KANNADA

ನಿನಗಾಗಿ ಧಾರಾವಾಹಿ ʼಸೂಪರ್‌ ಸ್ಟಾರ್‌ ರಚ್ಚುʼ ಖ್ಯಾತಿಯ ದಿವ್ಯಾ ಉರುಡುಗ ತಾಯಿ ಯಾರು ಗೊತ್ತಾ? ಇವರು ಸಖತ್‌ ಸಿಂಗರ್‌ ಕೂಡ ಹೌದು

Divya Uruduga: ಕಲರ್ಸ್ ಕನ್ನಡ‌ ಧಾರಾವಾಹಿಯಲ್ಲಿ ನಟಿಸುತ್ತಿರುವ ದಿವ್ಯಾ ಉರುಡುಗ ಯುವ ಪ್ರತಿಭಾನ್ವಿತ ನಟಿ ಎಂದರೆ ತಪ್ಪಾಗಲ್ಲ. ಇನ್ನು ಇವರು ತಮ್ಮ ಸಿನಿ ಪಯಣ ಶುರು ಮಾಡಿದ್ದು `ಹುಲಿರಾಯ' ಚಿತ್ರದ ಮೂಲಕ. ಇದನ್ನೂ ಓದಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ನಿಜವಾದ ಮಕ್ಕಳು ಯಾರು ಗೊತ್ತಾ? ಅವರೇ ಪರಿಚಯಿಸಿದ್ರು ನೋಡಿ ಇನ್ನು ದಿವ್ಯಾ ಹುಟ್ಟಿದ್ದು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ. ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಅವರು ಶಿಕ್ಷಣಕ್ಕಾಗಿ ಆಗಮಿಸಿದ್ದು ಮಂಗಳೂರಿಗೆ. ಇಲ್ಲಿ ಕಲಿಯುತ್ತಿದ್ದಾಗಲೇ ಸೀರಿಯಲ್‌ʼನಲ್ಲಿ ನಟಿಸಲು ಅವಕಾಶ ಹುಡುಕಿ ಬಂತು.ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದ ದಿವ್ಯಾ ಉರುಡುಗ, ಸೀಸನ್ 9ರಲ್ಲೂ ಸಹ ಪ್ರವೇಶ ಮಾಡಿದ್ದರು. ಅದರಲ್ಲಿ 5ನೇ ಸ್ಥಾನ ಪಡೆದಿದ್ದರು. ಅಂದಹಾಗೆ ದಿವ್ಯಾ ಅವರ ತಾಯಿ ತುಂಬಾ ಚೆನ್ನಾಗಿ ಹಾಡುತ್ತಾರೆ. ಈ ಬಗ್ಗೆ ಬಿಗ್‌ ಬಾಸ್‌ ಮನೆಯಲ್ಲಿ ಅನೇಕ ಬಾರಿ ಅವರೇ ಹೇಳಿಕೊಂಡಿದ್ದರು. ಒಂದೊಮ್ಮೆ ಬಿಗ್‌ ಬಾಸ್‌ ಮನೆಗೆ ವಿಶೇಷ ಅತಿಥಿಯಾಗಿ ದಿವ್ಯಾ ಉರುಡುಗ ತಾಯಿ ಎಂಟ್ರಿ ಕೊಟ್ಟಿದ್ದರು. ಆಗ ಹಾಡನ್ನು ಹಾಡಿದ್ದು ಎಲ್ಲರಿಂದ ಮೆಚ್ಚುಗೆ ಪಡೆದಿದ್ದರು. ಇದನ್ನೂ ಓದಿ: ಈ ಫೋಟೋದಲ್ಲಿರುವ ಪುಟ್ಟ ಕಂದಮ್ಮ ಯಾರೆಂದು ಗುರುತಿಸಬಲ್ಲಿರಾ? ದಿವ್ಯಾ ಉರುಡುಗ ವಯಸ್ಸು 34 ವರ್ಷ. 1990ರಲ್ಲಿ ಜನಿಸಿದ ಶಿವಮೊಗ್ಗದ ತೀರ್ಥಹಳ್ಳಿ ಉರುಡುಗ ಗ್ರಾಮದಲ್ಲಿ ಜನಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.