KANNADA

Viral Video: ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಮಹಿಳೆ 25 ಬಾರಿ ಮಾಡಿದ್ದೇನು?

Pune Viral Video: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಜೊತೆಗೆ ಅನುಚಿತವಾಗಿ ವರ್ತಿಸಿದ ಕಾಮುಕನಿಗೆ 25 ಬಾರಿ ಕಪಾಳಮೋಕ್ಷ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದ್ದು, ಕಾಮುಕನಿಗೆ ಮಹಿಳೆ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವರದಿಗಳ ಪ್ರಕಾರ, ಶಿರಡಿ ಯ ಕ್ರೀಡಾ ಶಿಕ್ಷಕಿ ಪ್ರಿಯಾ ಲಸ್ಟರೆ ಎಂಬುವರು ತನ್ನ ಪತಿ ಮತ್ತು ಮಗುವಿನೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರಂತೆ. ಈ ವೇಳೆ ಕಂಠಪೂರ್ತಿ ಕುಡಿದು ಬಸ್‌ ಹತ್ತಿದ್ದ ವ್ಯಕ್ತಿಯೊಬ್ಬ ಅಮಲಿನಲ್ಲಿ ಪ್ರಿಯಾರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಡೇಂಜರ್.! ಡೇಂಜರ್‌!! ಡಿಸೆಂಬರ್‌ ಡೇಂಜರ್‌!!!; ಪ್ರತಿವರ್ಷ ಡಿಸೆಂಬರ್‌ನಲ್ಲೇ ಅತಿಹೆಚ್ಚು ಸಾವು ನೋವು!! Powerful moment of self-defense! A Pune woman slaps a drunk man 25 times after he allegedly harasses her on a bus—sending a clear message against harassment in public spaces! — Sagar Panchal (@SagiiPanchal) December 19, 2024 ಕುಡಿತ ಮತ್ತಿನಲ್ಲಿದ್ದ ಕಾಮುಕನ ಕಾಟಕ್ಕೆ ಬೇಸತ್ತ ಪ್ರಿಯಾ ಅವರು ಆತನ ಕಾಲರ್‌ ಹಿಡಿದು ಸರಿಯಾಗಿ ಜಾಡಿಸಿದ್ದಾರೆ. ಹಲವಾರು ಜನರ ಸಮ್ಮುಖದಲ್ಲಿಯೇ ಪ್ರಿಯಾ ಅವರು ಕಾಮುಕನಿಗೆ ತಕ್ಕಪಾಠ ಕಲಿಸಿದ್ದಾರೆ. ಆತನಿಗೆ 25 ಬಾರಿ ಕಪಾಳಮೋಕ್ಷ ಮಾಡುವ ಮೂಲಕ ಬುದ್ಧಿ ಕಲಿಸಿದ್ದಾರೆ. ಬಳಿಕ ಆತನನ್ನು ಶನಿವಾರ ವಾಡಾ ಸಮೀಪದ ಪೊಲೀಸ್‌ ಠಾಣೆಗೆ ಎಳೆದೊಯ್ದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವಿಡಿಯೋ ವೀಕ್ಷಿಸಿದ ಬಹುತೇಕರು ಮಹಿಳೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದು, ಕಾಮುಕನಿಗೆ ತಕ್ಕ ಪಾಠ ಕಲಿಸಿದ್ದಾರೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ನಾಳೆ ಸಿಗಲಿದೆ ಬಂಫರ್‌ ಗುಡ್‌ ನ್ಯೂಸ್‌..! ಈ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ.. ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಾರೆ. ಅನೇಕ ಮಹಿಳೆಯರು ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ. ಆದರೆ ಈ ಮಹಿಳೆ ತೋರಿದ ಧೈರ್ಯಕ್ಕೆ ಪ್ರತಿಯೊಬ್ಬರೂ ಸಲಾಂ ಹೇಳಬೇಕು. ಇದು ಮಹಿಳೆಯರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಕಾಮುಕರಿಗೆ ಇದೇ ರೀತಿ ಪಾಠ ಕಲಿಸಬೇಕು ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.