ಇತ್ತೀಚಿನ ವರ್ಷಗಳಲ್ಲಿ, ಬಾಹ್ಯಾಕಾಶದ ಬಗ್ಗೆ ಜನ ಸಾಮಾನ್ಯರಲ್ಲಿಯೂ ಆಸಕ್ತಿ ಬಹಳಷ್ಟು ಹೆಚ್ಚಾಗಿದೆ. ಬಾಹ್ಯಾಕಾಶ ಯಾನದ ಕುರಿತಾದ ಚರ್ಚೆಗಳು ಎಲ್ಲೆಡೆ ನಡೆಯುತ್ತಿರುವುದನ್ನು ನಾವು ಕಾಣಬಹುದು. ಮನುಷ್ಯನು ಚಂದ್ರ, ಮಂಗಳ ಮತ್ತು ಅದರಾಚೆಗೆ ಹೋಗುವ ಯತ್ನದಲ್ಲಿದ್ದಾನೆ. ಆದರೆ, ಅದು ಚರ್ಚೆ ನಡೆಸುವಷ್ಟು ಸುಲಭದಲ್ಲಿ ನಡೆದು ಹೋಗುವ ಕೆಲಸವೇ? ಇಲ್ಲಿ ತಂತ್ರಜ್ಞಾನ ಒಂದೇ ಎದುರಾಗುವ ಅಡ್ಡಿ ಖಂಡಿತಾ ಅಲ್ಲ, ಮಾನವ ದೇಹವು ಬಾಹ್ಯಾಕಾಶದ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದಿಲ್ಲ. ಅಲ್ಲಿ ವಿಕಿರಣ ಮತ್ತು ನಿದ್ರೆ ಸೇರಿದಂತೆ ಅನೇಕ ಅಪಾಯಕಾರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬಾವಲಿ ರಕ್ತದ ವಿಶೇಷತೆ ಏನು ? : ಬಾಹ್ಯಾಕಾಶ ಪ್ರಯಾಣದ ಸಮಯದಲ್ಲಿ ಮನುಷ್ಯರು ಮಲಗಲು ಎದುರಾಗುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎನ್ನಬಹುದು. ಇದಕ್ಕಾಗಿ ಬಾವಲಿಗಳ ರಕ್ತದ ಬಗ್ಗೆ ಪ್ರಸ್ತಾಪಿಸಲಾಗುತ್ತಿದೆ.ಬಾವಲಿಗಳು ತುಂಬಾ ತಂಪಾದ ಸ್ಥಳಗಳಲ್ಲಿ ದೀರ್ಘಕಾಲ ವಾಸಿಸುತ್ತವೆ. ಇದರ ದೇಹದಲ್ಲಿ ಎರಿಥ್ರೋಸೈಟ್ ಎಂಬ ಕೆಂಪು ರಕ್ತಕಣ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಜರ್ಮನಿಯ ಗ್ರೀಫ್ಸ್ವಾಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ : Digital Scam: ಈ ಸಂಖ್ಯೆಗಳಿಂದ ಕರೆ ಸ್ವೀಕರಿಸದಂತೆ BSNL, Jio, Airtel, Vi ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ! ಮನುಷ್ಯರ ರಕ್ತದಲ್ಲಿಯೂ ಇದೆ ಎರಿಥ್ರೋಸೈಟ್ : ಎರಿಥ್ರೋಸೈಟ್ ಗಳು ಮಾನವನ ರಕ್ತದಲ್ಲಿಯೂ ಇದ್ದರೂ, ಅವು ಬಾವಲಿಗಳ ರಕ್ತದಲ್ಲಿರುವಂತೆಯೇ ಶೀತಕ್ಕೆ ಪ್ರತಿಕ್ರಿಯಿಸುವುದಿಲ್ಲ. ಸಂಶೋಧಕರು ಎರಡು ಜಾತಿಯ ಬಾವಲಿಗಳ ಎರಿಥ್ರೋಸೈಟ್‌ಗಳನ್ನು ಹೋಲಿಸಿದ್ದಾರೆ, ಅವು ಶೀತ ವಾತಾವರಣದಲ್ಲಿ ಹೈಬರ್ನೇಟ್ ಆಗುತ್ತವೆ. ತಾಪಮಾನ ಕಡಿಮೆಯಾದಂತೆ ಬಾವಲಿಗಳ ಎರಿಥ್ರೋಸೈಟ್‌ಗಳು ಸಾಮಾನ್ಯ ಮತ್ತು ಹೊಂದಿಕೊಳ್ಳುವ ಸ್ಥಿತಿಯಲ್ಲಿರುತ್ತವೆ ಎಂದು ಎನ್ನಲಾಗಿದೆ. ಆದರೆ, ಸಾಮಾನ್ಯಕ್ಕಿಂತ ಕಡಿಮೆ ದೇಹದ ತಾಪಮಾನದಲ್ಲಿ, ಮಾನವ ಎರಿಥ್ರೋಸೈಟ್ ಗಳು ಹೆಚ್ಚು ಜಿಗುಟಾಗಬಹುದು. ಒಂದು ಪ್ರಮುಖ ಹೆಜ್ಜೆ : ಬಾವಲಿಗಳ ರಕ್ತದಲ್ಲಿನ ವಿಶೇಷ ಲಕ್ಷಣವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.