KANNADA

ಎಚ್ಚರ !ಇದು ಹೊಸ ರೀತಿಯ UPI Fraud :ನಿಮ್ಮ ಖಾತೆಯಿಂದ ಹಣ ದೋಚುವುದು ನಿಮಗೇ ತಿಳಿಯುವುದಿಲ್ಲ!

ಬೆಂಗಳೂರು : ಇತ್ತೀಚೆಗೆ ನಡೆಯುತ್ತಿರುವ ಬಹುತೇಕ ಅಪರಾಧಗಳು ಸೈಬರ್ ಗೆ ಸಂಬಂಧಿಸಿದ್ದಾಗಿದೆ.ಯುಪಿಐ ಫ್ರಾಡ್ ಮೂಲಕ ಜನರ ಹಣವನ್ನು ದೋಚುತ್ತಿರುವ ಅನೇಕ ಪ್ರಕರಣಗಳು ಇತ್ತೀಚಿಗೆ ದಾಖಲಾಗುತ್ತಿವೆ.ಸೈಬರ್ ಕ್ರಿಮಿನಲ್‌ಗಳು ಜನರನ್ನು ಹಲವು ರೀತಿಯಲ್ಲಿ ವಂಚಿಸುತ್ತಿದ್ದಾರೆ.ಇತ್ತೀಚಿಗೆ ವಂಚಕರು ಈ ಐದು ರೀತಿಯಲ್ಲಿ ಜನರ ಕಷ್ಟಪಟ್ಟು ದುಡಿದ ಹಣವನ್ನು ಲೂಟಿ ಮಾಡುತ್ತಿರುವುದಾಗಿ ವರದಿಯಾಗಿದೆ. ನಕಲಿ ಸ್ಕ್ರೀನ್‌ಶಾಟ್‌ : ವಂಚಕರು ನಕಲಿ ಸ್ಕ್ರೀನ್ ಶಾಟ್ ಗಳನ್ನೂ ಸೃಷ್ಟಿಸಿ ನಿಮಗೆ ಹಣ ಕಳುಹಿಸಿರುವುದಾಗಿ ಹೇಳಿ ನಿಮ್ಮನ್ನು ಮೋಸಗೊಳಿಸುತ್ತಾರೆ.ಈ ನಕಲಿ ಸ್ಕ್ರೀನ್ ಶಾಟ್ ಗಳನ್ನು ತೋರಿಸಿ ನಿಮ್ಮ ಬಳಿಯಿಂದ ಹಣ ಕೀಳುತ್ತಾರೆ. ಸ್ನೇಹಿತರಂತೆ ಮೋಸ : ಕೆಲವರು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಂತೆ ನಟಿಸಿ ನಿಮ್ಮನ್ನು ಮೋಸಗೊಳಿಸುತ್ತಾರೆ.ತುಂಬಾ ಎಮೆರ್ಜೆನ್ಸಿ ಎಂದು ಹಣ ಕೇಳುತ್ತಾರೆ. ಇದನ್ನೂ ಓದಿ : ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿ ನಕಲಿ UPI QR ಕೋಡ್ : ನಕಲಿ UPI QR ಕೋಡ್ ಮೂಲಕ ನಿಮ್ಮ ಖಾತೆಯಲ್ಲಿರುವ ಎಲ್ಲಾ ಮಾಹಿತಿಯನ್ನು ಕದಿಯುತ್ತಾರೆ.ಈ ಮೂಲಕ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಕೂಡಾ ದೋಚುತ್ತಾರೆ. ಅಪಾಯಕಾರಿ ಅಪ್ಲಿಕೇಶನ್‌ಗಳು : ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಪರದೆಯ ಮೇಲೆ ಕಣ್ಣಿಡುತ್ತವೆ.ಈ ಅಪ್ ಗಳು ನಿಮ್ಮ UPI ಪಿನ್ ಮತ್ತು OTP ಯಂತಹ ಪ್ರಮುಖ ಸಂಖ್ಯೆಗಳನ್ನು ಕದಿಯಬಹುದು. ಫೇಕ್ ರಿಕ್ವೆಸ್ಟ್ : ಕೆಲವು ಜನರು ನಿಮ್ಮ UPI ಅಪ್ಲಿಕೇಶನ್‌ನಲ್ಲಿ ನಕಲಿ ರಿಕ್ವೆಸ್ಟ್ ಗಳನ್ನೂ ಕಳುಹಿಸುತ್ತಾರೆ. ಹಣದ ಅವಶ್ಯಕತೆ ಇದೆ ಹಾಗಾಗಿ ನಿಮ್ಮ ಸಹಾಯ ಬೇಕು ಎಂದು ಫೇಕ್ ರಿಕ್ವೆಸ್ಟ್ ಗಳನ್ನೂ ಕಳುಹಿಸುತ್ತಾರೆ. ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..! ನಿಮ್ಮ ಹಣವನ್ನು ಉಳಿಸಿಕೊಳ್ಳುವುದು ಹೇಗೆ ? : ನಕಲಿ ಸ್ಕ್ರೀನ್‌ಶಾಟ್‌ಗಳನ್ನು ನಂಬಬೇಡಿ. ಸರಿಯಾಗಿ ಪರಿಶೀಲನೆ ಮಾಡದೆ ಯಾರಿಗೂ ಹಣ ಕಳುಹಿಸಬೇಡಿ. ಮಾನ್ಯವಾದ QR ಕೋಡ್‌ಗಳನ್ನು ಮಾತ್ರ ಸ್ಕ್ಯಾನ್ ಮಾಡಿ. UPI ಪಿನ್, OTP ಅಥವಾ ಇತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.