KANNADA

'ಪ್ರಾಣಿಗಳೇ ಗುಣದಲಿ ಮೇಲು... ಮಾನವನದಕಿಂತ ಕೀಳು'..! ಅಂತ ಅಣ್ರಾವು ಸುಮ್ನೆ ಹೇಳಿಲ್ಲ.. ಈ ವಿಡಿಯೋ ನೋಡಿ..

Viral Video : ಪ್ರಕೃತಿ ಹೇಳುವ ವಿಷಯಗಳು ಕೆಲವೊಮ್ಮೆ ನಮ್ಮನ್ನು ವಿಸ್ಮಯಗೊಳಿಸುತ್ತವೆ. ಸದ್ಯ ಇಂತಹದೊಂದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಕಳೆದ ಕೆಲ ದಿನಗಳಿಂದ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆಯ ನಡವಳಿಕೆಗೆ ನೆಟ್ಟಿಗರು ಮನಸೋತಿದ್ದಾರೆ. ವಿಡಿಯೋದಲ್ಲಿ ಮೊದಲು ವ್ಯಕ್ತಿಯೊಬ್ಬ ಆನೆ ಸಾಗುವ ದಾರಿಯಲ್ಲಿ ನಿಂತಿದ್ದ. ಆಗ ಆನೆ ಸೌಜನ್ಯಿದಿಂದ ಸೊಂಡಿಲಿನಿಂದ ಅವನ ಹೆಗಲು ಮುಟ್ಟಿದೆ. ಏಕಾಏಕಿ ಆನೆಯನ್ನು ಕಂಡ ವ್ಯಕ್ತಿಗೆ ಆಘಾತವಾಗಿದ್ದು, ಅಲ್ಲಿಂದ ಓಡಿ ಹೋಗಿ ದೂರ ನಿಂತಿದ್ದಾನೆ.. ಆದ್ರೆ ಗಜರಾಜ ತನ್ನ ಹಾದಿ ತಾನು ಹಿಡಿದು ನಡೆದ. ಇದನ್ನೂ ಓದಿ: ಈಕೆಯ ದೇಹದ ಇಂಚಿಂಚು ಸೂಪರ್‌ ಗುರು..! ಇವಳೇ ನೋಡಿ ವಿಶ್ವದ 'ಪರ್ಫೆಕ್ಟ್ ಫಿಟ್ನೆಸ್ ವುಮನ್' Elephant gently reminding the human that he is in the way. pic.twitter.com/Ft6P7ICUf8 — Nature is Amazing ☘️ (@AMAZlNGNATURE) December 14, 2024 ಇದೀಗ ಈ ಮನಮುಟ್ಟುವ ಮತ್ತು ಮುದ್ದಾದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ದೃಶ್ಯವನ್ನು ನೋಡಿದ ನೆಟ್ಟಿಗರು ಮನುಷ್ಯರಾದ ನಾವು ಈ ರೀತಿಯ ಪ್ರಾಣಿಗಳಿಂದ ಒಂದಿಷ್ಟು ಒಳ್ಳೆಯ ವಿಷಯಗಳನ್ನು ಕಲಿಯಬೇಕು ಎಂದು ಹೇಳುತ್ತಿದ್ದಾರೆ. ಕ್ಯೂಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.