ಆದ್ರೆ ಇದನ್ನು ಬಾಹ್ಯಾಕಾಶ ಪ್ರಯಾಣವನ್ನು ಸುಗಮಗೊಳಿಸಲು ಹೇಗೆ ಅನ್ವಯಿಸಬೇಕು ಎನ್ನುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಬಳಸಲು ಇನ್ನೂ ಹಲವಾರು ವರ್ಷಗಳು ಬೇಕಾಗಬಹುದು.ಇದಕ್ಕಾಗಿಯೇ ಸಂಶೋಧನೆಯ ಪ್ರಮುಖ ಲೇಖಕ ಜೆರಾಲ್ಡ್ ಕೆರ್ತ್, ಇದು ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೆ ಸಾಗಬೇಕಾದ ದಾರಿ ಬಹಳ ದೂರವಿದೆ ಎಂದು ಹೇಳಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಎಷ್ಟು ಸಮಯ ತೆಗೆದುಕೊಳ್ಳಬಹುದು?: ಇದು ಎಷ್ಟು ವರ್ಷಗಳಲ್ಲಿ ಸಾಧ್ಯವಾಗುತ್ತದೆ ಎನ್ನುವುದನ್ನು ಈಗಲೇ ಹೇಳುವುದು ಅಸಾಧ್ಯ. ಈ ಸಂಪೂರ್ಣ ಪ್ರಕ್ರಿಯೆಯನ್ನು ಕೈಗೊಳ್ಳುವಲ್ಲಿ ವಿಜ್ಞಾನಿಗಳು ಯಶಸ್ವಿಯಾದರೆ, ಅದು ಬಾಹ್ಯಾಕಾಶ ಪ್ರಯಾಣವನ್ನು ವಾಸ್ತವಿಕಗೊಳಿಸಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
ಈ ಷರತ್ತಿನ ಮೇಲೆ ಸಿಟಿ ರವಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆದೇಶಿಸಿದ ಹೈಕೋರ್ಟ್: ಏನದು?
December 20, 2024What’s New
Spotlight
Today’s Hot
Featured News
Latest From This Week
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!!!
KANNADA
- by Sarkai Info
- December 20, 2024
ದಪ್ಪ ಮೀಸೆ ಪೊಲೀಸರಿಗೆ ಸಿಗುತ್ತೆ ʼಬೋನಸ್ʼ..! ದೊಡ್ಡ ಮೀಸೆ ಇದ್ರೆ ಈ ರಾಜ್ಯಗಳಲ್ಲಿ ವಿಶೇಷ ಗೌರವ..
KANNADA
- by Sarkai Info
- December 20, 2024
ಬೆತ್ತಲೆಯಾಗಿ ಮಹಿಳಾ ಬೋಗಿ ಹತ್ತಿದ ವ್ಯಕ್ತಿ..! ಭೀಕರ ದೃಶ್ಯಕಂಡು ಬೆಚ್ಚಿಬಿದ್ದ ನಾರಿಯರು.. ವಿಡಿಯೋ ವೈರಲ್..
KANNADA
- by Sarkai Info
- December 20, 2024
Subscribe To Our Newsletter
No spam, notifications only about new products, updates.