Danger december month: ಪ್ರೀತಿಯ ಓದುಗರೆ, ತಾವು ಈ ವಿಷಯವನ್ನು ಎಷ್ಟರ ಮಟ್ಟಿಗೆ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ... "ಪ್ರತಿ ವರ್ಷ ಡಿಸೆಂಬರ್‌ನಲ್ಲಿಯೇ ಅತೀಹೆಚ್ಚು ಸಾವು ನೋವುಗಳು ಸಂಭವಿಸುತ್ತವೆಯಂತೆ... ಕಳೆದ 15-20 ದಿನದಲ್ಲಿ ಪ್ರತಿನಿತ್ಯ ಕನಿಷ್ಠ 2-3 ಜನರ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಯುತ್ತಿದ್ದೇವೆ. ನೀವೂ ಸಹ ಈ ವಿಷಯವನ್ನು ಗಮನಿಸಿರುತ್ತೀರಿ. ನಿಮಗೆ ಗೊತ್ತಿರುವ, ನಿಮ್ಮ ಸುತ್ತಮುತ್ತಲ ಅಥವಾ ಹತ್ತಿರವಿರುವ ಜನರು ಸಾವನ್ನಪ್ಪಿರುತ್ತಾರೆ. ನಮಗೆ ಗೊತ್ತಿಲ್ಲದವರ ನಿಧನದ ಸುದ್ದಿ ಬಹಳಷ್ಟು ಇರತ್ತವೆ. ಇನ್ನು ಪ್ರತಿವರ್ಷವೂ ಸಹ ಈ ಡಿಸೆಂಬರ್‌ನಲ್ಲಿಯೇ ಅದರಲೂ ವಿಶೇಷವಾಗಿ ವರ್ಷದ ಕೊನೆಯ 3-4 ದಿನದಲ್ಲಿ ರಾಷ್ಟ್ರದ/ರಾಜ್ಯದ ನಾಯಕರ ಹೆಚ್ಚು ನಿಧನಗಳನ್ನು ನೋಡುತ್ತೇವಂತೆ. ಈ ವರ್ಷದ ಡಿಸೆಂಬರ್ ನಲ್ಲಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಗಣ್ಯರ ಸಾವಿನ ಸುದ್ದಿಯನ್ನು ನೀವು ಗಮನಿಸಿರಬಹುದು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ವಿಶ್ವ ಶ್ರೇಷ್ಠ ತಬಲಾ ವಾದಕ ಜಾಕೀರ್ ಹುಸೇನ್, ವೃಕ್ಷಮಾತೆ ಪದ್ಮಶ್ರೀ ತುಳಸಿಗೌಡ, ಕಿರುತೆರೆ ನಟಿ ಶೋಭಿತಾ ಮುಂತಾದವರ ನಿಧನವಾಗಿದೆ. IPS ಆಗಿ ಕರ್ತವ್ಯಕ್ಕೆ ಹಾಜರಾಗಲು ಹೋದ ಮೊದಲ ದಿನವೇ ಭೀಕರ ಅಪಘಾತದಲ್ಲಿ ಹರ್ಷವರ್ಧನ ಸಾವನ್ನಪ್ಪಿದ್ದರು. ಇದನ್ನೂ ಓದಿ: 5000 ವರ್ಷಗಳ ಹಿಂದೆಯೇ ಕಡಲು ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದ ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು? ಹಾಸನ ತಾಲೂಕಿನ ಕಿತ್ತಾನೆಗಡಿ ಬಳಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ (26) ಅವರು ಡಿಸೆಂಬರ್ 1ರಂದು ನಿಧನರಾಗಿದ್ದಾರೆ. 