KANNADA

ಪ್ರಿಯಾಂಕಾ ಪತಿ ಹತ್ಯೆಗೆ ಸ್ಕೇಚ್‌..! ಹಣೆಗೆ ಟಾರ್ಗೆಟ್ ಮಾಡಿದ್ದ ಶಾರ್ಪ್ ಶೂಟರ್.. ವೇದಿಕೆಯಿಂದ ಓಡಿ ಜೀವ ಉಳಿಸಿಕೊಂಡ ನಿಕ್

Nick Jonas : ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ವೀಡಿಯೊ ಒಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನಿಕ್ ತನ್ನ ಅಂಗರಕ್ಷಕರಿಗೆ ಸೊನ್ನೆ ಮಾಡುತ್ತಾ ವೇದಿಕೆಯಿಂದ ಓಡಿಹೋಗುವುದನ್ನು ಕಾಣಬಹುದು... ಅಸಲಿಗೆ ಏನಾಯ್ತು..? ಸಂಪೂರ್ಣ ವಿವರ ಇಲ್ಲಿದೆ ನೋಡಿ.. ನಿಕ್ ಜೋನಾಸ್ ತಮ್ಮ ಡೇಸ್ ವರ್ಲ್ಡ್ ಟೂರ್‌ನ ಭಾಗವಾಗಿ ಮಂಗಳವಾರ ಪ್ರೇಗ್‌ನಲ್ಲಿ ಸಹೋದರರಾದ ಕೆವಿನ್ ಮತ್ತು ಜೋ ಜೋನಾಸ್ ಅವರೊಂದಿಗೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಅವರ ಹಣೆಗೆ ಲೇಸರ್‌ ಲೈಟ್‌ ಬಿತ್ತು.. ಅದು ಯಾರೋ ಗುರಿ ಇಟ್ಟು ಬಿಟ್ಟಂತಿತ್ತು.. ಇದರಿಂದ ಜೀವ ಉಳಿಸಿಕೊಳ್ಳಲು ನಿಕ್‌ ವೇದಿಕೆ ಮೇಲಿಂದ ಇಳಿದ ಹೋದರು.. ಇದನ್ನೂ ಓದಿ: 60 ವರ್ಷದ ಹೀರೋ ಜೊತೆ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್‌ ಹೀರೋಯಿನ್‌! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್‌ ಸುದ್ದಿ ಈ ಕರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಭಯದಿಂದ ನಿಕ್ ಪ್ರದರ್ಶನವನ್ನು ಅರ್ಧಕ್ಕೆ ಕೈಬಿಟ್ಟು ಓಡಿ ಹೋಗುತ್ತಿರುವ ದೃಶ್ಯ ವೀಡಿಯೊದಲ್ಲಿದೆ.. ಇನ್ನು ಶಾರ್ಪ್‌ ಶೂಟರ್‌ ನಿಗ್‌ ಹಣೆಗೆ ಟಾರ್ಗೆಟ್‌ ಮಾಡಿದ್ದು, ಅದಕ್ಕಾಗಿ ಜೀವ ಉಳಿಸಿಕೊಳ್ಳಲು ವೇದಿಕೆಯಿಂದ ಇಳಿದು ಹೋಗಿದ್ದಾಗಿ ಸುದ್ದಿಯಾಗಿದೆ.. A post shared by Jonas Daily News (@jonasdailynews_) ಇನ್ನು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಶಾರ್ಪ್‌ ಶೂಟರ್‌ ಟಾರ್ಗೆಟ್‌ ಮಾಡಿದ್ನಾ ಅಥವಾ ಯಾರೋ ಕಿಡಿಗೇಡಿಗಳು ಲೇಸರ್‌ ಲೈಟ್‌ ಬಿಟ್ಟಿದ್ದಾರಾ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.