KANNADA

ಬುದ್ಧಿವಂತ ಉಪ್ಪಿಗೇ.. ಶಾಕ್‌ ಕೊಟ್ಟ ಯುವಕ..! ʼAʼ ಚಿತ್ರದಲ್ಲಿ ಓಡಿ ಹೋಗಿದ್ದ ಬಾಲಕ UI ಪ್ರಚಾರದ ವೇಳೆ ಪ್ರತ್ಯಕ್ಷ..

Actor Upendra A movie : ನಟ ಉಪೇಂದ್ರ ಅವರು ನಾಯಕನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ತಮಗೊಂದು ವಿಶಿಷ್ಟವಾದ ಗುರುತನ್ನು ಪಡೆದಿದ್ದಾರೆ. ಇದೀಗ UI Movie ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರ ಡಿಸೆಂಬರ್ 20 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ.. ಇದರ ನಡುವೆ ಸೂಪರ್‌ ಸ್ಟಾರ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಸಿನಿರಂಗದ ಸ್ಟಾರ್ ನಟ ಉಪೇಂದ್ರ ಅವರ ಫಾಲೋಯಿಂಗ್ ಹೇಳತೀರದು. ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಗಳು, ಡೈರೆಕ್ಟರ್ ಗಳು ಕೂಡ ಇವರ ದೊಡ್ಡ ಅಭಿಮಾನಿಗಳು. ಯಾವಾಗಲೂ ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಟ, ನಿರ್ದೇಶಕರಾಗಿಯೂ ಭಾರತದಲ್ಲೇ ತಮಗೊಂದು ವಿಶೇಷ ಮನ್ನಣೆ ಗಳಿಸಿದ್ದಾರೆ.. ಇದನ್ನೂ ಓದಿ: UI ಸಿನಿಮಾ ನೋಡ್ತೀರಾ. .?ನೀವು ಬುದ್ದಿವಂತರಾಗಿದ್ರೆ ಥೀಯೇಟರ್ ನಿಂದ ಎದ್ದೋಗಿ... ಸಧ್ಯ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಚಿತ್ರ ಇಂದು ತೆರೆಕಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಈ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿಳುತ್ತಿದ್ದಾರೆ. ಇಲ್ಲಿಯವರೆಗೆ ಟ್ವಿಟ್ಟರ್ ನಲ್ಲಿ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. Orey 😂😂🤣🤣🤣😭😭 Idekkadi mass ra mowa 😭😭😭 Is it really true Bhavani?? @nimmaupendra ye shock aipoyaru debbaki 🤣🤣😂😂😭😭 #Upendra #UiTheMovie pic.twitter.com/MVDgMiu6Dk — Vamc Krishna (@lyf_a_zindagii) December 19, 2024 ಅಂದಹಾಗೆ.. ಯುಐ ಚಿತ್ರದ ಪ್ರಚಾರಕ್ಕಾಗಿ ಉಪೇಂದ್ರ ಹೈದರಾಬಾದ್‌ಗೆ ಬಂದಿದ್ದರು. ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಆಘಾತಕಾರಿ ಘಟನೆಯನ್ನು ಎದುರಿಸಿದರು. ಒಬ್ಬ ವ್ಯಕ್ತಿ ಎದ್ದುನಿಂತು A ಸಿನಿಮಾದಲ್ಲಿ ನೀವು ಬಾಲಕನಿಗೆ ಜೀವನದ ಬಗ್ಗೆ ಹೇಳ್ತೀರಲ್ಲ.. ಆಗ ಬಾಲಕ ಓಡಿ ಹೋಗ್ತಾನೆ ಗೊತ್ತ ಸರ್‌.. ಆ ಹುಡುಗ ನಾನೇ ಅಂತ ಪರಿಚಯ ಮಾಡಿಕೊಳ್ತಾನೆ.. ಇದನ್ನೂ ಓದಿ: Bigg Boss Kannada 11: ಮನೆಯಿಂದ ಹೊರಬಂದವರಿಂದಲೇ ರಿವೀಲ್ ಆಯ್ತು 'ಬಿಗ್ ಬಾಸ್ ವಿನ್ನರ್' ಹೆಸರು...! ಇದನ್ನು ಕೇಳಿ ಉಪೇಂದ್ರ ಅವರು ಶಾಕ್‌ ಆಗ್ತಾರೆ.. ಸ್ವಲ್ಪ ಸಮಯ ಮೌನಕ್ಕೆ ಜಾರಿ, ಓ... ಅವತ್ತು ಓಡಿ ಹೋದವರು ಇವತ್ತು ಬಂದಿದ್ದಿರಾ ಅಂತ ಹೇಳ್ತಾರೆ.. ಉಪ್ಪಿ ಮಾತು ಕೇಳಿ ಅಲ್ಲಿದ್ದ ಮಾಧ್ಯಮದವರು ಜೋರಾಗಿ ನಗುತ್ತಾರೆ.. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.