545 PSIನಲ್ಲಿ 178ನೇ Rankನಲ್ಲಿ ಆಯ್ಕೆಯಾಗಿದ್ದ ಶಿವರಾಜಕುಮಾರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಇನ್ನು ನಮ್ಮೂರು & ಸುತ್ತಮುತ್ತಲಿನ ಗ್ರಾಮದಲ್ಲಿ ಲೆಕ್ಕವಿಲ್ಲದ ಅದೆಷ್ಟೋ ಜನರು ಸಾವನ್ನಪ್ಪಿದ್ದಾರೆ. ಡಿಸೆಂಬರ್‌ನಲ್ಲಿಯೇ ಅತೀಹೆಚ್ಚು ಸಾವು-ನೋವುಗಳಾಗಲು ನೈಸರ್ಗಿಕವಾಗಿ ಮತ್ತು ಕೃತಕವಾಗಿ ಹತ್ತಾರು ಕಾರಣಗಳಿರಬಹುದು. ಅದರಲ್ಲಿ ಪ್ರಮುಖವಾಗಿ ಡಿಸೆಂಬರ್ ತಿಂಗಳು ಅತೀಹೆಚ್ಚು ಚಳಿ ಇರುವ ತಿಂಗಳು. ಇದರಿಂದ ಅತೀ ಹಿರಿಯ & ಅತೀ ಕಿರಿಯ ಜೀವಗಳಿಗೆ ದೈಹಿಕ ತೊಂದರೆ ಮತ್ತು ಹೃದಯಾಘಾತ ಹೆಚ್ಚು.!! ಇದು ಅತೀ ಕಡಿಮೆ ಹಗಲು ಇರುವ ತಿಂಗಳಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ(ರಕ್ತ)ದೊತ್ತಡ ಉಂಟಾಗಿ ಸಾವನ್ನಪ್ಪುವವರು ಇದ್ದಾರೆ. ಇದನ್ನೂ ಓದಿ: ದಪ್ಪ ಮೀಸೆ ಪೊಲೀಸರಿಗೆ ಸಿಗುತ್ತೆ ʼಬೋನಸ್ʼ..! ದೊಡ್ಡ ಮೀಸೆ ಇದ್ರೆ ಈ ರಾಜ್ಯಗಳಲ್ಲಿ ವಿಶೇಷ ಗೌರವ.. ಡಿಸೆಂಬರ್ ಅತೀ ಹೆಚ್ಚು ಪ್ರವಾಸ ಕೈಗೊಳ್ಳುವ ತಿಂಗಳಾಗಿದೆ. ಈ ತಿಂಗಳಿನಲ್ಲಿ ರಸ್ತೆಗಳು ಕಿಕ್ಕಿರಿದು ಅಪಘಾತಗಳು ಹೆಚ್ಚಾಗುತ್ತವೆ. ಈಗಾಗಲೇ ಡಿಸೆಂಬರ್ ತಿಂಗಳ 20 ದಿನಗಳು ಮುಗಿದಿವೆ. ಆದ್ದರಿಂದ ಮುಂದಿನ 10 ದಿನಗಳಲ್ಲಿ ಇನ್ನಷ್ಟು ಕಠಿಣವಾದ ದಿನಗಳಲ್ಲಿ ಎಲ್ಲರೂ ತಾವಷ್ಟೇ ಸುರಕ್ಷಿತವಾಗಿರದೇ, ತಮ್ಮ ಸುತ್ತಮುತ್ತಲಿನ ಅತೀ ಕಿರಿಯ & ಹಿರಿಯ ಜೀವಗಳ ರಕ್ಷಣೆ ಮಾಡುವ ಅಗತ್ಯವಿದೆ. ಅಗತ್ಯವಿರುವ ಆದರೆ ಅನಿವಾರ್ಯವಲ್ಲದ ಪ್ರಯಾಣಗಳನ್ನು ಆದಷ್ಟು ಮುಂದೂಡುವುದು ಉತ್ತಮ. ವೆಚ್ಚವಿಲ್ಲದ ಬೆಚ್ಚಗಿನ ಆರೋಗ್ಯ ಕ್ರಮಗಳನ್ನು ಅನುಸರಿಸುವುದರಿಂದ ನೀವು ಆರೋಗ್ಯವಾಗಿ & ಸುರಕ್ಷಿತವಾಗಿ ಇರಬಹುದು. ಬಾಕಿ ಇರುವ ದಿನಗಳಲ್ಲಿ ಡೇಂಜರ್ ಡಿಸೆಂಬರ್ ಆಗದೇ Decent December ಆಗಿರಲಿ ಎಂದು ಹಾರೈಸುವ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.