KANNADA

ಐಟಂ ಸಾಂಗ್ ನಲ್ಲಿ ನಾಗ ಚೈತನ್ಯ ಭಾವಿ ಪತ್ನಿ..ಹೀರೋ ಯಾರು ಗೊತ್ತಾ..?

Nag Chaitanya- Shobhita dhulipala: ಶೋಭಿತಾ ಧೂಳಿಪಾಲ-ನಾಗ ಚೈತನ್ಯ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹಲವು ದಿನಗಳಿಂದ ಬರಲಾರಂಭಿಸಿದ್ದವು.. ಆದರೆ ಅದು ಸತ್ಯವೇ ಆಗಿತ್ತು.. ಅವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದರು.. ಈ ವಿಚಾರವನ್ನು ನಾಗಾರ್ಜುನ ಅಧಿಕೃತವಾಗಿ ಘೋಷಿಸಿದ್ದು, ಅವರ ನಿಶ್ಚಿತಾರ್ಥ ಕೆಲವೇ ಜನರ ಸಮ್ಮುಖದಲ್ಲಿ ನಡೆದಿದೆ ಎನ್ನಲಾಗಿದೆ.. ಈ ನಡುವೆ ಶೋಭಿತಾಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ- ನಿರ್ದೇಶಕ ಬ್ರಹ್ಮಗೆ ಒಲಿದ ಬೆಂಗಳೂರು ಸಂಸ್ಥೆಯ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್ ಪ್ರಶಸ್ತಿ ನಟಿ ಬಾಲಿವುಡ್ ಹೀರೋ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೌದು ಬಾಲಿವುಡ್‌ನಲ್ಲಿ 'ಡಾನ್' ಸಿರೀಸ್‌ಗೆ ಅಪಾರ ಕ್ರೇಜ್ ಇದೆ. ಮೊದಲ ಎರಡು ಭಾಗಗಳಲ್ಲಿ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿದ್ದರೆ, ಮೂರನೇ ಭಾಗದಲ್ಲಿ ರಣವೀರ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಐಟಂ ಸಾಂಗ್‌ಗಾಗಿ ಚಿತ್ರತಂಡ ಶೋಭಿತಾ ಅವರನ್ನು ಸಂಪರ್ಕಿಸಿದೆಯಂತೆ. ಆದ್ರೆ ಈ ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೋ ಇಲ್ಲವೋ ಅನ್ನೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಇದನ್ನೂ ಓದಿ- ಆನ್ ಲೈನ್ ಗೇಮ್ ಕುರಿತಾದ ಚಿತ್ರ ರಮ್ಮಿ ಆಟ ಒಂದು ವೇಳೆ ನಟಿ ಐಟಂ ಸಾಂಗ್ ಮಾಡಿದ್ರೆ... ಅಕ್ಕಿನೇನಿ ಫ್ಯಾಮಿಲಿಗೆ ಭಾರೀ ಶಾಕ್ ಆಗುವುದರಲ್ಲಿ ಸಂಶಯವಿಲ್ಲ. ಈ ಹಿಂದೆ ನಾಗ ಚೈತನ್ಯ ಅವರು ಐಟಂ ಸಾಂಗ್‌ನಿಂದಾಗಿ ಸಮಂತಾ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಇತ್ತು. ಹೀಗಿದ್ದಾಗ ಶೋಭಿತಾ ಐಟಂ ಸಾಂಗ್ ನಲ್ಲಿ ನಟಿಸುತ್ತಾರಾ ಎಂಬ ಅನುಮಾನ ಮೂಡಿದೆ. ಐಟಂ ಸಾಂಗ್ ಬಗ್ಗೆ ಶೋಭಿತಾ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡೋಣ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.