆ ವಿಶೇಷವೆಂದರೆ, ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಪಳಗಿಕೊಂಡಿದ್ದವರೆಲ್ಲ ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ.ರಂಗಭೂಮಿಯ ವಾತಾವರಣದಲ್ಲಿಯೇ ಜೀವ ಪಡೆದಿದ್ದ ಈ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ. ಹೊಸತೇನನ್ನೋ ಸೃಷ್ಟಿಸಬೇಕೆಂಬ ತುಡಿತದೊಂದಿಗೆ ತಯಾರಾಗಿರುವ ಈ ಚಿತ್ರ ಈಗಾಗಲೇ ಟೈಟಲ್ ಟ್ರ್ಯಾಕ್, ಪೋಸ್ಟರ್, ಟ್ರೈಲರ್ ಮುಂತಾದವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆಯೇ ಇದೊಂದು ಕ್ರೈಂ ಜಾನರಿನ ಚಿತ್ರವೆಂಬಂತೆ ಸೂಚಿಸುವುದು ಸತ್ಯ. ಆದರೆ, ಅದೆಲ್ಲದರಾಚೆಗಿನ ಬೆರಗುಗಳನ್ನು 95ನಿಮಿಷಗಳ ಈ ಥ್ರಿಲ್ಲರ್ ಸಿನಿಮಾ ಬಚ್ಚಿಟ್ಟುಕೊಂಡಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ! ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಮಹೀನ್ ಕುಬೇರ್ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಗ್ರಹಣ, ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ ಸಂಕಲನ ಈ ಚಿತ್ರಕ್ಕಿದೆ. ವಿ ಎಫ್ ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ನಿಭಾಯಿಸಿದ್ದಾರೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತನಿಖಾ ಹಂತದಲ್ಲಿರುವ ಪ್ರಕರಣ ಈ ವಾರವೇ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.