Unlucky players: ಪ್ರತಿಯೊಬ್ಬ ಕ್ರಿಕೆಟಿಗರು ತಮ್ಮ ದೇಶಕ್ಕಾಗಿ ಒಮ್ಮೆ ಕ್ರಿಕೆಟ್ ಆಡಬೇಕು ಮತ್ತು ಸಾಕಷ್ಟು ಖ್ಯಾತಿ ಗಳಿಸಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಭಾರತದ ಪರ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಪಡೆದ ನಾಲ್ವರು ಭಾರತೀಯ ಕ್ರಿಕೆಟಿಗರೂ ಇದ್ದಾರೆ. ಅರ್ರೇ ಯಾರು ಆ ಅದೃಷ್ಟವಂತೂ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಹೌದು, ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಸಿಗಬೇಕು, ತಂಡದ ಪರ ಒಮ್ಮೆಯಾದರೂ ಆಟವಾಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿರುತ್ತದೆ, ಆದರೆ ಆ ನಾಲ್ವರಿಗೆ ಇಂಡಿಯಾ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಕ್ಕಿತ್ತು, ಅದರೆ ಅವರ ದುರದೃಷ್ಟ ಹೇಗಿತ್ತೆಂದರೆ ಅವರ ಮೊದಲ ಪಂದ್ಯವೇ ಅವರಿಗೆ ಕೊನೆಯ ಪಂದ್ಯವಾಗಿ ಪರಿಣಮಿಸಿತ್ತು. ಹಾಗಾದರೆ ಯಾರು ಆ ನಾಲ್ಕು ಕ್ರಿಕೆಟಿಗರು ತಿಳಿಯುವ ಕುತೂಹಲ ನಿಮಗೂ ಇದೆಯಾ? ಈ ಸ್ಟೋರಿ ಓದಿ.. ಕೇವಲ ಒಂದು ಪಂದ್ಯವನ್ನು ಆಡಿದ ನಂತರ ಅವರ ODI ವೃತ್ತಿಜೀವನವನ್ನು ಕೊನೆಗೊಳಿಸಿದ ನಾಲ್ವರು ಭಾರತೀಯ ಕ್ರಿಕೆಟಿಗರು ಇದ್ದಾರೆ. ಬಹುಶಃ ಭಾರತದ ಪರವಾಗಿ ನೀಲಿ ಜೆರ್ಸಿಯಲ್ಲಿ ಹೆಚ್ಚು ಕ್ರಿಕೆಟ್ ಆಡುವುದು ಈ ಕ್ರಿಕೆಟಿಗರ ಹಣೆಬರಹದಲ್ಲಿ ಬರೆದಿರಲಿಲ್ಲ ಎನಿಸುತ್ತೆ. ಇದನ್ನೂ ಓದಿ: ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ? ಪರ್ವೇಜ್ ರಸೂಲ್ 30 ವರ್ಷದ ಪರ್ವೇಜ್ ರಸೂಲ್ ಅವರು 13 ಫೆಬ್ರವರಿ 1989 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಆಲ್ ರೌಂಡರ್. ಈತ ಬಲಗೈ ಬ್ಯಾಟ್ಸ್‌ಮನ್ ಅಷ್ಟೆ ಅಲ್ಲದೆ ಆಫ್ ಬ್ರೇಕ್ ಬೌಲರ್ ಕೂಡ ಹೌದು. 2014ರ ಐಪಿಎಲ್ ಹರಾಜಿನಲ್ಲಿ ಪರ್ವೇಜ್ ರಸೂಲ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ರೂ. 95 ಲಕ್ಷಕ್ಕೆ ಖರೀದಿಸಿದ್ದಾರೆ. ಪರ್ವೇಜ್ ರಸೂಲ್ ಜಮ್ಮು ಮತ್ತು ಕಾಶ್ಮೀರದಿಂದ ಐಪಿಎಲ್‌ನಲ್ಲಿ ಆಡಿದ ಮೊದಲ ಕ್ರಿಕೆಟಿಗ. 15 ಜೂನ್ 2014 ರಂದು ಪರ್ವೇಜ್ ರಸೂಲ್ ಭಾರತ ತಂಡದ ಪರವಾಗಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಆದರೆ ಆತನ ದುರಾದೃಷ್ಟ ಹೇಗಿತ್ತೆಂದರೆ, ಆತ ಆಡಿದ ಮೊದಲನೆ ODI ಪಂದ್ಯವೇ ಆತನ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಪರ್ವೇಜ್ ರಸೂಲ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲವಾದರೂ, ಬೌಲಿಂಗ್‌ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದರು. ಪಂಕಜ್ ಸಿಂಗ್ ಪಂಕಜ್ ಸಿಂಗ್ ತನ್ನ ಮೊದಲ ಏಕದಿನ ಅಂತರಾಷ್ಟ್ರೀಯ ಪಂದ್ಯವನ್ನು 5 ಜೂನ್ 2010 ರಂದು ಶ್ರೀಲಂಕಾ ವಿರುದ್ಧ ಆಡಿದರು. ಆದಾಗ್ಯೂ, ಅವರ ಮೊದಲ ಪಂದ್ಯವೇ ಅವರ ಕೊನೆಯ ಪಂದ್ಯವಾಗಿ ಪರಿನಮಿಸಿತು. ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ 6 ಮೇ 1985 ರಂದು ಜನಿಸಿದ ಪಂಕಜ್ ಸಿಂಗ್ ವೇಗದ ಬೌಲರ್. ಪಂಕಜ್ ಸಿಂಗ್ ಶ್ರೀಲಂಕಾ ವಿರುದ್ಧ 42 ಎಸೆತಗಳಲ್ಲಿ 45 ರನ್ ಗಳಿಸಿದರು. ಆದರೆ, ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದನ್ನೂ ಓದಿ: ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್ ಆದ ಟೀಂ ಇಂಡಿಯಾದ ಆಟಗಾರರಿವರು.. ಫೈಜ್ ಫಜಲ್ ಫೈಜ್ ಫಜಲ್, 7 ಸೆಪ್ಟೆಂಬರ್ 1985 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು, ಈತ ಒಬ್ಬ ಎಡಗೈ ಬ್ಯಾಟ್ಸ್‌ಮೆನ್. ಈ ಹಿಂದೆ ಸೆಂಟ್ರಲ್ ಝೋನ್, ಇಂಡಿಯಾ ರೆಡ್, ಇಂಡಿಯಾ ಅಂಡರ್-19, ರೈಲ್ವೇಸ್, ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಫೈಜ್ ಫಜಲ್ 2015–16ರ ದೇವಧರ್ ಟ್ರೋಫಿಯಲ್ಲಿ, ಭಾರತ ಬಿ ವಿರುದ್ಧದ ಫೈನಲ್‌ನಲ್ಲಿ ಭಾರತ ಎ ಪರ 112 ಎಸೆತಗಳಲ್ಲಿ 100 ರನ್ ಗಳಿಸಿದರು. 2016 ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ODI ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ ಇವರಿಗೆ ಈ ಪಂದ್ಯವೇ ಕೊನಯ ಪಂದ್ಯವಾಗಿತ್ತು. ಬಿ.ಎಸ್. ಚಂದ್ರಶೇಖರ್ ಬಿ.ಎಸ್. ಚಂದ್ರಶೇಖರ್ ಅವರು 58 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 16 ವರ್ಷಗಳ ವೃತ್ತಿಜೀವನದಲ್ಲಿ 29.74 ಸರಾಸರಿಯಲ್ಲಿ 242 ವಿಕೆಟ್ಗಳನ್ನು ಪಡೆದಿದ್ದಾರೆ. ಚಂದ್ರಶೇಖರ್ ಅವರು ತಮ್ಮ ಸಂಪೂರ್ಣ ಟೆಸ್ಟ್ ಮತ್ತು ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ರನ್‌ಗಳಿಗಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಬಗ್ಗೆ ಹೇಳುವುದಾದರೆ, ಚಂದ್ರಶೇಖರ್ 1976ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದಲ್ಲಿ ಆಡಿದ್ದರು. ಇವರ ಈ ಮೊದಲ ODI ಅಂತಾರಾಷ್ಟ್ರೀಯ ಒಂದ್ಯವೇ ಅವರ ಕೊನೆಯ ಪಂದ್ಯವಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.