KANNADA

ನಿರುದ್ಯೋಗಿಗಳಿಗಾಗಿಯೇ ಇದೆ ಸರ್ಕಾರದ ಈ 3 ಯೋಜನೆಗಳು!ಸರ್ಕಾರ ನೀಡುತ್ತದೆ 10 ಲಕ್ಷ ರೂಪಾಯಿವರೆಗಿನ ಸಹಾಯ

ಬೆಂಗಳೂರು : ಹಣದುಬ್ಬರ ಮತ್ತು ನಿರುದ್ಯೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಸಮಸ್ಯೆ.ಉತ್ತಮ ಪದವಿ ಪಡೆದರೂ ನಿರುದ್ಯೋಗಿಗಳಾಗಿ ಅಲೆದಾಡುತ್ತಿರುವ ಅನೇಕ ಯುವಕರು ನಮ್ಮ ಮಧ್ಯೆ ಇದೆ.ಇಂಥ ನಿರುದ್ಯೋಗಿಗಳಿಗಾಗಿಯೇ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಈ ಯೋಜನೆಗಳನ್ನು ಬಳಸಿಕೊಂಡು ನಿಮ್ಮ ಭವಿಷ್ಯವನ್ನು ಉತ್ತಮವಾಗಿ ನಿರ್ಮಿಸಿಕೊಳ್ಳಬಹುದು. 1.ಪ್ರಧಾನ ಮಂತ್ರಿ ಮುದ್ರಾ ಯೋಜನೆ : ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY)ಯನ್ನು ಮೋದಿ ಸರ್ಕಾರವು 2015ರಲ್ಲಿ ಪ್ರಾರಂಭಿಸಿತು.ಇದರಿಂದ ಸ್ವಯಂ ಉದ್ಯೋಗಕ್ಕೆ ಹೆಚ್ಚು ಉತ್ತೇಜನ ನೀಡಬಹುದು ಎನ್ನುವ ಕಾರಣದಿಂದಲೇ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.ಈ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ.ಈ ಸಾಲಗಳನ್ನು ಕಾರ್ಪೊರೇಟ್ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ನೀಡಲಾಗುತ್ತದೆ.ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಂಡವಾಳವಾಗಿ ಈ ಸಾಲದ ಮೊತ್ತವನ್ನು ಬಳಸಬಹುದು. ಇದನ್ನೂ ಓದಿ : ವೇತನ ಮತ್ತು ಸವಲತ್ತಿನ ವಿಚಾರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ನನ್ನೂ ಮೀರಿಸುತ್ತಾರೆ ಅಂಬಾನಿ ಮನೆಯ ಅಡುಗೆ ಭಟ್ಟ! ಸಿಂಪಲ್ ಅಡುಗೆಗೆ ಇಷ್ಟೊಂದು ಸ್ಯಾಲರಿ ! ಈ ಸಾಲ ಮೂರು ವಿಭಾಗಗಳಲ್ಲಿ ಸಿಗುತ್ತದೆ : - ಶಿಶು ಸಾಲ - ಇದು 50 ಸಾವಿರ ರೂಪಾಯಿಗಳವರೆಗೆ ಹಣಕಾಸಿನ ನೆರವು ನೀಡುತ್ತದೆ. - ಕಿಶೋರ್ ಸಾಲ- ಇದರಲ್ಲಿ 5 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. - ತರುಣ್ ಸಾಲ- ಇದರಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. 2.ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ : ಈ ಯೋಜನೆಯು ಯುವಕರು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ.ಜುಲೈ 2015ರಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ಪ್ರಧಾನ ಮಂತ್ರಿ ಯುವ ತರಬೇತಿ ಕಾರ್ಯಕ್ರಮ ಎಂದೂ ಕರೆಯಲಾಗುತ್ತದೆ.ಈ ಯೋಜನೆಯಡಿಯಲ್ಲಿ,ಎಲ್ಲಾ ಕ್ಷೇತ್ರಗಳಲ್ಲಿ ಉಚಿತ ತರಬೇತಿಯನ್ನು ನೀಡುವ ಮೂಲಕ ಯುವಕರನ್ನು ಉದ್ಯೋಗಿಗಳನ್ನಾಗಿ ಮಾಡಲಾಗುತ್ತದೆ.ತರಬೇತಿಯ ದಿನಗಳಲ್ಲಿ ಸಹಾಯದ ಮೊತ್ತವನ್ನು ನೀಡಲಾಗುತ್ತದೆ.ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಪ್ರಮಾಣಪತ್ರವನ್ನು ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಖಾಸಗಿ ಅಥವಾ ಸರ್ಕಾರಿ ವಲಯದಲ್ಲಿ ಉದ್ಯೋಗವನ್ನು ಪಡೆಯಬಹುದು ಅಥವಾ ಈ ಪ್ರಮಾಣಪತ್ರದ ಸಹಾಯದಿಂದ, ಯುವಕರು ತಮ್ಮ ಸ್ವಂತ ಕೆಲಸವನ್ನು ಪ್ರಾರಂಭಿಸಬಹುದು. ಇದನ್ನೂ ಓದಿ : Budget 2024: ಬಜೆಟ್ ಮಂಡಿಸಿದ ಕೂಡಲೇ ಇತಿಹಾಸ ಸೃಷ್ಟಿಸಲಿದ್ದಾರೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್‌ ವಿಶೇಷ ಏನು ಗೊತ್ತಾ? 3.ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ : ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ, ಸರ್ಕಾರವು ಕ್ಯಾಷಿಯರ್‌ಗಳು ಅಥವಾ ವ್ಯಾಪಾರಿಗಳಿಗೆ 50,000ದವರೆಗೆ ಸಾಲವನ್ನು ಒದಗಿಸುತ್ತದೆ.ಈ ಸಾಲಗಳಿಗೆ ಯಾವುದೇ ಗ್ಯಾರಂಟಿ ಒದಗಿಸುವ ಅಗತ್ಯ ಇಲ್ಲ. ಅಂದರೆ ಸಾಲ ಪಡೆಯುವವರು ಬ್ಯಾಂಕಿನಲ್ಲಿ ಏನನ್ನೂ ಒತ್ತೆ ಇಡುವ ಅಗತ್ಯವಿಲ್ಲ.ಬೀದಿ ವ್ಯಾಪಾರಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಅವರ ಉದ್ಯೋಗವನ್ನು ಹೆಚ್ಚಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಮೋದಿ ಸರ್ಕಾರ 2020 ರಲ್ಲಿ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನು ಪ್ರಾರಂಭಿಸಿತು.ಈ ಯೋಜನೆಯಡಿ ಸಾಲವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.ಮೊತ್ತವನ್ನು 12 ತಿಂಗಳೊಳಗೆ ಹಿಂತಿರುಗಿಸಬೇಕು. ವ್ಯವಹಾರವನ್ನು ಪ್ರಾರಂಭಿಸಲು, ಈ ಯೋಜನೆಯಡಿಯಲ್ಲಿ ಮೊದಲ ಬಾರಿಗೆ 10,000 ರೂ.ವರೆಗಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.ಹಣವನ್ನು ಸಮಯಕ್ಕೆ ಪಾವತಿಸಿದರೆ,ಎರಡು ಪಟ್ಟು ಅಂದರೆ 20,000 ರೂ.ವರೆಗಿನ ಸಾಲಕ್ಕೆ ಅರ್ಹರಾಗುತ್ತಾರೆ.ಮೂರನೇ ಬಾರಿಗೆ 50,000 ರೂ.ವರೆಗೆ ಸಾಲವನ್ನು ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.